ಅಂತರಗಂಗೆ – ಅತ್ತ್ಯುನ್ನತ ಸಾಹಸಕ್ಕೆ ಕಟ್ಟಕಡೆಯ ಸ್ಥಳ

ಎಂತಹ ಸಾಹಸ ಪ್ರಿಯರ  ಮನವನ್ನೇ ಆಗಲಿ ಸೆಳೆಯುವ ಶಕ್ತಿಯುಳ್ಳ  ಸ್ಥಳ ಅಂತರಗಂಗೆ.  ಕರ್ನಾಟಕದ ಕೋಲಾರ ಜಿಲ್ಲೆಯ  ಪೂರ್ವದಲ್ಲಿರುವ ಶಿಖರಗಳ ಮೇಲಿರುವ  ಸದಾ ಹರಿವ ಸಣ್ಣ  ಹೊಳೆಯಿಂದ ಅಂತರಗಂಗೆ ಎಂಬ ಹೆಸರು ಬಂದಿದೆ. ಬೃಹತ್ತಾದ ಬಂಡೆಗಳ ರಚನೆಗಳಿಂದ ಸೃಷ್ಟಿಯಾಗಿರುವ ಸಣ್ಣ ಮತ್ತು ದೊಡ್ಡ ಗುಹೆಗಳ ನಡುವೆ ಈ ಝರಿಯೂ ಹರಿಯುತ್ತಾ ಸಾಗುತ್ತದೆ. ಈ ಪರ್ವತ ಶ್ರೇಣಿಯ ಅಡಿಯಲ್ಲಿ ದಟ್ಟವಾದ ಕಾಡನ್ನು ಕಾಣಬಹುದಾಗಿದ್ದು ಇದನ್ನು ಒಮ್ಮೆ ಸುತ್ತಿನೋಡಬಹುದಾಗಿದೆ. ಬೆಟ್ಟದ ತುದಿಗೆ ಸಾಗುತ್ತಿದಂತೆ ಸಸ್ಯ ಸಂಪತ್ತು ಕ್ಷೀಣಿಸುತ್ತದೆ. ತುತ್ತ ತುದಿಯಲ್ಲಿ ಕೇವಲ ಮುಳ್ಳುಗಳಿಂದ ತುಂಬಿಹ ಪೊದೆಗಳನ್ನು ಮಾತ್ರ ಕಾಣಬಹುದು.

 

ಪ್ರವಾಸಿಗರಿಗೆ ಸಾಹಸಕಾರಿ ಆಯ್ಕೆಗಳು

ಅಂತರಗಂಗೆಯ ಚಿಲುಮೆ ಅದರ ಬಂಡೆಗಲ್ಲಿನ ಆಕೃತಿ ಮತ್ತು ಗುಹೆಗಳಲ್ಲಿ ಅಡಗಿದೆ. ಸಾಹಸಕಾರಿ ಮನೋಭಾವವುಳ್ಳವರಿಗೆ ಬೆಟ್ಟ ಹತ್ತುವ ಮತ್ತು ಟ್ರೆಕ್ಕಿಂಗ್ ನಿಂದ  ಅದ್ಭುತ ಅನುಭವವನ್ನು ಸವಿಯಬಹುದು. ಇಲ್ಲಿರುವ ಗುಹೆಗಳೂ ಒಂದು ಬಾರಿ ಅನ್ವೇಷಣೆಗೆ ಸೂಕ್ತವಾಗಿವೆ. ಟ್ರೆಕ್ಕಿಂಗ್ ಪೂರ್ಣಗೊಳಿಸಲು  1 ರಿಂದ ಎರಡು ತಾಸು ಹಿಡಿಯುತ್ತದೆ ಆದರೆ ಕೆಳಗೆ ಮರಳುವಾಗ ಅದು ಬಹಳ ಬೇಗ ಮತ್ತು ಸುಲಭವಾಗಿರುತ್ತದೆ. ರಾಪೇಲ್ಲಿಂಗ್ ಮತ್ತು ಎತ್ತರದ ರೋಪ್ ಟ್ರಾವೆರ್ಸಿಂಗ್  ಇಲ್ಲಿನ ಇತರೆ ಸಾಹಸಕಾರಿ ಚಟುವಟಿಕೆಗಳು.

ಅಂತರಗಂಗೆಗೆ  ಧಾರ್ಮಿಕ ಪ್ರಾಮುಖ್ಯತೆಯೂ ಇದ್ದು ಇಲ್ಲಿಗೆ ಬರುವ ಭಕ್ತಾದಿಗಳು ಹಳೆಯ ದೇವಾಲಯ ಮತ್ತು ವರ್ಷ ಪೂರಾ ಹರಿಯುವ ಹೊಳೆಯನ್ನು ನೋಡಲು ಭೇಟಿ ನೀಡುತ್ತಾರೆ . ಈ ದೇವಾಲಯದ ಭಾಗವಾಗಿರುವ ಕಲ್ಲಿನ ನಂದಿಯ ಬಾಯಲ್ಲಿ ಆ ಸಣ್ಣ ಹೊಳೆಯು ಮರೆಯಾಗುತ್ತದೆ. ಬೆಂಗಳೂರಿನಿಂದ 68 ಕಿ ಮೀ ಗಳಷ್ಟು ದೂರದಲ್ಲಿದ್ದು  ಪ್ರವಾಸಿಗರಿಗೆ ಉತ್ತಮ ರಸ್ತೆ ಸಂಚಾರ ಮತ್ತು ಇತರೆ ಸಂಪರ್ಕದ ಆಯ್ಕೆಗಳನ್ನು ಕಾಣಬಹುದು.

Please Wait while comments are loading...