ಮಾರ್ಚ ಮತ್ತು ಅಕ್ಟೋಬರ್ ನಡುವಿನ ಅವಧಿಯು ಅಂತರಗಂಗೆಗೆ ಭೇಟಿ ನೀಡಲು ಪ್ರಶಸ್ತವಾಗಿದೆ.
(ಮಾರ್ಚ್ ನಿಂದ ಮೇ ): ಅಂತರ ಗಂಗೆಯ ಬೇಸಿಗೆಯು ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ, ಉಷ್ಣಾಂಶದ ಮಟ್ಟ 22 ಡಿಗ್ರಿ ಯಿಂದ 37 ಡಿಗ್ರಿ ಯವರೆಗೂ ಮುಟ್ಟುತ್ತದೆ. ಸಹಿಸಲಾಗದ ಬಿಸಿಲಿನಿಂದಾಗಿ ಅನೇಕ ಪ್ರವಾಸಿಗರು ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ಭೇಟಿನೀಡಲು ಇಷ್ಟಪಡುವುದಿಲ್ಲ.
(ಜೂನ್ ನಿಂದ ನವೆಂಬರ್ ) : ನೈರುತ್ಯ ಮೋಡಗಳ ಪ್ರಭಾವದಿಂದ ಈ ಪ್ರದೇಶವು ಜೂನ್ ನಿಂದ ನವೆಂಬರ್ ವರ್ಷಧಾರೆಯನ್ನು ಕಾಣುತ್ತದೆ. ಮತ್ತೊಂದೆಡೆ ಅಕ್ಟೋಬರ್ ನಿಂದ ನವೆಂಬರ್ ತಿಂಗಳ ಮಧ್ಯ ಈಶಾನ್ಯ ಮೋಡಗಳ ಪ್ರಭಾವದಿಂದ ಮಳೆಯನ್ನು ಕಾಣುತ್ತದೆ. ಮೇ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆಯನ್ನೂ ಕಾಣುತ್ತದೆ. ಹೊರಾಂಗಣದ ಚಟುವಟಿಕೆಗಳನ್ನು ಅನುಭವಿಸಲಾಗದ ಕಾರಣದಿಂದ ಪ್ರವಾಸಿಗರು ಮಳೆಗಾಲದಲ್ಲಿ ಈ ಸ್ಥಳಕ್ಕೆ ಹೆಚ್ಚು ಭೇಟಿ ನೀಡುವುದಿಲ್ಲ.
(ಡಿಸೆಂಬರ್ ನಿಂದ ಫೆಬ್ರವರಿ ) : ಅಂತರಗಂಗೆಯಲ್ಲಿನ ಚಳಿಗಾಲದ ವಾತಾವರಣ ಅತ್ಯಂತ ತಂಪಿನಿಂದ ಕೂಡಿರುತ್ತದೆ. ಉಷ್ಣಾಂಶದ ಗರಿಷ್ಠ ಮಟ್ಟ 32 ಡಿಗ್ರಿ ಮತ್ತು ಕನಿಷ್ಠ ಮಟ್ಟ 19 ಡಿಗ್ರಿ ದಾಖಲಾಗಿದೆ.