ಸಾವನದುರ್ಗ - ಸಾಹಸದ ಬೆನ್ನೇರಿ

ಸಾವನದುರ್ಗ ದಲ್ಲಿನ ಎರಡು ನಿಷಿದ್ಧ ಬೆಟ್ಟಗಳು, ದೇವಸ್ಥಾನಗಳು ಹಾಗು ಪ್ರಕೃತಿ ಸೌಂದರ್ಯ ಆಕರ್ಷಣೀಯವಾಗಿದೆ. ಬೆಂಗಳೂರಿಂದ ಇದು 33 ಕಿಮೀ ದೂರವಿದ್ದು  ಭಾರತದ ಇತರೆ ಯಾವುದೇ ಭಾಗದಿಂದ ಸುಲಭವಾಗಿ  ತಲುಪಬಹುದು.

 

ಬೆಟ್ಟಗಳು ಹಾಗು ಕೋಟೆಗಳು

ಕರಿಗುಡ್ಡ ಹಾಗು ಬಿಳಿಗುಡ್ಡಗಳಿಂದಾಗಿ  ಸಾವನದುರ್ಗ  ಹೆಚ್ಚು  ಪ್ರಖ್ಯಾತಿ ಹೊಂದಿದೆ . ಇದರ  ಮೂಲಾರ್ಥ ‘ಬ್ಲ್ಯಾಕ್  ಹಿಲ್ಲ್’ ಹಾಗು  ‘ವೈಟ್ ಹಿಲ್ಲ್  ಎಂದು.  ಕರಿಗುಡ್ಡ ಹಾಗು ಬಿಳಿಗುಡ್ಡಗಳು ಡೆಕ್ಕನ್ ತಪ್ಪಲಿಗಿಂತ ಮೇಲೆ  1226 ಮೀಟರ್ ಗಳಷ್ಟು ಎತ್ತರವಿದೆ. ಇವು ಬೃಹದಾಕಾರದ ಬಂಡೆಗಳು,  ಗ್ರಾನೈಟ್  ಹಾಗು ಲಾಟೆರೈಟ್ ಗಳಿಂದ  ನಿರ್ಮಿತವಾಗಿದ್ದು ಏರಲು ಕಷ್ಟವಾಗಿದೆ. ಬೆಟ್ಟದ ತಳದಿಂದ ತುದಿಯವರೆಗಿನ ಪ್ರಯಾಣ ಹಲವು ಬಂಡೆ ಮುರುಕುಗಳು ಮತ್ತು ಬಾಗುವಿಕೆಯಿಂದ ಕಷ್ಟಕರವಾಗಿರುತ್ತದೆ. ಹಾಗಿದ್ದರೂ  ಉತ್ಸುಕರಿಗೆ  ಇದು ಪರಿಶ್ರಮಕ್ಕೆ ತಕ್ಕ ಫಲವಾಗುತ್ತದೆ. ಪುರಾತನ ಕೋಟೆಯ ಅವಶೇಷಗಳು ಬೆಟ್ಟದ ತುದಿಯಲ್ಲಿ ಕಿರೀಟವಾಗಿ ಅಲಂಕರಿಸುತ್ತವೆ.

ಬೆಟ್ಟಗಳನ್ನು ಹತ್ತುವ  ಆಸಕ್ತಿ ಹೊಂದಿರದವರು ವೀರಭದ್ರೇಶ್ವರ ಸ್ವಾಮಿ ಹಾಗು ನರಸಿಂಹ ಸ್ವಾಮಿ ದೇವಸ್ಥಾನಗಳನ್ನು ಅನ್ವೇಷಿಸಬಹುದಾಗಿದೆ (ಸಂದರ್ಶಿಸಬಹುದಾಗಿದೆ). ಬೆಟ್ಟದ ಕೆಳಗಿರುವ ಗುಡ್ಡಗಳ ಮೇಲೆ ಈ ದೇವಸ್ಥಾನಗಳು ನೆಲೆಸಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿದ್ದು ವಾಯುವಿಹಾರಕ್ಕೆ ಹೊರಟರೆ ಅಪರೂಪದ ಮರಗಳು ಅಲ್ಲದೆ ಹಳದಿ-ಗಂಟಲಿನ ಬುಲ್ ಬುಲ್  ಹಕ್ಕಿಗಳನ್ನು ಕಾಣಬಹುದು. ಈ ಸ್ಥಳದಲ್ಲಿ ಹಲವು ಕುತೂಹಲಕಾರಿ ಹಿನ್ನೆಲೆಯಿರುವ ಬಹಳಷ್ಟು ಚಿತಾಭಸ್ಮದ ಪಾತ್ರೆಗಳನ್ನು ಕಾಣಬಹುದಾಗಿದೆ.

ಬೆಂಗಳೂರಿಂದ ಮಾಗಡಿಗೆ ಹೋಗುವ ಬಸ್ಸುಗಳು ಸಾವನದುರ್ಗಕ್ಕೆ ಬಹಳ ಹತ್ತಿರದಲ್ಲಿ ಸಂಚರಿಸುತ್ತವೆ. ಅಲ್ಲದೆ ತುಂಬಾ ಬಸ್ಸುಗಳು ಲಭ್ಯವಿದ್ದು ಅಲ್ಲಿಗೆ ಎರಡು ತಾಸಿನ ಪ್ರಯಾಣ, ಅಲ್ಲಿಂದ ಸಾವನದುರ್ಗಕ್ಕೆ ಹೋಗಲು ಸ್ಥಳೀಯ ಬಸ್ಸುಗಳು ಹಾಗು ಆಟೋಗಳ ಸೌಲಭ್ಯವಿದೆ.

Please Wait while comments are loading...