Search
  • Follow NativePlanet
Share
ಮುಖಪುಟ » ಸ್ಥಳಗಳು» ಮಲೆ ಮಹದೇಶ್ವರ ಬೆಟ್ಟ

ಮಲೆ ಮಹದೇಶ್ವರ ಬೆಟ್ಟ – ಮಹೇಶ್ವರನನ್ನು ಭೇಟಿಯಾಗಲೊಂದು ಯಾತ್ರೆ.

6

ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೊರಟರೆ ಅಲ್ಲಿನ ಸುಂದರ ಮಹದೇಶ್ವರನ ದೇವಾಲಯವನ್ನು ಪ್ರಮುಖವಾಗಿ ನೋಡಬೇಕು. ಆದರು ಆ ದೇಗುಲದ ಸುತ್ತ- ಮುತ್ತಲಿನ ಪ್ರದೇಶವನ್ನು ಪ್ರಕೃತಿ ಪ್ರೇಮಿಗಳಾದವರು ನೋಡಲೇಬೇಕು.  ಮಲೆ ಮಹದೇಶ್ವರನ ಭವ್ಯ ಮಂದಿರವು ದಟ್ಟ ಕಾಡಿನ ಸಮೀಪದಲ್ಲಿ ಇದೆ. ಇಲ್ಲಿಗೆ ನೀವು ಪ್ರವಾಸ ಹೊರಡುವುದರಿಂದ ನಿಮ್ಮ ದೇಹ ಮತ್ತು ಮನಸ್ಸಿಗೆ ನವಚೇತನವನ್ನು ಒದಗಿಸಬಹುದು.

 

ಕಾಡಿನಲ್ಲಿನ ಗುಡಿ.

ಮಲೆಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿದ್ದು, ಮೈಸೂರು ನಗರದಿಂದ 140 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಬೆಟ್ಟಗಳು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿವೆ.

ಮಹದೇಶ್ವರ ದೇವಾಲಯವು ಸ್ವತಃ ಬೆಟ್ಟಗಳಿಂದ ಮತ್ತು ಕಾಡುಗಳಿಂದ ಸುತ್ತುವರಿದ  ನಯನ ಮನೋಹರ ಪರಿಸರದಲ್ಲಿ ನೆಲೆಗೊಂಡಿದೆ. ಸ್ಥಳೀಯರ ಪ್ರಕಾರ ಮಹದೇಶ್ವರನು ಶಿವನ ಅವತಾರವೆಂದು, ಶಿವನು ಇಲ್ಲಿ ತಪಸ್ಸು ಆಚರಿಸಿದನೆಂದು ಹಾಗು ಇಂದಿಗು ಇಲ್ಲಿ ಶಿವಲಿಂಗದ ರೂಪದಲ್ಲಿ ನೆಲೆಸಿರುವನೆಂದು ದಂತಕಥೆಗಳು ಚಾಲ್ತಿಯಲ್ಲಿವೆ.

ಈ ದೇವಾಲಯದ ಇನ್ನೊಂದು ಅದ್ಭುತವೆಂದರೆ ಇಲ್ಲಿನ ಅವ್ಯಾಹತವಾಗಿರುವ ಸುರುಳಿ, ಇದರ ಮೂಲ ಭೂಮಿಯ ತಳದಲ್ಲಿದ್ದು, ಅದನ್ನು ಇಂದಿಗು ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಮಲೆ ಮಹದೇಶ್ವರ ಬೆಟ್ಟಗಳು ಸಂಪೂರ್ಣವಾಗಿ ಗಂಧದ ಮರ ಮತ್ತು ಬಿದಿರಿನಿಂದ ಆವೃತ್ತವಾಗಿದೆ. ಇಲ್ಲಿನ ಕಾಡುಗಳಲ್ಲಿ ಆನೆಗಳು, ಚಿಕ್ಕೆಯುಳ್ಳ ಜಿಂಕೆಗಳು ಮತ್ತು ಅಪರೂಪಕ್ಕೊಮ್ಮೆ ಕಾಣಿಸುವ ಚಿರತೆಗಳು ಸೇರಿದಂತೆ ಇನ್ನಿತರ ವನ್ಯಮೃಗಗಳನ್ನು ನೀವು ಇಲ್ಲಿ ಕಾಣಬಹುದು. ಇಲ್ಲಿನ ಕೆಲವು ಕಾಡುಗಳು ಹಿಂದೆ ಕುಖ್ಯಾತ ಕಾಡುಗಳ್ಳ ಮತ್ತು ನರಹಂತಕ ವೀರಪ್ಪನ್ ಅಡಗು ತಾಣಗಳಾಗಿದ್ದವು. ಮಲೆಮಹದೇಶ್ವರ ಬೆಟ್ಟಕ್ಕೆ ಮೈಸೂರು ಮತ್ತು ಬೆಂಗಳೂರಿನಿಂದ ಬಸ್ ವ್ಯವಸ್ಥೆ ಇದೆ.

ಮಲೆ ಮಹದೇಶ್ವರ ಬೆಟ್ಟ ಪ್ರಸಿದ್ಧವಾಗಿದೆ

ಮಲೆ ಮಹದೇಶ್ವರ ಬೆಟ್ಟ ಹವಾಮಾನ

ಉತ್ತಮ ಸಮಯ ಮಲೆ ಮಹದೇಶ್ವರ ಬೆಟ್ಟ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಲೆ ಮಹದೇಶ್ವರ ಬೆಟ್ಟ

  • ರಸ್ತೆಯ ಮೂಲಕ
    ಮೈಸೂರಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ನಿರಂತರ ಬಸ್ ವ್ಯವಸ್ಥೆ ಇದೆ. ಸರ್ಕಾರಿ ಬಸ್ಸುಗಳಲ್ಲಿ ಸ್ವಲ್ಪ ಜನಸಂದಣಿ ಇದ್ದರು, ಇದು ಮಿತವ್ಯಯಿ ಮತ್ತು ಸುರಕ್ಷಿತವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಲೆಮಹದೇಶ್ವರ ಬೆಟ್ಟಕ್ಕೆ ಅತಿ ಸಮೀಪದ ರೈಲ್ವೆ ಜಂಕ್ಷನ್ ಮೈಸೂರಿನಲ್ಲಿದ್ದು, ಅದು ಇಲ್ಲಿಂದ 130 ಕಿ.ಮೀ ದೂರದಲ್ಲಿ ಇದೆ. ಮೈಸೂರಿನಿಂದ ದೇಶದ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಇದೆ. ಪ್ರವಾಸಿಗರು ಈ ನಿಲ್ದಾಣದಿಂದ ಟ್ಯಾಕ್ಸಿ, ಬಾಡಿಗೆ ವಾಹನ ಮತ್ತು ಬಸ್ಸುಗಳ ಮೂಲಕ ಮಲೆಮಹದೇಶ್ವರ ಬೆಟ್ಟ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಲೆಮಹದೇಶ್ವರ ಬೆಟ್ಟಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ದೇಶಿ ಮತ್ತು ವಿದೇಶಿ ಯಾತ್ರಿಕರಿಗೆ ವಿಮಾನಯಾನ ಸೌಲಭ್ಯವನ್ನು ಒದಗಿಸುತ್ತದೆ. ಇದು ಇಲ್ಲಿಂದ 173 ಕಿ.ಮೀ, ದೂರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಂತಹ ನಗರಗಳೊಂದಿಗೆ ಉತ್ತಮ ವಿಮಾನಯಾನ ಸಂಪರ್ಕವನ್ನು ಹೊಂದಿದೆ. ಅಲ್ಲದೆ ಈ ನಿಲ್ದಾಣವು ಇನ್ನಿತರ ಅಂತರ ದೇಶಿಯ ವಿಮಾನಗಳ ಸೇವೆಯನ್ನು ಒದಗಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun