Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲೆ ಮಹದೇಶ್ವರ ಬೆಟ್ಟ » ಆಕರ್ಷಣೆಗಳು » ಮಹದೇಶ್ವರ ದೇವಾಲಯ

ಮಹದೇಶ್ವರ ದೇವಾಲಯ, ಮಲೆ ಮಹದೇಶ್ವರ ಬೆಟ್ಟ

2

ಮಲೆಮಹದೇಶ್ವರ ಬೆಟ್ಟಕ್ಕೆ ಪ್ರವಾಸ ಹೊರಟರೆ ತಪ್ಪದೆ ಅಲ್ಲಿನ ಮಹದೇಶ್ವರ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು  ಮಹದೇಶ್ವರನಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಚಾಮರಾಜನಗರ ಜಿಲ್ಲೆಯ ದಟ್ಟ ಕಾಡಿನ ನಡುವೆ ನೆಲೆಗೊಂಡಿದೆ. ದಟ್ಟ ಕಾಡಿನ ನಡುವೆ ಇದ್ದರು ಈ ದೇವಾಲಯ ಭಕ್ತಾದಿಗಳನ್ನು ಮತ್ತು ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಮಹದೇಶ್ವರ ದೇವಾಲಯವು ಪೂರ್ವ ಘಟ್ಟಗಳಲ್ಲಿನ 77 ಬೆಟ್ಟಗಳಿಂದ ಸುತ್ತುವರೆದಿದೆ. ಪುರಾಣಗಳ ಪ್ರಕಾರ ಮಹದೇಶ್ವರನು ಶಿವನ ಅವತಾರಗಳಲ್ಲಿ ಒಂದು. ಇಲ್ಲಿನ ಸ್ಥಳೀಯರು ಮಲೆಮಹದೇಶ್ವರ ಸ್ವಾಮಿಯ ಪವಾಡಗಳನ್ನು ಕುರಿತು ಜನಪದ ಶೈಲಿಯಲ್ಲಿ ಹಾಡಿ ಹೊಗಳುತ್ತಾರೆ.ಪ್ರಸಿದ್ಧ ಜಾನಪದ ಗೀತೆಯ ಪ್ರಕಾರ, ಮಲೆಮಹದೇಶ್ವರ ಸ್ವಾಮಿಯು ಹುಲಿಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡು ಈ ಬೆಟ್ಟದಲ್ಲಿ ಸಂಚರಿಸುತ್ತ ಹಲವು ಪವಾಡಗಳನ್ನು ಮಾಡಿ ಭಕ್ತಜನರನ್ನು ಮತ್ತು  ಋಷಿಗಳನ್ನು ರಕ್ಷಿಸಿದನಂತೆ.ಶ್ರೀ ಮಲೆಮಹದೇಶ್ವರ ಸ್ವಾಮಿಯು ಇಲ್ಲಿನ ಕಾಡುಗಳಲ್ಲಿರುವ ಕಾಡುಕುರುಬರು, ಜೇನುಕುರುಬರು ಮತ್ತು ಇನ್ನಿತರ ಬುಡಕಟ್ಟು ಜನರ ಕುಲದೈವವೆಂದು ಪೂಜಿಸಲ್ಪಡುತ್ತಿದೆ. ಐತಿಹಾಸಿಕ ಮಾಹಿತಿಗಳ ಪ್ರಕಾರ ಶ್ರೀ ಮಹದೇಶ್ವರ ಸ್ವಾಮಿಯು 15ನೇ ಶತಮಾನದಲ್ಲಿ ಜೀವಿಸಿದ್ದರಂತೆ, ಅಲ್ಲದೆ ಇವರು ಹರದನಹಳ್ಳಿ ಮಠದ ಮೂರನೆ ಗುರುಗಳಾಗಿದ್ದರಂತೆ. ಪ್ರವಾಸಿಗರು ಈ ದೇವಾಲಯ ತಲುಪುವ ಮೊದಲು ’ಅಂತರಗಂಗೆ’ ತೊರೆಯಲ್ಲಿ ಪವಿತ್ರ ಸ್ನಾನ ಮಾಡಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri