Search
 • Follow NativePlanet
Share
ಮುಖಪುಟ » ಸ್ಥಳಗಳು» ನೃತ್ಯಗ್ರಾಮ

ನೃತ್ಯಗ್ರಾಮ -  ನಿಮ್ಮ ರಾತ್ರಿಗಳನ್ನು ನರ್ತಿಸುತ ಕಳೆಯಿರಿ.

10

ನೃತ್ಯಗ್ರಾಮ ತನ್ನ ಮನಮೋಹಕ ನೋಟದಿಂದಾಗಿ ಮತ್ತು ವಿಶಾಲವಾದ ಪ್ರದೇಶದಿಂದಾಗಿ ನೋಡಲು ಯೋಗ್ಯವಾದ ಸ್ಥಳವಾಗಿದೆ. ಈ ಅನುಪಮವಾದ ನಾಟ್ಯಕ್ಕೆ ಮೀಸಲಾದ ಗ್ರಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಘಟ್ಟದಲ್ಲಿ ನೆಲೆಗೊಂಡಿದೆ. ಇದು ಬೆಂಗಳೂರಿನಿಂದ ಕೇವಲ 35 ಕಿ.ಮೀ ದೂರದಲ್ಲಿದ್ದು ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದು.

 

ಈ ಗ್ರಾಮದ ಹಿಂದಿನ ವಾಸ್ತವಾಂಶಗಳು

ಈ ಗ್ರಾಮವು ಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿಯಾದ ಪ್ರೊತಿಮಾ ಬೇಡಿಯ ಪರಿಕಲ್ಪನೆಯಾಗಿದೆ.  ಆಕೆಯು ನಾಟ್ಯಕ್ಕಾಗಿಯೇ ಮೀಸಲಾದ ಒಂದು ಹಳೆಯ ಗುರುಕುಲ ಮಾದರಿಯ ಗ್ರಾಮವನ್ನು ನಿರ್ಮಿಸಬೇಕು ಎಂಬ ಆಲೋಚನೆಯೆ ಸಾಕಾರವಾಗಿ ಈ ಗ್ರಾಮ ಜನ್ಮ ತಳೆಯಿತು. ಈ ನೃತ್ಯಗ್ರಾಮದಲ್ಲಿ ನೃತ್ಯತಂಡಗಳ ಮೇಳಗಳಿಗೆ ಪ್ರಸಿದ್ಧವಾಗಿದೆ. ಆದಾಗಿಯು ಇಲ್ಲಿನ ಪ್ರಾಕೃತಿಕ ವೈಭವ ಮತ್ತು ನೈಸರ್ಗಿಕ ಪರಿಕರಗಳ ಬಳಸಿ ನಿರ್ಮಿಸಲಾಗಿರುವ  ಗ್ರಾಮದ ಸೌಂದರ್ಯವು ಮರೆಯಲಾಗದ ಅನುಭವ ಒದಗಿಸುತ್ತದೆ.

ಈ ಗ್ರಾಮದ ವಿನ್ಯಾಸವನ್ನು ಸುಪ್ರಸಿದ್ಧ ವಾಸ್ತುಶಿಲ್ಪಿಯಾದ ಗೆರಾರ್ಡ್ ಡ ಕ್ಯುಂಚರವರು ರಚಿಸಿದರು. ತೆರೆದ ಖಾಲಿ ಜಾಗಗಳು, ಹಸಿರು ಮರಗಳು ಮತ್ತು ಮಣ್ಣಿನ ಮನೆಗಳು ಹಾಗು ಕಟ್ಟಡಗಳು ನೃತ್ಯಗ್ರಾಮಕ್ಕೆ ಒಂದು ದೇಸಿ ಕಳೆಯನ್ನು ಒದಗಿಸಿವೆ. ವಸಂತ ಋತುವಿನ ಆಗಮನವನ್ನು ಸ್ವಾಗತಿಸಲು ಇಲ್ಲಿ ಜರುಗುವ ವಸಂತ ಹಬ್ಬ ಉತ್ಸವದ ಸಮಯ ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದಂತಹ ವೇಳೆಯಾಗಿದೆ.ಆಗ ಇಲ್ಲಿನ ಬಯಲು ರಂಗ ಮಂದಿರದಲ್ಲಿ ವಿಶ್ವದ ನಾನಾ ಮೂಲೆಗಳಿಂದ ಆಗಮಿಸಿದಂತಹ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡುತ್ತಾರೆ.

ನೃತ್ಯಗ್ರಾಮಕ್ಕೆ ಭೇಟಿ ನೀಡಿದಾಗ ನಿಮಗೆ ಅಲ್ಲಿನ ಹೆಸರುಘಟ್ಟ ಕೆರೆ ನೋಡುವ ಅವಕಾಶ ಸಿಗುತ್ತದೆ. ಇದು ನೃತ್ಯಗ್ರಾಮದಿಂದ ಐದು ಕಿಲೋ ಮೀಟರ್ ದೂರದಲ್ಲಿದೆ. ಈ ಕೆರೆಯು ಮಾನವ ನಿರ್ಮಿತ ಕೆರೆಯಾಗಿದ್ದು 1124 ಎಕರೆಯಷ್ಟು ವ್ಯಾಪಿಸಿದೆ. ಇದನ್ನು 1894ರಲ್ಲಿ ಕಟ್ಟಲಾಯಿತು.

ನೃತ್ಯಗ್ರಾಮವು ಭಾನುವಾರ ಮತ್ತು ಸೋಮವಾರಗಳಂದು ಮುಚ್ಚಲ್ಪಟ್ಟಿರುತ್ತದೆ.

ನೃತ್ಯಗ್ರಾಮ ಪ್ರಸಿದ್ಧವಾಗಿದೆ

ನೃತ್ಯಗ್ರಾಮ ಹವಾಮಾನ

ನೃತ್ಯಗ್ರಾಮ
38oC / 101oF
 • Partly cloudy
 • Wind: E 12 km/h

ಉತ್ತಮ ಸಮಯ ನೃತ್ಯಗ್ರಾಮ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನೃತ್ಯಗ್ರಾಮ

 • ರಸ್ತೆಯ ಮೂಲಕ
  ಬೆಂಗಳೂರಿನಿಂದ ನೃತ್ಯಗ್ರಾಮಕ್ಕೆ ಬಸ್ಸುಗಳ ಸೌಲಭ್ಯವುಂಟು. ಪ್ರವಾಸಿಗರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆ ಎಸ್ ಆರ್ ಟಿ ಸಿ) ಮೂಲಕ ನೃತ್ಯಗ್ರಾಮಕ್ಕೆ ತಲುಪಬಹುದು. ಇವು ನಿಯಮಿತವಾಗಿ ನೃತ್ಯಗ್ರಾಮಕ್ಕೆ ಓಡಾಟ ನಡೆಸುತ್ತವೆ. ಮುಂಗಡ ಪಾವತಿ ಟ್ಯಾಕ್ಸಿ( ಪ್ರಿ ಪೇಯ್ಡ್ ಟ್ಯಾಕ್ಸಿ) ಮೂಲಕವು ನೀವು ನೃತ್ಯಗ್ರಾಮ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬೆಂಗಳುರು ನಗರ ರೈಲು ನಿಲ್ದಾಣವು ನೃತ್ಯಗ್ರಾಮದ ಹತ್ತಿರದ ರೈಲು ನಿಲ್ದಾಣವಾಗಿದ್ದು, ಅದು ಇಲ್ಲಿಂದ 30 ಕಿ.ಮೀ ದೂರದಲ್ಲಿದೆ. ಇದು ದೆಹಲಿ, ಚೆನ್ನೈ, ಕೊಲ್ಕತ್ತಾ ಮತ್ತು ಮುಂಬೈನಂತಹ ಮಹಾನಗರಗಳಿಂದ ಹಾಗು ದೇಶದ ಇತರ ನಗರಗಳಿಂದ ಉತ್ತಮ ರೈಲು ಸಂಪರ್ಕ ಹೊಂದಿದೆ. ಇಲ್ಲಿನ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಪ್ರವಾಸಿಗರು ಟ್ಯಾಕ್ಸಿ ಮತ್ತು ಬಾಡಿಗೆ ವಾಹನಗಳಲ್ಲಿ ನೃತ್ಯಗ್ರಾಮ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶಿಯ ಮತ್ತು ವಿದೇಶಿಯ ಪ್ರವಾಸಿಗರಿಗೆ ವಿಮಾನದ ಸೌಕರ್ಯಗಳನ್ನು ಒದಗಿಸುತ್ತದೆ. ಇದು ನೃತ್ಯಗ್ರಾಮಕ್ಕೆ ಸಮೀಪದಲ್ಲೆ ಅಂದರೆ ಕೇವಲ 30 ಕಿ.ಮೀ ದೂರದಲ್ಲಿದೆ. ಅಲ್ಲದೆ ಯೂರೋಪ್, ಏಶಿಯಾ, ಅಮೆರಿಕಾ ಮತ್ತು ಮಧ್ಯ ಪ್ರಾಚ್ಯದಂತಹ ರಾಷ್ಟ್ರಗಳ ಪ್ರವಾಸಿಗರಿಗೆ ಉತ್ತಮ ವಿಮಾನ ನಿಲ್ದಾಣವಾಗಿ ಕಾರ್ಯ ನಿರ್ವಹಿಸುತ್ತಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Apr,Tue
Return On
24 Apr,Wed
 • Today
  Nrityagram
  38 OC
  101 OF
  UV Index: 9
  Partly cloudy
 • Tomorrow
  Nrityagram
  31 OC
  88 OF
  UV Index: 9
  Partly cloudy
 • Day After
  Nrityagram
  32 OC
  89 OF
  UV Index: 9
  Partly cloudy