Search
  • Follow NativePlanet
Share
ಮುಖಪುಟ » ಸ್ಥಳಗಳು » ನೃತ್ಯಗ್ರಾಮ » ಆಕರ್ಷಣೆಗಳು » ವಿವಿಧ ಗುರುಕುಲಗಳು

ವಿವಿಧ ಗುರುಕುಲಗಳು, ನೃತ್ಯಗ್ರಾಮ

1

ನೃತ್ಯಗ್ರಾಮಕ್ಕೆ ಭೇಟಿಕೊಡುವ  ಪ್ರತಿ ಪ್ರವಾಸಿಗರು ಇಲ್ಲಿನ ವಿವಿಧ ಗುರುಕುಲಗಳನ್ನು ಸಂದರ್ಶಿಸುತ್ತಾರೆ. ಇದು ದೇಶದಲ್ಲಿಯೇ ಈಗಿನ ಸಮಕಾಲೀನ ಯುಗದ ಪ್ರಥಮ ಗುರುಕುಲವೆಂದು ಪರಿಗಣಿಸಲ್ಪಟ್ಟಿದೆ. ಇದು ಪ್ರಖ್ಯಾತ ಒಡಿಸ್ಸಿ ನೃತ್ಯಗಾರ್ತಿಯಾದ ಪ್ರೊತಿಮಾ ಬೇಡಿಯವರಿಂದ 1990ರಲ್ಲಿ ಸ್ಥಾಪನೆಯಾಯಿತು. ಈಗ ಇದು ಕರ್ನಾಟಕದ ಪ್ರಮುಖ ಕಲೆ ಮತ್ತು ಸಾಂಸ್ಕೃತಿಕ ತಾಣಗಳಲ್ಲಿ ಒಂದಾಗಿದೆ. ನೃತ್ಯಗ್ರಾಮವು ಪ್ರಾಕೃತಿಕ ನೆಲೆಯ ನಡುವೆ ಇರುವ ಪ್ರತ್ಯೇಕವಾದ ಶಾಸ್ತ್ರೀಯ ನೃತ್ಯಗಾರ ಒಂದು ಸಂಘವಾಗಿದೆ. ಈ ಸ್ಥಳವು ಇಲ್ಲಿನ ಅತ್ಯುತ್ತಮ ಒಡಿಸ್ಸಿ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ತಂಡಗಳಿಗಾಗಿ ಪ್ರಖ್ಯಾತವಾಗಿದೆ.ನೃತ್ಯಗ್ರಾಮವು ಹಲವಾರು ಮಣ್ಣಿನ ಮನೆಗಳನ್ನು, ಒಂದು ಸುಂದರವಾದ ದೇವಾಲಯವನ್ನು, ಒಂದು ಯೋಗ ಕೇಂದ್ರ ಮತ್ತು ಹಲವು ಅತಿಥಿ ಕುಟೀರಗಳನ್ನು ಹೊಂದಿದೆ. ಇಲ್ಲಿಗೆ ಭೇಟಿಕೊಡುವ ಪ್ರತಿ ಪ್ರವಾಸಿಗನು ಇಲ್ಲಿನ ಒಡಿಸ್ಸಿ ಗುರುಕುಲ, ಮೋಹಿನಿಯಾಟ್ಟಂ ಗುರುಕುಲ ಮತ್ತು ಕಥಕ್ ಗುರುಕುಲದಂತಹ ಗುರುಕುಲಗಳಿಗೆ ಭೇಟಿ ನೀಡದೆ ಹೋಗಬಾರದು. ಇವುಗಳನ್ನು ಹೊರತುಪಡಿಸಿ ಈ ಗುರುಕುಲಗಳು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕುಚಿಪುಡಿ, ಕಥಕ್ಕಳಿ ಮತ್ತು ಮಣಿಪುರಿ ಪ್ರಕಾರಗಳಿಗೆ ತರಬೇತಿ ನೀಡುತ್ತವೆ. ಈ ಗುರುಕುಲದಲ್ಲಿ ಪ್ರತಿದಿನ ಎಂಟು ಅವಧಿಗಳಿದ್ದು, ವಾರದಲ್ಲಿ ಆರು ದಿನ ತರಬೇತಿ ನೀಡಲಾಗುತ್ತದೆ. ಅಲ್ಲದೆ ಇವು ಪುರಾತನ ’ಗುರು – ಶಿಷ್ಯ’ ಪರಂಪರೆಯನ್ನು ಪಾಲಿಸುತ್ತವೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri