ದುಬಾರೆ - ಆನೆಗಳ ಭೇಟಿಗೊಂದು ಅವಕಾಶ

ಕರ್ನಾಟಕ ರಾಜ್ಯದಲ್ಲಿರುವ ದುಬಾರೆ ದಟ್ಟವಾದ ಕಾಡುಗಳಿಂದೊಡಗೂಡಿದ ಸುಂದರ ತಾಣ. ದುಬಾರೆ ಇಲ್ಲಿರುವ ಆನೆ ತರಬೇತಿ ಶಾಲೆಯಿಂದ ವಿಶ್ವಪ್ರಸಿದ್ಧಿ ಹೊಂದಿದೆ. ಕೂರ್ಗ ಜಿಲ್ಲೆಯ ಬಳಿ ಇರುವ ದುಬಾರೆ ದಟ್ಟಾರಣ್ಯ ಪ್ರದೇಶವು ಕಾವೇರಿ ನದಿ ದಂಡೆಯಲ್ಲಿದೆ. ಇಲ್ಲಿ ಮೈಸೂರು ಮಹಾರಾಜರ ಕಾಲದಿಂದಲೂ ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಇಲ್ಲಿ ಆನೆಗಳ ತರಬೇತಿಗೆಂದೇ ವಿಶೇಷವಾದ ಸಕಲ ಸೌಕರ್ಯಗಳನ್ನು ಮಾಡಲಾಗಿದೆ.  ಇಲ್ಲಿ ತರಬೇತಿ ಪಡೆದುಕೊಂಡ ಆನೆಗಳು ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಜಂಬೂ ಸವಾರಿ ಉತ್ಸವದಲ್ಲಿ ಭಾಗವಹಿಸುತ್ತವೆ ಎನ್ನುವುದು ದುಬಾರೆಯ ವಿಶೇಷ.

 

ದುಬಾರೆಅಯಲ್ಲಿಯ ವನ್ಯ ಜೀವನ

ಆನೆಗಳೊಂದಿಗೆ ದುಬಾರೆ ಕಾಡಿನಲ್ಲಿ ಚಿರತೆ, ಸಂಬಾರ, ಜಿಂಕೆ, ಕಾಡು ನಾಯಿ ಮತ್ತಿತರ ಪ್ರಾಣಿಗಳನ್ನು ಕಾಣಬಹುದು. ಇಲ್ಲಿ ಕಾಡಾನೆಗಳನ್ನು ಪಳಗಿಸಿ ಅವುಗಳಿಂದ ಕೆಲಸ ಮಾಡಿಸುವುದನ್ನು ಪ್ರವಾಸಿಗರು ನೋಡಬಹುದು. ಈಗ ಅರಣ್ಯ ಇಲಾಖೆ ಮತ್ತು ಜಂಗಲ್ ಲಾಡ್ಜ್, ರೆಸಾರ್ಟ್ ಗಳು ತಮ್ಮ ತಮ್ಮ ಸಹಯೋಗದೊಂದಿಗೆ ಆನೆ ತರಬೇತಿ ಶಿಬಿರಕ್ಕೆ ಭೇಟಿ ನೀಡುವ ಹಲವಾರು ಪ್ರವಾಸಿಗರಿಗೆ ಅನೇಕ ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತಿದ್ದಾರೆ.

ಇಲ್ಲಿರುವ ಆನೆ ತರಬೇತಿ ಶಾಲೆಯಲ್ಲಿ ಪ್ರವಾಸಿಗರು ಆನೆಗಳನ್ನು ಮುಟ್ಟುತ್ತ ಫೋಟೋ ತೆಗೆಯಿಸಿಕೊಳ್ಳಬಹುದು ಅಲ್ಲದೇ ಅವುಗಳಿಗೆ ಆಹಾರ ತಿನಿಸುತ್ತ ತರಬೇತಿ ಕೊಡುವ ವಿವಿಧ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರವಾಸಿಗರಿಗೆಂದೇ ಅರಣ್ಯ ಇಲಾಖೆಯು ಇಲ್ಲಿ ತರಬೇತಿ ಪಡೆದ ಆನೆಗಳಿಂದ ಜಂಗಲ್ ಸಫಾರಿ ವ್ಯವಸ್ಥೆ ಮಾಡಿದೆ. ಇಲ್ಲಿನ ಎತ್ತರದ ಬೆಟ್ಟ ಗುಡ್ಡಗಳಲ್ಲಿ ಸಾಹಸ ಕ್ರೀಡೆಗಳಾದ ಚಾರಣ, ನದಿಯಲ್ಲಿ ತೆಪ್ಪದಲ್ಲಿ ಪಯಣಿಸುತ್ತ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಸವಿಯಬಹುದು. ಚಾರಣಪ್ರಿಯರಿಗೆ ಇಲ್ಲಿನ ಕಾಡಿನಲ್ಲಿ ಹಲವಾರು ಅವಕಾಶಗಳಿವೆ. ಈ ರೀತಿ ಚಾರಣ ಮಾಡುತ್ತ ಈರುಪ್ಪಾ ಫಾಲ್ಸ್ ನ್ನು ಪ್ರವಾಸಿಗರು ನೋಡಬಹುದು.

ಕೊಡಗು ಜಿಲ್ಲೆಯಲ್ಲಿರುವ ದುಬಾರೆ ಸುಂದರ ಪರಿಸರದಲ್ಲಿ ಇರುವ ಅದ್ಭುತ ಪ್ರವಾಸಿ ತಾಣ ಎನ್ನಬಹುದು. ಏಕೆಂದರೆ ಇಲ್ಲಿ ರಜೆಯ ಮಜದೊಂದಿಗೆ, ಆನೆಗಳ ತರಬೇತಿ ಶಾಲೆ, ಪ್ರಕೃತಿ ಸೌಂದರ್ಯ, ಜಲಪಾತಗಳು, ಬೆಟ್ಟ ಗುಡ್ಡ ಮತ್ತು ನದಿಯಲ್ಲಿ ಸಾಹಸ ಕ್ರೀಡೆಗಳನ್ನೂ ಪ್ರವಾಸಿಗರು ಆನಂದಿಸಬಹುದು. ಮೈಸೂರು ಮತ್ತು ಬೆಂಗಳೂರುಗಳಿಂದ ದುಬಾರೆಗೆ ಪ್ರವಾಸಿಗರು ಬರಲು ಸಾಕಷ್ಟು ಅನುಕೂಲಕತೆಗಳಿವೆ.

Please Wait while comments are loading...