Search
  • Follow NativePlanet
Share
ಮುಖಪುಟ » ಸ್ಥಳಗಳು » ದುಬಾರೆ » ಹವಾಮಾನ

ದುಬಾರೆ ಹವಾಮಾನ

ಸೆಪ್ಟೆಂಬರ್ ಮತ್ತು ಮೇ ತಿಂಗಳುಗಳಲ್ಲಿ ಪ್ರವಾಸಿಗರಿಗೆ ಭೇಟಿ ನೀಡಬಹುದು. ಆನೆ ಶಿಬಿರಕ್ಕೆ ವರ್ಷದ ಯಾವುದೇ ದಿನದಲ್ಲಾದರೂ ಭೇಟಿ ನೀಡಬಹುದಾದರೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆನೆ ಶಿಬಿರ ನೋಡಲು ಉತ್ತಮ ಸಮಯವಾಗಿರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನೋಡಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್ ): ಬೇಸಿಗೆ ಕಾಲದಲ್ಲಿ ದುಬಾರೆಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲದೇ ಇಲ್ಲಿನ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಈ ಸಮಯ ಅತ್ಯುತ್ತಮವಾಗಿರುತ್ತದೆ. ಇಲ್ಲಿ ಉಷ್ಣಾಂಶ ಗರಿಷ್ಠ 35 ಡಿ.ಸೆ.ನಷ್ಟಿರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್ ) : ಮಳೆಗಾಲದಲ್ಲಿ ಇಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತದೆ. ಮಳೆಗಾಲದಲ್ಲಿ ಪ್ರವಾಸಿಗರು ದುಬಾರೆಗೆ ಬರದೇ ಇರುವುದು ಒಳ್ಳೆಯದೆನ್ನಬಹುದು. ಇಲ್ಲಿ ಮೀನಗಾರಿಕೆ ಮತ್ತು ನದಿ ದಾಟುವುದು ಮುಂತಾದ ಸಾಹಸ ಕ್ರೀಡೆಗಳನ್ನು ಇಲ್ಲಿ ಮಾಡಲಾಗುವುದಿಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ಚಳಿಗಾಲದಲ್ಲಿ ಹಿತಕರವಾದ ಪ್ರಶಾಂತ ವಾತಾವರಣ ಇಲ್ಲಿರುತ್ತದೆ. ಪ್ರವಾಸಿಗರು ಇಲ್ಲಿ ಅನೇಕ ಚಟುವಟಿಕೆಗಳನ್ನು ಮಾಡಿ ಪ್ರವಾಸದ ಮಜ ಅನುಭವಿಸಬಹುದು. ಕನಿಷ್ಠ ಉಷ್ಣಾಂಶ 15 ಡಿ.ಸೆ.ಇಲ್ಲಿ ದಾಖಲಾಗಿರುತ್ತದೆ.