Search
  • Follow NativePlanet
Share
ಮುಖಪುಟ » ಸ್ಥಳಗಳು» ತಡಿಯಾಂಡಮೋಲ್

ತಡಿಯಾಂಡಮೋಲ್

11

ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ ಭವ್ಯವಾಗಿ ನಿಂತಿದೆ. ಶಿಖರಗಾಮಿಗಳು ಮತ್ತು ಆರೋಹಿಗಳಿಗೆ ಈ ಶಿಖರ ಕಠಿಣ ಸವಾಲಾಗಿದೆ - ಚಾರಣಪ್ರಿಯರಿಗೂ ಸಹ ಇದೊಂದು ಸವಾಲೇ!

 

ನೀವು ಇಲ್ಲಿಗೆ ಭೇಟಿ ನೀಡಲೇಬೇಕು - ಏಕೆ?

ತಡಿಯಾಂಡಮೋಲ್ ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ “ಬೃಹತ್ ಪರ್ವತ “ ಎಂದು. ಚಾರಣದ ಬಗ್ಗೆ ತೀರಾ ಉತ್ಸುಕತೆ ಇಲ್ಲದಿದ್ದರೆ ಅರ್ಧದಷ್ಟು ದೂರವನ್ನು ನಾಲ್ಕು ಚಕ್ರದ ವಾಹನದಲ್ಲಿ ಕ್ರಮಿಸಬಹುದು.ಮುಂದಿನ ದಾರಿ ದುರ್ಗಮವಾಗಿದ್ದರೂ, ಶಿಖರದ ಮೇಲಿನ ನಯನ ಮನೋಹರ ದೃಶ್ಯ, ನಾವು ಪಟ್ಟ ಶ್ರಮ ಸಾರ್ಥಕ ಎನಿಸುವಂತೆ ಮಾಡುತ್ತದೆ.

 ಶಿಖರದ ಕೆಳಗಿರುವ ನಲಕ್‍ನಾಡು ಆರಮನೆಗೆ ಚಾರಿತ್ರಿಕ ಮಹತ್ವವಿದೆ. ತನ್ನ ಸೈನ್ಯಕ್ಕೆ ಸುರಕ್ಷಿತ ತಂಗುದಾಣವಾಗಿ ಇದನ್ನು ಮಹಾರಾಜಾ ದೊಡ್ಡ ವೀರರಾಜೇಂದ್ರರು 1792ರಲ್ಲಿ ಕಟ್ಟಿಸಿದರು. ಶಿಖರಾಗ್ರ ತಲುಪುವ ಕೆಲವೇ ಕಿಲೋಮೀಟರ್‍‍ಗಳ ಮೊದಲು ಚಾರಣಿಗರು ಪಡಿ ಇಗ್ಗುತ್ತಪ್ಪ ದೇಗುಲದಲ್ಲಿ ವಿಶ್ರಮಿಸಬಹುದು. ಈ ದೇಗುಲ ಇಲ್ಲಿನ ಸ್ಥಳೀಯರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಶಿಖರದ ಇಳಿಜಾರಿನಲ್ಲಿರುವ ಶೋಲಾ ಅರಣ್ಯವು ನಿರ್ಮಲ ಮತ್ತು ನಿರ್ಭಿಡವಾಗಿದೆ.

ತಡಿಯಾಂಡಮೋಲ್ ಗೆ ಕರ್ನಾಟಕ - ಕೇರಳಗಳೆರಡೂ ಕಡೆಯಿಂದಲೂ ತಲುಪಬಹುದಾಗಿದೆ. ಸಮೀಪದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ  200 ಕಿಲೋಮೀಟರ್‍ ದೂರದಲ್ಲಿರುವ ಬೆಂಗಳೂರು. ಬೆಂಗಳೂರು -ತಡಿಯಾಂಡಮೋಲ್ ಐದು ಗಂಟೆಗಳ ಪ್ರಯಾಣಕ್ಕೆ ಬಾಡಿಗೆ ಕಾರುಗಳು ಲಭ್ಯ.

ತಡಿಯಾಂಡಮೋಲ್ ಪ್ರಸಿದ್ಧವಾಗಿದೆ

ತಡಿಯಾಂಡಮೋಲ್ ಹವಾಮಾನ

ಉತ್ತಮ ಸಮಯ ತಡಿಯಾಂಡಮೋಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಡಿಯಾಂಡಮೋಲ್

  • ರಸ್ತೆಯ ಮೂಲಕ
    ರಾಜ್ಯ ಸರ್ಕಾರಿ ಮತ್ತು ಖಾಸಗಿ ಬಸ್‍ಗಳು ಬೆಂಗಳೂರು ಹಾಗೂ ಹತ್ತಿರದ ಅನೇಕ ಸ್ಥಳಗಳಿಂದ ನಿಗದಿತ ಸಮಯಗಳಲ್ಲಿ ತಡಿಯಾಂಡಮೋಲ್‍ಗೆ ಹೊರಡುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತಡಿಯಾಂಡಮೋಲ್‍ನಲ್ಲಿ ರೈಲು ನಿಲ್ದಾಣವಿಲ್ಲ.131 ಕಿಲೋಮೀಟರ್‍ ದೂರದಲ್ಲಿರುವ ಮಂಗಳೂರು ರೈಲು ನಿಲ್ದಾಣ ತಡಿಯಾಂಡಮೋಲ್‍ಗೆ ಅತ್ಯಂತ ಹತ್ತಿರದ ರೈಲು ನಿಲ್ದಾಣ. ಇದೊಂದು ಪ್ರಮುಖ ರೈಲು ನಿಲ್ದಾಣವಾಗಿದ್ದು, ಇಲ್ಲಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೂ ರೈಲು ಸಂಪರ್ಕವಿದೆ. ಪ್ರವಾಸಿಗರು ಇಲ್ಲಿಂದ ತಡಿಯಾಂಡಮೋಲ್‍ಗೆ ಕಾರ್ ಮತ್ತು ಟ್ಯಾಕ್ಸಿಗಳಿಂದ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭಾರತದ ವಿವಿಧ ನಗರಗಳಿಂದ ಬರುವ ಪ್ರವಾಸಿಗರಿಗೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ (139 ಕಿಲೋಮೀಟರ್‍ ) ಮತ್ತು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ (250 ಕಿಲೋಮೀಟರ್‍ ) ಅತ್ಯಂತ ಹತ್ತಿರದ ವಿಮಾನನಿಲ್ದಾಣಗಳು.ಆದರೆ, ಯುರೋಪ್, ಅಮೇರಿಕಾ, ಏಷ್ಯಾ ಮತ್ತು ಮಧ್ಯ ಏಷ್ಯಾದ ದೇಶಗಳಿಂದ ಬರುವ ಪ್ರವಾಸಿಗರಿಗೆ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ ಹೆಚ್ಚು ಸೂಕ್ತ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri