ಸಕಲೇಶಪುರ – ಜನಪ್ರಿಯತೆ ಗಳಿಸದ ಯಾತ್ರ ಸ್ಥಳ.

ಸಕಲೇಶಪುರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಗಿರಿಧಾಮವಾಗಿದ್ದು, ವಿಹಾರಕ್ಕೆ ಬರುವವರಿಗೆ ಒಂದು ಚೇತೋಹಾರಿ ಅನುಭವವನ್ನು ಒದಗಿಸುತ್ತದೆ. ಈ ಊರು ಸಮುದ್ರ ಮಟ್ಟದಿಂದ 949 ಮೀಟರ್ ಎತ್ತರದಲ್ಲಿದೆ. ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದ್ದು ಬೆಂಗಳೂರುಮೈಸೂರು ಹೆದ್ದಾರಿಯಲ್ಲಿ ಬರುತ್ತದೆ. ಈ ಊರು ಭಾರತದಲ್ಲಿಯೇ ಅತಿ ಹೆಚ್ಚು ಕಾಫಿ ಮತ್ತು ಏಲಕ್ಕಿಯನ್ನು ಬೆಳೆಯುವ ಸಲುವಾಗಿ ಪ್ರಸಿದ್ಧವಾಗಿದೆ.

 

ಚಾರಣಿಗರ ಸ್ವರ್ಗ.

ಸಕಲೇಶಪುರವು ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಅದಕ್ಕೆ ಮೊದಲು ಈ ಊರು ಹೊಯ್ಸಳರ ಮತ್ತು ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಹೊಯ್ಸಳರ ಕಾಲದಲ್ಲಿ ಈ ಊರು ಸಕಲೇಶಪುರ ಎಂಬ ಹೆಸರು ಪಡೆಯಿತು. ದಂತಕಥೆಗಳ ಪ್ರಕಾರ, ಹೊಯ್ಸಳರು ಒಂದು ಹಳ್ಳಿಗೆ ಬಂದಾಗ ಅವರಿಗೆ ಒಂದು ಭಗ್ನವಾಗಿರುವ ಶಿವಲಿಂಗವೊಂದು ದೊರೆಯಿತು. ತತ್ ಕ್ಷಣಕ್ಕೆ ಅವರು ಆ ಊರಿಗೆ ಸಕಲೇಶ್ವರ ಎಂದು ಹೆಸರು ಇಟ್ಟರು. ಈ ಊರಿನಲ್ಲಿ ಮಾಡುವ ಕೃಷಿಯಲ್ಲಿ ಅಧಿಕ ಇಳುವರಿ ಬರುಲು ಇದರ ಹೆಸರೆ ಕಾರಣ ಎಂಬುದು ಸ್ಥಳೀಯರ ವಾದ.

ಸಕಲೇಶಪುರವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಇದು ಪ್ರಮುಖವಾಗಿ ಚಾರಣ ಮಾಡುವವರ ನೆಚ್ಚಿನ ತಾಣವಾಗಿ ಖ್ಯಾತಿ ಪಡೆದಿದೆ. ಇಲ್ಲಿನ ಬಿಸಿಲೆ ಮೀಸಲು ಅರಣ್ಯ ಪ್ರದೇಶ ಹಾಗು ಕುಮಾರ ಪರ್ವತದಲ್ಲಿ ಚಾರಣ ಮಾಡುವವರಿಗೆ ಇಲ್ಲಿನ ವೈವಿಧ್ಯಮಯ ಜೀವ ಜಾಲದ ಕುರಿತು ಹೊಸ ಹೊಳಹುಗಳು ಲಭ್ಯವಾಗುವುದಷ್ಟೆ ಅಲ್ಲದೆ ಅವರ ಮನತಣಿಯುವಷ್ಟು  ಅವರ ಕುತೂಹಲ ಕೆರಳುತ್ತಿರುತ್ತದೆ.

ನೀವು ಉತ್ಸಾಹಿ ಚಾರಣಿಗರು ಆಗಿರದಿದ್ದ ಪಕ್ಷದಲ್ಲಿ, ನೀವು ಈ ಊರಿನ ನಯನ ಮನೋಹರ ಪರಿಸರವನ್ನು ವೀಕ್ಷಿಸುತ್ತ ತಿರುಗಾಡುವುದರಿಂದ ನಿಮ್ಮ ಮನಸ್ಸಿಗೆ ಮುದ ಸಿಗುತ್ತದೆ. ನೀವು ಸಕಲೇಶಪುಕ್ಕೆ ತಲುಪಲು ರೈಲಿನಲ್ಲಿ ಹಾಸನದವರೆಗೆ ಬರಬೇಕು. ಅದು ಇಲ್ಲಿಂದ 35 ಕಿ.ಮೀ ನಷ್ಟು ದೂರದಲ್ಲಿದೆ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣಗಳಲ್ಲಿ ಒಂದು ಮಂಗಳೂರಿನಲ್ಲಿದೆ.

Please Wait while comments are loading...