ಶ್ರವಣಬೆಳಗೊಳ – ಗೊಮ್ಮಟೇಶ್ವರ ನಿಂತ ಸ್ಥಳ

ಗೊಮ್ಮಟೇಶ್ವರನ 17.5 ಮೀಟರು ಎತ್ತರದ ಮೂರ್ತಿಯು, ನೀವು ಶ್ರವಣಬೆಳಗೊಳಕ್ಕೆ ತಲುಪುವುದಕ್ಕೂ ಹಿಂದಿನಿಂದಲೇ ನಿಮಗೆ ಕಾಣಿಸುತ್ತದೆ. ಮೂರ್ತಿಯು, 978ನೇ ಇಸವಿಯಷ್ಟು ಹಿಂದಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಶ್ರವಣಬೆಳಗೊಳವು ಹಲವು ವರ್ಷಗಳಿಂದಲೂ ಕೂಡಾ ಜೈನರಿಗೆ ಮಹತ್ವವಾದ ಪ್ರವಾಸಿ ಸ್ಥಳವಾಗಿದೆ.

 

ಮೂರ್ತಿ ಮತ್ತು ಶಾಸನಗಳು

ಶ್ರವಣಬೆಳಗೊಳವು ಸನ್ಯಾಸಿಯ ಬಿಳಿ ಪುಷ್ಕರಣಿ ಎಂಬ ಅರ್ಥವನ್ನು ಹೊಂದಿದೆ. ಇದು ಜಗತ್ತಿನ ಅತಿದೊಡ್ಡ ಏಕಶಿಲಾ ವಿಗ್ರಹವಾಗಿದ್ದು, ಒಂದೇ ಶಿಲೆಯಿಂದ ನಿರ್ಮಾಣಗೊಂಡಿದೆ.

ಮೂರ್ತಿಯ ಹೊರತಾಗಿ, ಶ್ರವಣಬೆಳಗೊಳವು ಇತಿಹಾಸದ ಕಡೆಗೆ ನಮ್ಮನ್ನು ಸೆಳೆಯುತ್ತದೆ. ರಾಜ ಚಂದ್ರಗುಪ್ತ ಮೌರ್ಯನು ಯುದ್ಧದ ನಂತರದಲ್ಲಿ ಶ್ರವಣಬೆಳಗೊಳದ ಗುಡ್ಡದ ಮೇಲೆ ಶಾಂತಿಯನ್ನು ಸ್ಥಾಪಿಸುವಂತೆ ನ್ಯಾಯಾಧಿಕಾರಿಗಳಿಂದ ಆದೇಶಿಸಲ್ಪಟ್ಟನು. ದಕ್ಷಿಣ ಭಾರತದಲ್ಲಿ ಜೈನಮತವನ್ನು ಹರಡುವಲ್ಲಿ ಈತನು ಪ್ರಮುಖ ಪಾತ್ರವನ್ನು ವಹಿಸಿದ್ದಾನೆ.

ಶ್ರವಣಬೆಳಗೊಳವು ಹಲವು ಶಿಲಾಶಾಸನಗಳನ್ನು ಹೊಂದಿದ್ದು, 600ನೇ ಇಸ್ವಿಯಿಂದ ಸುಮಾರು 1830ರ ವರೆಗಿನ ಶಾಸನಗಳನ್ನು ನಾವು ಇಲ್ಲಿ ಕಾಣಬಹುದು. ಇಂತಹ ಸುಮಾರು 800 ಶಾಸನಗಳು ಇದ್ದು, ಇದರಲ್ಲಿ ಗಂಗ, ಹೊಯ್ಸಳ ಮತ್ತು ಒಡೆಯರ ಆಡಳಿತಾವಧಿಯ ಸಂಗತಿಗಳನ್ನು ಚಿತ್ರಿಸಲಾಗಿದೆ. ಹಿಂದಿನ ಕಾಲದ ಜನಜೀವನದ ಬಗೆಗಿನ ಹಲವು ಮಾಹಿತಿಗಳನ್ನು ಈ ದಾಖಲೆಗಳು ನಮಗೆ ನೀಡುತ್ತವೆ.

ಶ್ರವಣಬೆಳಗೊಳಕ್ಕೆ ಸಮೀಪದ ಬಸ್‌ ನಿಲ್ದಾಣವು ಚನ್ನರಾಯಪಟ್ಟಣ. ಬೆಂಗಳೂರು ಮತ್ತು ಮೈಸೂರಿನಿಂದ ನೀವು ಚನ್ನರಾಯಪಟ್ಟಣಕ್ಕೆ ಬಸ್‌ಗಳ ಮೂಲಕ ಸಂಚರಿಸಬಹುದು. ಉಳಿದ ಪ್ರಯಾಣವನ್ನು ಸ್ಥಳೀಯ ಸಾರಿಗೆಯ ಮೂಲಕವೇ ಸಾಗಬೇಕು.

Please Wait while comments are loading...