ಹಳೆಬೀಡು - ರಾಜತ್ವ, ಕೀರ್ತಿ ಮತ್ತು ಅವನತಿಗಳನ್ನು ಕಂಡ ನೆಲ

ಹಳೇಬೀಡು, ಅಕ್ಷರಶಃ "ಅವಶೇಷಗಳ ನಗರ" ಎಂಬ ಅರ್ಥವನ್ನು ಕೊಡುತ್ತಿದ್ದು , ಹಿಂದೊಮ್ಮೆ ಹೊಯ್ಸಳ ಸಾಮ್ರಾಜ್ಯದ ವೈಭವೀಕೃತ ರಾಜಧಾನಿಯಾಗಿತ್ತು . ಹಿಂದಿನ ದಿನಗಳಲ್ಲಿ, ಇದನ್ನು "ದ್ವಾರಸಮುದ್ರ" ಎಂದು ಕರೆಯಲಾಗುತ್ತಿತ್ತು.ಇದು "ಸಾಗರದ ಪ್ರವೇಶದ್ವಾರ" ಎಂಬ ಅರ್ಥವನ್ನು ನೀಡುತ್ತದೆ .

ಹಾಸನ ಜಿಲ್ಲೆಯಲ್ಲಿರುವ ಈ ಪಟ್ಟಣ , ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 419 ಕಿ ಮೀ ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಸುಮಾರು 149 ಕಿಮೀ ದೂರದಲ್ಲಿದೆ. ಈ ನಗರವು 12 ನೆಯ ಶತಮಾನದಲ್ಲಿ ತನ್ನ ರಾಜಮನೆತನದ ವೈಭವವನ್ನು ಅನುಭವಿಸಿತು. ಆದರೆ ಬಹಮನಿ ಸುಲ್ತಾನರಿಂದ ಎರಡುಬಾರಿ ಸೂರೆಗೊಂಡ ನಂತರ ಇದನ್ನು ಹಳೇಬೀಡು ಎಂದು ಕರೆಯಲಾಗುತ್ತಿದೆ .

ನಾಶಗೊಂಡ ನಗರದ ಸ್ವರ ಮತ್ತು ದೃಶ್ಯಾವಳಿಗಳು

ಕೇತುಮಲ್ಲ ನಿರ್ಮಿಸಿದ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಾಲಯಗಳು ಅಂದಿನ ದೊರೆ ವಿಷ್ಣುವರ್ಧನ ಮತ್ತು ಆತನ ರಾಣಿ ಶಾಂತಲಾ ರಿಂದ ನಿರ್ಮಿತವಾದದ್ದೆನ್ನಬಹುದು . ಸಾಬೂನು ಕಲ್ಲಿನಿಂದ ಕಟ್ಟಲಾಗಿದ್ದ ಹೊಯ್ಸಳೇಶ್ವರ ದೇವಾಲಯಕ್ಕೆ ಕಾವಲಾಗಿ ಏಕಶಿಲೆಯ ನಂದಿ ಇದೆ. 12 ನೇ ಶತಮಾನದಲ್ಲಿ ರಾಜರು ಜೈನ್ ಧರ್ಮ ಅನುಸರಿಸಿದರೂ ಸಹ, ಹಲವಾರು ಶಿವ ದೇವಾಲಯಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ ಅಲ್ಲದೆ ಸಮೃದ್ಧ ಸಂಸ್ಕೃತಿ ಮತ್ತು ಹಳೆಯ ದಿನಗಳ ಸಂಪ್ರದಾಯಗಳನ್ನು ಈ ದೇವಸ್ಥಾನದ ಕೆತ್ತನೆಗಳು ಮತ್ತು ಶಿಲ್ಪಗಳಲ್ಲಿ ನಯವಾಗಿ ಅಳವಡಿಸಿಕೊಳ್ಳಲಾಗಿದೆ.

ಇದು ಈಗ ಪಾಳುಬಿದ್ದ ನಗರವಾಗಿದ್ದರೂ ,ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಕ್ಟೋಬರ್ ಮತ್ತು ಜನವರಿ ನಡುವಿನ ಕಾಲ ಹಳೇಬೀಡು ಭೇಟಿಗೆ ಅತ್ಯುತ್ತಮ ಸಮಯವಾಗಿದೆ . 2001 ರ ಜನಗಣತಿಯ ಪ್ರಕಾರ 8962 ಜನಸಂಖ್ಯೆ ಹೊಂದಿರುವ ಈ ನಗರ ರಾಜ್ಯದ ಇತರ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ.

ಕಲೆ ಮತ್ತು ವಾಸ್ತುಶಿಲ್ಪದಿಂದ ಸಮೃದ್ಧವಾದ ಈ ನಗರವು ಪ್ರಸಿದ್ಧ ಚನ್ನಕೇಶವ ದೇವಾಲಯ ಇರುವ ಬೇಲೂರಿನಿಂದ 16 ಕಿಮೀ ದೂರದಲ್ಲಿದೆ.ದೇಶದ ಪರಂಪರೆಯ ತಾಣಗಳಲ್ಲಿ ಹಳೇಬೀಡು ಒಂದಾಗಿದ್ದು , ಅವಶ್ಯವಾಗಿ ಭೇಟಿನೀಡಬೇಕಾದ ಸ್ಥಳವಾಗಿದೆ.

Please Wait while comments are loading...