Search
  • Follow NativePlanet
Share
ಮುಖಪುಟ » ಸ್ಥಳಗಳು » ಹಳೆಬೀಡು » ಹವಾಮಾನ

ಹಳೆಬೀಡು ಹವಾಮಾನ

ಅಕ್ಟೋಬರ್ ನಿಂದ ಏಪ್ರಿಲ್ ಹಳೆಬೀಡಿನ ಭೇಟಿಗೆ ಸೂಕ್ತ ಕಾಲವೆಂದು ಪರಿಗಣಿಸಲಾಗುತ್ತದೆ.ಪ್ರಸಿದ್ಧ ಹೊಯ್ಸಳ ಮಹೋತ್ಸವ (ಮಾರ್ಚ್) ಜೊತೆಗೆ ದೀಪಾವಳಿ (ಅಕ್ಟೋಬರ್) ಮತ್ತು ಮಹಾಶಿವರಾತ್ರಿ (ಫೆಬ್ರವರಿ / ಮಾರ್ಚ್), ಹಬ್ಬಗಳನ್ನು ಇಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ ಮತ್ತು ಈ ಅವಧಿಯಲ್ಲಿ ಹಳೆಬೀಡು ದೊಡ್ಡ ಸಂಖ್ಯೆಯಲ್ಲಿ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಸಿಗೆಗಾಲ

(ಮಾರ್ಚ್ ಮೇ): ಹಳೆಬೀಡಿನ ಹವಾಮಾನ ಬೇಸಿಗೆ ಕಾಲದಲ್ಲಿ ಸ್ವಲ್ಪ ಬೆಚ್ಚಗಿರತ್ತದೆ ಹೀಗಾಗಿ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಬರುವುದು ಸೂಕ್ತವಲ್ಲ . ರಾತ್ರಿ ಸಮಯದಲ್ಲಿ ತಾಪಮಾನ 24°C ಆಗಿದೆ ಆದರೆ ಪಾದರಸ, ಹಗಲಿನಲ್ಲಿ 37°C ಗೆ ಏರುತ್ತದೆ.

ಮಳೆಗಾಲ

(ಜೂನ್ನಿಂದ ಸೆಪ್ಟೆಂಬರ್): ಹಳೆಬೀಡಿನಲ್ಲಿ ಮಳೆಗಾಲದಲ್ಲಿ ಮಧ್ಯಮ ಮಳೆಯಾಗುತ್ತದೆ ಮತ್ತು ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಬರುವದು ಸೂಕ್ತವಲ್ಲ ಕಾರಣ ಇಲ್ಲಿ ಸಾಕಷ್ಟು ಆರ್ದ್ರ ಹವಾಮಾನವಿರುತ್ತದೆ.

ಚಳಿಗಾಲ

(ಫೆಬ್ರವರಿ-ಅಕ್ಟೋಬರ್): ಲ್ಲಿ ಚಳಿಗಾಲದಲ್ಲಿ ಪ್ರಶಾಂತವಾದ ಮತ್ತು ಸುಂದರವಾದ ವಾತಾವರಣವಿದ್ದು ದಾಖಲಾದ ಕನಿಷ್ಠ ಉಷ್ಣಾಂಶ 19 ° ಸಿ ಮತ್ತು ಗರಿಷ್ಠ 30 ° ಸಿ ಇರುತ್ತದೆ . ತಂಪು ವಾತಾವರಣದ ಕಾರಣ ಪ್ರವಾಸಿಗರು ಚಳಿಗಾಲದಲ್ಲಿ ಇಲ್ಲಿಗೆ ಬರಲು ಆದ್ಯತೆನೀಡಬೇಕು .