Search
 • Follow NativePlanet
Share
ಮುಖಪುಟ » ಸ್ಥಳಗಳು» ಕಾವೇರಿ ಮೀನುಗಾರಿಕೆ ಶಿಬಿರ

 ಕಾವೇರಿ ಮೀನುಗಾರಿಕೆ ಶಿಬಿರ - ಮೀನುಗಾರರ ಹೆಬ್ಬಾಗಿಲು

6

 ದಕ್ಷಿಣ ಕರ್ನಾಟಕದ ಅರಣ್ಯದ ಮಧ್ಯೆ ಗಂಭೀರವಾಗಿ ಹರಿಯುತ್ತಿರುವ ಕಾವೇರಿ ನದಿಯ ತೀರದಲ್ಲಿ ಕಾವೇರಿ ಮೀನುಗಾರಿಕೆ ಕ್ಯಾಂಪ್‌ ಇದೆ. ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ತಾಣವಿದು. ದಿನನಿತ್ಯದ ಜಂಜಡದ ಮಧ್ಯೆ ಒಂದು ಉತ್ತಮ ರಹದಾರಿಯಿದು. ಸಾಹಸ, ಖುಷಿ, ಶಾಂತತೆ ಮತ್ತು ಸಾಂತ್ವನವನ್ನು ಇಲ್ಲಿ ಪ್ರವಾಸಿಗರಿಗೆ ಈ ತಾಣ ನೀಡುತ್ತದೆ.

 

ಮಂಡ್ಯ ಜಿಲ್ಲೆಯಲ್ಲಿರುವ ಈ ಪ್ರದೇಶ, ರಾಜಧಾನಿ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿ ಬೆಂಗಳೂರು-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಹಗಳೂರಿನಿಂದ ಮೀನುಗಾರಿಕೆ ಕ್ಯಾಂಪ್‌ಗೆ 23 ಕಿ.ಮೀ ದೂರ ಮತ್ತು ಈ ಕ್ಯಾಂಪನ್ನು ಕರ್ನಾಟಕ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ನಿಂದ ನಿರ್ವಹಣೆ ಮಾಡಲ್ಪಡುತ್ತಿದೆ.

ಮೀನುಗಾರಿಕೆ ಕ್ಯಾಂಪ್‌ ಬಗ್ಗೆ ಮೂಲಾಂಶಗಳು

ಕಾವೇರಿ ಮೀನುಗಾರಿಕೆ ಕ್ಯಾಂಪ್‌ ಮೂರು ಕ್ಯಾಂಪ್‌ಗಳನ್ನು ಹೊಂದಿದೆ. ಅವುಗಳೆಂದರೆ; ಭೀಮೇಶ್ವರಿ, ಗಾಳಿಬೊರೆ ಮತ್ತು ದೊಡ್ಡಮಾಕಳಿ. ಭೀಮೇಶ್ವರಿ ಮತ್ತು ಗಾಳಿಬೊರೆ ಕ್ಯಾಂಪ್‌ಗಳು ಪ್ರವಾಸಿಗರಿಗಾಗಿ ತೆರೆದಿದೆ. ದೊಡ್ಡಮಾಕಳಿ ಮೀನುಗಾರಿಕೆ ಕ್ಯಾಂಪನ್ನು ಕಾರ್ಪೊರೇಟ್‌ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಎಲ್ಲಾ ಮೂರೂ ಪ್ರದೇಶಗಳು ಮೂಲಭೂತವಾಗಿ ಮೀನುಗಾರಿಕೆ ಮತ್ತು ನಿಸರ್ಗ ಕ್ಯಾಂಪ್‌ಗಳಾಗಿವೆ. ಭೀಮೇಶ್ವರಿಯಿಂದ ಸುಮಾರು 16 ಕಿ.ಮೀ ದೂರದಲ್ಲಿ ಗಾಲಿಬೊರೆ ಕ್ಯಾಂಪ್‌ ಇದೆ. ದೊಡ್ಡಮಾಕಳಿಯಿಂದ ಸುಮಾರು 6 ಕಿ.ಮೀ ದೂರದಲ್ಲಿ ದೊಡ್ಡಮಾಕಳಿ ಕ್ಯಾಂಪ್‌ ಇದೆ. ಈ ಪ್ರದೇಶಗಳು ತುಂಬಾ ಹಳೆಯದು ಮತ್ತು ಒರಟಾಗಿದ್ದು, ನಗರದಿಂದ ಹೊರಗೆ ನಿಮ್ಮ ಸಮಯವನ್ನು ಖುಷಿಯಾಗಿಸುತ್ತದೆ.

ನೀವು ಎಲ್ಲಿಂದ ಬರುತ್ತೀರಿ ಎಂಬುದನ್ನು ಅವಲಂಬಿಸಿ ರಸ್ತೆ ಮಾರ್ಗ, ವಾಯು ಮಾರ್ಗ ಮತ್ತು ರೈಲು ಮಾರ್ಗದ ಮೂಲಕ ಈ ಕ್ಯಾಂಪ್‌ಗಳನ್ನು ತಲುಪಬಹುದು. ಸಮೀಪದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ ಮತ್ತು ಸಮೀಪದ ರೈಲು ನಿಲ್ದಾನ ಮೈಸೂರಿನಲ್ಲಿದೆ. ನೀವು ಸ್ವಂತ ವಾಹನದಲ್ಲಿ ಪ್ರಯಾಣಿಸುವುದು ಉತ್ತಮ ಅನುಭವವನ್ನು ನೀಡುತ್ತದೆ.

ಕ್ಯಾಂಪ್‌ನಲ್ಲಿ ಗುಡಿಸಲು ಮತ್ತು ಟೆಂಟ್‌ಗಳ ಸೌಲಭ್ಯ ಇದೆ. ಹೊರಗಡೆಯಿಂದ ಈ ಸೌಲಭ್ಯಗಳು ಪುರಾತನ ಶೈಲಿಯಂತೆ ಕಾಣಿಸುತ್ತವೆ ಆದರೆ ಒಳಹೊಕ್ಕರೆ ಮಾತ್ರ ನಿಮ್ಮ ಮನೆಯಲ್ಲಿದ್ದಷ್ಟೇ ಹಾಯಾಗಿರಬಹುದು. ಗುಡಿಸಲು ಮತ್ತು ಟೆಂಟ್‌ಗಳನ್ನು ತುಂಬಾ ಚೊಕ್ಕಟವಾಗಿ ನಿರ್ವಹಿಸಲಾಗುತ್ತಿದೆ. ಗಾಳಿಬೋರೆ ಮತ್ತು ದೊಡ್ಡಮಾಕಳಿಯಲ್ಲಿ ವಿದ್ಯುದ್ದೀಪದ ವ್ಯವಸ್ಥೆಯಿರುವುದಿಲ್ಲ. ಬದಲಿಗೆ ಗಾಳಿ ದೀಪ ಮತ್ತು ಸೋಲಾರ್ ದೀಪಗಳ ಮೂಲಕ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೀನುಗಾರಿಕೆ ಕ್ಯಾಂಪ್‌ಗೆ ಭೇಟಿಕೊಡುವ ಅತ್ಯುತ್ತಮ ಕಾಲವೆಂದರೆ ಡಿಸೆಂಬರಿನಿಂದ ಮಾರ್ಚ್ ಮಧ್ಯದ ಅವಧಿ.

ಮೀನುಗಾರಿಕೆ ಕ್ಯಾಂಪ್‌ನಲ್ಲಿ ಚಟುವಟಿಕೆಗಳು

ಮಶೀರ್ ಪ್ರಭೇದವನ್ನು ಹಿಡಿಯುವುದು ಇಲ್ಲಿನ ಮುಖ್ಯಚಟುವಟಿಕೆಯಾಗಿದ್ದು, ಇಂತಹ ಮೀನುಗಳು ಸಾಮಾನ್ಯವಾಗಿ ಜನಜಂಗುಳಿಯಲ್ಲಿ ಕಂಡುಬರುತ್ತದೆ. ಮೀನು ಸಂತತಿಯು ಅಳಿವಿನಂಚಿನಲ್ಲಿ ಇರುವುದರಿಂದ ಪ್ರವಾಸಿಗರು ಮೀನುಗಳನ್ನು ಹಿಡಿದು ನಂತರ ನೀರಿಗೆ ಬಿಡುವ ವಿಧಾನವನ್ನು ಉಪಯೋಗಿಸಲಾಗುತ್ತದೆ. ಮೀನುಗಳನ್ನು ಹಿಡಿದು ತಕ್ಷಣವೇ ಅವುಗಳನ್ನು ನೀರಿಗೆ ಬಿಡುವ ಮೂಲಕ ಪ್ರವಾಸಿಗರು ಸ್ಕೋರ್ ಗಳಿಸಬಹುದು.

ಕಯಾಕಿಂಗ್‌, ಚಾರಣ, ಹರಿಗೋಲು ಸವಾರಿ ಮತ್ತು ಗುಡ್ಡ ಪ್ರದೇಶದ ಬೈಕ್ ಸವಾರಿಯನ್ನು ಕೂಡಾ ಈ ಪ್ರದೇಶದಲ್ಲಿ ನೀವು ಮಾಡಬಹುದು. ಈ ಚಟುವಟಿಕೆಗಳೆಲ್ಲದರ ಜೊತೆಗೆ ಸುಮಾರು 95 ಹಕ್ಕಿಗಳು, ಮೊಸಳೆಗಳು ಮತ್ತು ಆಮೆಗಳ ಪ್ರಭೇದಗಳನ್ನು ಕೂಡಾ ನೀವು ನೋಡಬಹುದು. ನೀವು ಪ್ರವಾಸವನ್ನು ಇಷ್ಟಪಡುವ ಮನೋಭಾವದವರಾದರೆ ಈ ಪ್ರದೇಶ ಖಂಡಿತ ನಿಮಗೆ ಖುಷಿಯನ್ನು ನೀಡುತ್ತದೆ.

ಕಾವೇರಿ ಮೀನುಗಾರಿಕೆ ಶಿಬಿರ ಪ್ರಸಿದ್ಧವಾಗಿದೆ

ಕಾವೇರಿ ಮೀನುಗಾರಿಕೆ ಶಿಬಿರ ಹವಾಮಾನ

ಉತ್ತಮ ಸಮಯ ಕಾವೇರಿ ಮೀನುಗಾರಿಕೆ ಶಿಬಿರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಾವೇರಿ ಮೀನುಗಾರಿಕೆ ಶಿಬಿರ

 • ರಸ್ತೆಯ ಮೂಲಕ
  ಈ ಕ್ಯಾಂಪ್‌ಗಳನ್ನು ಖಾಸಗಿ ಕಾರು ಅಥವಾ ಬಾಡಿಗೆ ಕ್ಯಾಬ್‌ಗಳ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕ್ಯಾಂಪ್‌ಗಳಿಗೆ ಬೆಂಗಳೂರು ಸಿಟಿ ಸೆಂಟ್ರಲ್‌ ಹತ್ತಿರದ ಕೇಂದ್ರವಾಗಿದೆ, ಅಂತರ ಸುಮಾರು 100 ಕಿ.ಮೀಗಳು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಈ ಕ್ಯಾಂಪ್‌ಗಳಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ್ದು ಮತ್ತು ಸುಮಾರು 107 ಕಿ.ಮೀಗಳಷ್ಟು ದೂರ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Jan,Sat
Return On
30 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Jan,Sat
Check Out
30 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Jan,Sat
Return On
30 Jan,Sun