ನಾಗರಹೊಳೆ -ನದಿಯ ಜೊತೆಗೆ ಒಂದಿಷ್ಟು  ಮೈನವಿರೇಳಿಸುವ ಸಮಯ

 

ನಾಗರಹೊಳೆ  ಎಂದರೆ  “ ಹಾವಿನ ಕೆರೆ “ ಎಂದರ್ಥ. ಈ ಸ್ಥಳವು ಅಲ್ಲಿರುವ  ದಟ್ಟವಾದ ಕಾಡುಗಳಲ್ಲಿ ಹಾವಿನ ಚಲನೆಯಂತೆ ಪ್ರಶಾಂತವಾಗಿ ಹರಿಯುವ ನದಿಯಿಂದ ತನ್ನ ಹೆಸರನ್ನು ಪಡೆದಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ನಾಗರಹೊಳೆಯು ನಿಸರ್ಗ ಪ್ರಿಯರಿಗೆ ಮತ್ತು ಕಾಡು ಪ್ರಾಣಿಗಳ ಆಸಕ್ತರಿಗೆ ಪ್ರಿಯವಾದ ಸ್ಥಳ .

ನಾಗರಹೊಳೆಯು ಏಕೆ ಪ್ರಸಿದ್ಧವಾಗಿದೆ.

ನಾಗರಹೊಳೆಯು  ಬೃಹತ್ತಾಗಿ ಚಾಚಿಕೊಡಿರುವ ರಾಜೀವ್ ಗಾಂಧಿ  ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ. ಮನೋಹರವಾದ ವಾತಾವರಣ , ಸಮೃದ್ಧವಾದ ಸಸ್ಯ ರಾಶಿ ಮತ್ತು ಜೀವ ರಾಶಿ ಹಾಗೂ ದಟ್ಟವಾದ ಹಸಿರಿನಿಂದ ತುಂಬಿದ ಕಾಡುಗಳು ಪ್ರವಾಸಿಗರನ್ನು ವರ್ಷ ಪೂರಾ ಈ ಸ್ಥಳಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಾಗರಹೊಳೆಯು ಪ್ರಾಚೀನದಿಂದಲೂ ತನ್ನ ಕಾಡು ಪ್ರಾಣಿಗಳಿಂದ  ಪ್ರಸಿದ್ಧಿ ಹೊಂದಿದೆ.  ಸ್ಥಳೀಯ ದಂತ ಕಥೆಯ ಪ್ರಕಾರ ಮೈಸೂರಿನ ಅರಸರು ಈ ಕಾಡಿನಲ್ಲಿ  ಆನೆಗಳು ಮತ್ತು  ಕಾಡು ಕೋಣಗಳಿಗಾಗಿ ಬೇಟೆಯಾಡುತ್ತಿದರು. ಈಗಲೂ ಈ ವನದಲ್ಲಿ ವೈವಿಧ್ಯಮಯ ಪ್ರಾಣಿ ಸಂಕುಲವನ್ನು ಕಾಣಬಹುದು

ನಾಗರಹೊಳೆಯ ಪ್ರವಾಸ  ಸಾರ್ಥಕವೆನಿಸುವುದು ಅಲ್ಲಿನ ಬ್ರಹ್ಮಗಿರಿ ಬೆಟ್ಟ ಮತ್ತು ಇರ್ಪು ಜಲಪಾತವನ್ನು ಕಂಡಾಗ ಮಾತ್ರ . ಈ ಜಲಪಾತದ ಮೂಲ ಲಕ್ಷ್ಮಣ ತೀರ್ಥ ನದಿಯ ನೀರೆಂದರೆ ತಪ್ಪಾಗಲಾರದು. ಇಲ್ಲಿನ ಜನರ ನಂಬಿಕೆಯ ಪ್ರಕಾರ ಈ ನದಿಯು ಸೀತಾ ಮಾತೆಯ  ಕೃಪೆಯಿಂದ ಜನ್ಮ ತಾಳಿದೆ. ರಾಮ ಮತ್ತು ಲಕ್ಷ್ಮಣರ ಜೊತೆಗೆ  ವನವಾಸದಲ್ಲಿರುವಾಗ, ಸೀತಾ ಮಾತೆಯೂ ಬಾಯಾರಿಕೆಯಿಂದ  ಬಳಲುತ್ತಿರಲು ನೀರಿಗಾಗಿ  ಲಕ್ಷ್ಮಣನು ಭೂಮಿಗೆ  ಬಾಣವನ್ನು ಬಿಡಲು  ಅದೇ ಸ್ಥಳದಲ್ಲಿ ಈ ನದಿಯು ಚಿಮ್ಮಿತು ಎನ್ನುವುದು ಪುರಾಣ.

ನಾಗರಹೊಳೆಯು ಮಂಗಳೂರಿಗೆ ಸಮೀಪವಿದ್ದು  ಸುಲಭವಾಗಿ  ತಲುಪಬಹುದಾಗಿದೆ

 

 

 

Please Wait while comments are loading...