ಶಿವನ ಸಮುದ್ರ -  ಕಾವೇರಿ ಎರಡು ಕವಲಾಗುವ ತಾಣ.

ಶಿವನಸಮುದ್ರವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿಹಾರ ತಾಣವಾಗಿದೆ.  ಈ ಸ್ಥಳವು ಕಾವೇರಿ ನದಿಯಲ್ಲಿರುವ ಒಂದು ವಿಶಿಷ್ಟವಾದ ದ್ವೀಪದ ಊರಾಗಿದೆ. ಇದರ ಹೆಸರಿನ ಅರ್ಥ ಶಿವನಿಗೆ ಸೇರಿದ ಸಮುದ್ರವೆಂದಿದೆ.

 

 ದ್ವೀಪಗಳು, ಜಲಪಾತ ಮತ್ತು ವಿನೋದ.

ಈ ಸ್ಥಳವು ತನ್ನ ಜಲಪಾತದಿಂದಾಗಿ ಪ್ರಸಿದ್ಧವಾಗಿದೆ. ಈ ಜಲಪಾತವು ವಿಶ್ವದ ಪ್ರಮುಖ 100 ಜಲಪಾತಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ದಖನ್ ಪ್ರಸ್ಥಭೂಮಿಯಲ್ಲಿ ಹರಿಯುವ ಕಾವೇರಿ ನದಿಯು ಕಲ್ಲು ಬಂಡೆಗಳ ಮತ್ತು ಕೊರಕಲುಗಳ ಮಧ್ಯೆ ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಹೆಸರು ಪಡೆದು ಶಿವನ ಸಮುದ್ರದಲ್ಲಿ ದುಮ್ಮಿಕ್ಕುತ್ತ ಧುಮುಕುತ್ತವೆ.

ಈ ಎರಡು ಕವಲುಗಳು 98 ಮೀಟರ್ ಎತ್ತರದ ಬಂಡೆಯ ತುದಿಯಿಂದ ಧುಮ್ಮಿಕ್ಕುತ್ತ  ಕೆಳಗೆ ಬೀಳುತ್ತವೆ. ಗಗನಚುಕ್ಕಿ ಜಲಪಾತವು ಬಂಡೆಯ ಪಶ್ಚಿಮ ಭಾಗದಲ್ಲಿದ್ದು, ಭರಚುಕ್ಕಿಯು ಪೂರ್ವದ ಭಾಗದಲ್ಲಿದೆ.

ಗಗನಚುಕ್ಕಿಯ ವಿಹಂಗಮನೋಟವು ಶಿವನ ಸಮುದ್ರದ ವೀಕ್ಷಣಾ ಗೋಪುರದಿಂದ ಸಿಗುತ್ತದೆ. ಅಥವಾ ಹಝರತ್ ಮರ್ದನೆ ಗಯಿಬ್ ರ ದರ್ಗಾದಿಂದ ನೋಡಬಹುದು. ಭರಚುಕ್ಕಿ ಜಲಪಾತವು ಗಗನ ಚುಕ್ಕಿ ಜಲಪಾತದಿಂದ 1 ಕಿ.ಮೀ ದೂರದಲ್ಲಿ ನೆಲೆಗೊಂಡಿದ್ದು , ಅದು ತನ್ನ ವೇಗದ ಪ್ರವಾಹಕ್ಕೆ ಮತ್ತು ಕಡಿದಾದ ಕೊರಕಲುಗಳಿಗೆ ಹೆಸರುವಾಸಿಯಾಗಿದೆ.

ಶಿವನ ಸಮುದ್ರವು ತನ್ನ ಊರಿನಲ್ಲಿರುವ ಪ್ರಾಚೀನ ದೇವಾಲಯಕ್ಕೆ ಹಾಗು ಏಶಿಯಾದ ಮೊಟ್ಟ ಮೊದಲ ಜಲ-ವಿದ್ಯುತ್ ಕೇಂದ್ರಕ್ಕೆ ಪ್ರಸಿದ್ಧವಾಗಿದೆ. ಈ ವಿದ್ಯುತ್ ಕೇಂದ್ರವನ್ನು ಕೋಲಾರದಲ್ಲಿರುವ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡಲು ನಿರ್ಮಿಸಲಾಯಿತು.

ಶಿವನಸಮುದ್ರಕ್ಕೆ ಬೆಂಗಳೂರಿನಂತಹ ನಗರದಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಶಿವನ ಸಮುದ್ರಕ್ಕೆ ಹೋಗಲು ಮಳೆಗಾಲದ ನಂತರದ ದಿನಗಳು ಅಂದರೆ ಜುಲೈ ನಿಂದ ಅಕ್ಟೋಬರ್ ತಿಂಗಳುಗಳು ಉತ್ತಮ.

Please Wait while comments are loading...