Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲೆ ಮಹದೇಶ್ವರ ಬೆಟ್ಟ » ಹವಾಮಾನ

ಮಲೆ ಮಹದೇಶ್ವರ ಬೆಟ್ಟ ಹವಾಮಾನ

ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಡಲು ಚಳಿಗಾಲವು ಅತ್ಯಂತ ಸೂಕ್ತವಾದ ಕಾಲವೆಂದು ಪರಿಗಣಿಸಲ್ಪಟ್ಟಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಮಲೆ ಮಹದೇಶ್ವರ ಬೆಟ್ಟಗಳು ಬೇಸಿಗೆಯಲ್ಲಿ 20° ಸೆಲ್ಶಿಯಸ್ ನಿಂದ 35° ಸೆಲ್ಶಿಯಸ್ ತನಕದ ಉಷ್ಣಾಂಶ ಹೊಂದಿದ್ದು, ಹಿತವಾದ ಹವಾಗುಣವನ್ನು ಒದಗಿಸುತ್ತದೆ. ಪ್ರವಾಸಿಗರು ಇಲ್ಲಿನ ತಂಪಾದ ಮತ್ತು ಹಿತವಾದ ಹವೆಯಿಂದಾಗಿ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿಕೊಡಲು ಇಷ್ಟಪಡುತ್ತಾರೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) : ಮಳೆಗಾಲದಲ್ಲಿ ಇಲ್ಲಿನ ಬೆಟ್ಟಗಳಲ್ಲಿ ಮಿತಪ್ರಮಾಣದ ಮಳೆಯನ್ನು  ನಾವು ಕಾಣಬಹುದು. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಇದು ಅತ್ಯುತ್ತಮ ಸಮಯ. ಆದರೆ ಅತಿವೃಷ್ಟಿಯೇನಾದರು ಸಂಭವಿಸಿದರೆ ರಸ್ತೆಗಳು ಹಾಳಾಗಿ ತೊಂದರೆಯಾಗಬಹುದು ಮತ್ತು ಹೊರಾಂಗಣ ಚಟುವಟಿಕೆಗಳಿಗೆ ತಡೆಯೊಡ್ಡಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಜನವರಿ) : ಚಳಿಗಾಲದಲ್ಲಿ ಮಲೆಮಹದೇಶ್ವರ ಬೆಟ್ಟಗಳ ಹವಾಮಾನವು ಅತಿಯಾಗಿ ಕೊರೆಯುವ ಚಳಿಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯವಾಗಿ 12° ಸೆಲ್ಶಿಯಸ್ ನಿಂದ 20° ಸೆಲ್ಶಿಯಸ್ ನಡುವೆ ಇರುತ್ತದೆ. ಹೀಗಾಗಿ ಇಲ್ಲಿನ ಸುಂದರ ಬೆಟ್ಟಗಳಿಗೆ  ಭೇಟಿಕೊಡಲು ಇದು ಸಕಾಲವಾಗಿದೆ.