Search
  • Follow NativePlanet
Share

ಔಲಿ - ಸಖತ್ ಆಗಿ ಸ್ಕೇಟ್ ಮಾಡಿ

18

ಇಡೀ ವಿಶ್ವದಲ್ಲೇ ಔಲಿ ಸ್ಕೀಯಿಂಗ್ (ಹಿಮದ ಇಳಿಜಾರಿನಲ್ಲಿ ವಿಶೇಷವಾದ ಸಾಧನಗಳ ಮೂಲಕ ಜಾರುವುದು) ಗೆ ಅತ್ಯಂತ ಹೆಸರುವಾಸಿಯಾದ ಪ್ರದೇಶವಾಗಿದೆ. ಈ ಸುಂದರವಾದ ಪ್ರದೇಶವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿದ್ದು, ಓಕ್ ಹಾಗೂ ಕೋನಿಫೆರೋಸ್ ಮರಗಳ ಆಕರ್ಷಕವಾದ ನೋಟವನ್ನು ಒದಗಿಸುತ್ತದೆ.

ಈ ಪ್ರದೇಶದ ಇತಿಹಾಸವು 8ನೇ ಶತಮಾನದಿಂದ ಆರಂಭವಾಗುತ್ತದೆ. ಗುರು ಆದಿಶಂಕರಾಚಾರ್ಯರು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ನಂಬಲಾಗಿದೆ. ಬುಗ್ಯಲ್ ಎಂಬ ಹೆಸರೂ ಈ ಪ್ರದೇಶಕ್ಕಿದ್ದು, ಇದರ ಅರ್ಥ ಸ್ಥಳೀಯ ಭಾಷೆಯಲ್ಲಿ 'ಹುಲ್ಲುಗಾವಲು/ಹುಲ್ಲು' ಎಂಬುದಾಗಿ. ಇಲ್ಲಿನ ಇಳಿಜಾರು ಪ್ರದೇಶದಲ್ಲಿ ಪ್ರವಾಸಿಗರು ನಡೆಯುತ್ತಾ ಹೋದರೆ ನಂದಾ ದೇವಿ, ಮನ ಪರ್ವತ ಮತ್ತು ಸುಂದರವಾದ ಕಾಮತ್ ಬೆಟ್ಟಗಳ ಸಾಲುಗಳನ್ನು ನೋಡಬಹುದು. ಪ್ರವಾಸಿಗರು ಇಲ್ಲಿನ ಸೇಬು ಹಣ್ಣಿನ ತೋಟ ಹಾಗೂ ಹಸಿರಾದ ಸುಂದರ ಪರ್ವತಗಳ ಸೌಂದರ್ಯವನ್ನು ಇಳಿಜಾರು ಪ್ರದೇಶಗಳಿಂದ ನೋಡಿ ಆನಂದಿಸಬಹುದು.

ಔಲಿಯ ಅತ್ಯಂತ ಹೆಸರಾಂತ ಪ್ರದೇಶ ನಂದಪ್ರಯಾಗ್, ಇದು ಅಲಕ್ ನಂದಾ ಹಾಗೂ ನಂದಾಕಿನಿ ನದಿಗಳು ಸೇರುವ ಸ್ಥಳದಲ್ಲಿದೆ. ನದಿಗಳ ಸಂಗಮವಾಗುವ ಈ ಸ್ಥಳದಲ್ಲಿ ಒಮ್ಮೆ ಮುಳುಗಿ ಏಳ ಬೇಕೆನ್ನುವುದು ಅನೇಕ ಪಕ್ಕಾ ಹಿಂದೂ ಸಂಪ್ರದಾಯವಾದಿಗಳ ಅಭಿಪ್ರಾಯ. ಪ್ರವಾಸಿಗರು ನೋಡಿ ಸಂತೋಷಪಡುವ ಹಿಮಪರ್ವತಗಳಾದ ಬದರೀನಾಥ್ ಹಾಗೂ ಕೇದಾರನಾಥ್ ಗೆ ಹೋಗಲು ಇದೇ ಮೂಲ ದ್ವಾರವಾಗಿದೆ.

ಇಲ್ಲಿನ ಕೃತಕ ಸರೋವರ ಬಹಳ ಜನಪ್ರೀಯವಾದದ್ದು ಹಾಗೂ ಹಿಮ ಬೀಳುವುದು ಕಡಿಮೆ ಆದ ದಿನಗಳಲ್ಲೂ ಇಲ್ಲಿ ಕೃತಕ ಹಿಮ ಸುರಿಸುವ ವ್ಯವಸ್ಥೆ ಮಾಡಿರುವುದರಿಂದ ಈ ಪ್ರದೇಶವು ಸದಾ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಮುದ್ರ ಮಟ್ಟದಿಂದ ಸುಮಾರು 2744 ಮೀ.ಎತ್ತರವಿರುವ ಭವಿಷ್ಯ ಭದ್ರಿ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಅತ್ಯಂತ ಹೆಸರಾಂತ ಧಾರ್ಮಿಕ ಪ್ರದೇಶವಾಗಿದ್ದು ಬದರೀನಾಥ್, ಯೋಗ್ ಧ್ಯಾನ ಬದ್ರಿ ಹಾಗೂ ವೃಧಾ ಬದ್ರಿ ನಂತರ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ಇಲ್ಲಿಗೂ ಬಂದು ಪೂಜೆ ಸಲ್ಲಿಸಬಕೆಂದು ನಂಬಲಾಗುತ್ತದೆ.

ಬೇಸಿಗೆಯಲ್ಲೂ ಹಚ್ಚ ಹಸಿರಾಗಿರುವ ಇಲ್ಲಿನ ಗುರ್ಸೊ ಭುಗ್ಯಾಲ್ ಬಹಳ ಸುಂದರವಾದ ತಾಣವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಪ್ರದೇಶವು ಓಕ್ ಹಾಗೂ ಕೋನಿಫೆರೋಸ್ ಕಾಡಿನಿಂದ ಆವರಿಸಲ್ಪಟ್ಟಿದೆ. ಪ್ರವಾಸಿಗರು ಜೋಶಿಮಠದಿಂದ ಇಲ್ಲಿಗೆ ರೋಪ್ ವೇ ಮೂಲಕವಾಗಿ ತಲುಪಬಹುದು. ಇಲ್ಲಿಂದ ಸ್ವಲ್ಪ ದೂರದಲ್ಲಿ ಚತ್ತರ್ ಕುಂಡ್ ಎಂಬ ಸುಂದರವಾದ ಸರೋವರವಿದೆ. ಇಲ್ಲಿನ ಸ್ವಾಭಾವಿಕವಾದ ನೀರಿನ ಚಿಲುಮೆ ಹಾಗೂ ಔಲಿಯಿಂದ ಸ್ವಲ್ಪ ದೂರದಲ್ಲೇ ಇರುವ ಸೈಲ್ದಾರ್ ತಪೋವನದ ದೇವಾಲಯ ಅತ್ಯಂತ ಪ್ರಸಿದ್ದವಾದದ್ದು.

ಔಲಿಯ ಇಳಿಜಾರು ಹಿಮ ಗಡ್ಡೆಗಳ ಮೇಲೆ ಜಾರುತ್ತಾ ಕೆಳಕ್ಕೆ ಬರುವುದೆ ಒಂದು ಅತ್ಯದ್ಭುತಾದ ಅನುಭವ. ಆಲ್ಪೈನ್ ಸ್ಕೀಯಿಂಗ್, ನೋರ್ಡಿಕ್ ಸ್ಕೀಯಿಂಗ್ ಹಾಗೂ ಟೆಲಿಮಾರ್ಕ ಸ್ಕೀಯಿಂಗ್ ಗಳಿಗೆ ಇದು ದಿ ಬೆಸ್ಟ್ ಎಂದು ಹೇಳಬಹುದು. ಔಲಿಯಲ್ಲಿ, ಏಷಿಯ ಖಂಡದಲ್ಲಿಯೇ ಅತ್ಯಂತ ಎತ್ತರ ಹಾಗೂ ಉದ್ದನೆಯ ಕೇಬಲ್ ಕಾರ್ ಮಾರ್ಗವಿದೆ. ಇದರ ಉದ್ದ ನಾಲ್ಕು ಕಿ.ಮೀ. ಗೊಂಡೊಲಾ ಎಂದು ಕರೆಯಲಾಗುವ ಇದರಲ್ಲಿ ಚೇರ್ ಲಿಫ್ಟ್ ಹಾಗೂ ಸ್ಕೀ ಲಿಫ್ಟ್ ಸೌಕರ್ಯವೂ ಇದೆ. ಇದರ ಸ್ಲೋಪ್ ಗಳ ಮೃದುತ್ವವನ್ನು ಸ್ನೋ ಪ್ಯಾಕಿಂಗ್ ಮೆಷೀನ್ ಹಾಗೂ ಸ್ನೋ ಬೀಟರ್ಸ್ ಗಳ ಮೂಲಕ ನಿಯಮಿತವಾಗಿ ನಿರ್ವಹಿಸಲ್ಪಡುತ್ತದೆ.

ಹಿಮಾಲಯಾದ ಬೆಟ್ಟ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡಲು ಇದು ಹೆಸರಾಂತ ಪ್ರದೇಶವಾಗಿದೆ. ಪ್ರವಾಸಿಗರು ಇಲ್ಲಿನ ಜೋಶಿಮಠ ಟ್ರೆಕ್ಕಿಂಗ್ ಮಾರ್ಗ ಅತ್ಯಂತ ಹೆಸರುವಾಸಿಯಾಗಿದ್ದು ಒಂದು ಸಲ ಪ್ರಯತ್ನಿಸಬಹುದಾಗಿದೆ. ಎತ್ತರವಾದ ಪ್ರದೇಶಗಳಾದ ಕಾಮಿಟ್, ನಂದಾ ದೇವಿ, ಮನ ಪರ್ವತ ಹಾಗೂ ದುನಗಿರಿ ಪ್ರದೇಶಗಳನ್ನು ಈ ಟ್ರೆಕ್ಕಿಂಗ್ ಸಮುಯದಲ್ಲಿ ಕಾಣಬಹುದು.

ಸಮುದ್ರ ಮಟ್ಟದಿಂದ ಸುಮಾರು 7160 ಮೀಟರ್ ಎತ್ತರದಲ್ಲಿರುವ ತ್ರಿಶೂಲ್ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳವಾಗಿದೆ. ಹಿಂದೂ ದೇವರಾದ ಶಿವನಿಂದಾಗಿ ಈ ಎತ್ತರವಾದ ಪ್ರದೇಶಕ್ಕೆ ತ್ರಿಶೂಲ್ ಎಂಬ ಹೆಸರು ಬಂದಿದೆ. ಇದು ಒಂದು ಜನಪ್ರೀಯ ಸ್ಕೀಯಿಂಗ್ ತಾಣವಾಗಿರುವುದು ಮಾತ್ರವಲ್ಲದೆ ಇಂಡೋ-ಟಿಬೇಟ್ ಗಡಿ ಪೋಲಿಸ್ ಪಡೆಯ ಅಧಿಕಾರಿಗಳಿಗೆ ತರಬೇತಿ ಹಾಗೂ ಗಸ್ತು ತಿರುಗುವ ಪ್ರದೇಶವೂ ಆಗಿದೆ. ಈ ಪರ್ವತದ ತಪ್ಪಲಲ್ಲಿರುವ ರೂಪ್ ಕುಂಡ್ ಸರೋವರವನ್ನೂ ಕೂಡ ಪ್ರವಾಸಿಗರು ಕಾಣಬಹುದು.

ಪ್ರವಾಸಿಗರು ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಮೂಲಕ ಈ ನಗರವನ್ನು ತಲುಪಬಹುದು. ಡೆಹರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಹಾಗೂ ಹರಿದ್ವಾರದ ರೈಲು ನಿಲ್ದಾಣ, ಔಲಿ ತಲುಪಲು ಹತ್ತಿರದ ನಿಲ್ದಾಣಗಳಾಗಿವೆ. ಔಲಿಗೆ ಹತ್ತಿರದಲ್ಲಿರುವ ನಗರಗಳಿಂದ ಅನೇಕ ಬಸ್ ಸೌಕರ್ಯಗಳಿವೆ.

ಬೇಸಿಗೆಯಲ್ಲಿ ಔಲಿಯ ಹವಾಮಾನವು ಹಿತಕರವಾಗಿರುವುದರಿಂದ ಪ್ರವಾಸಿಗರು ಬೇಸಿಗೆಯು ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲವಾಗಿದೆ.

ಔಲಿ ಪ್ರಸಿದ್ಧವಾಗಿದೆ

ಔಲಿ ಹವಾಮಾನ

ಉತ್ತಮ ಸಮಯ ಔಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಔಲಿ

  • ರಸ್ತೆಯ ಮೂಲಕ
    ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅನೇಕ ಬಸ್ಸುಗಳು ಹತ್ತಿರದ ಜೋಶಿಮಠ, ರಿಷಿಕೇಶ್, ಹರಿದ್ವಾರ್ ಹಾಗೂ ಡೆಹರಾಡೂನ್ ಸೇರಿದಂತೆ ಎಲ್ಲಾ ನಗರಗಳಿಂದಲೂ ಔಲಿಗೆ ಬರುತ್ತವೆ. ಜೋಶಿಮಠದಿಂದ ಅನೇಕ ಟ್ಯಾಕ್ಸಿಗಳೂ ಲಭ್ಯವಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಔಲಿಯಿಂದ ಸುಮಾರು 273 ಕಿ.ಮೀ.ದೂರದಲ್ಲಿರುವ ಹರಿದ್ವಾರದ ರೈಲು ನಿಲ್ದಾಣ ಇಲ್ಲಿಗೆ ಹತ್ತಿರದ ನಿಲ್ದಾಣವಾಗಿದೆ. ಇಲ್ಲಿಂದ ಕ್ಯಾಬ್ ಗಳ ಮೂಲಕ ಪ್ರಯಾಣ ಮಾಡಿ ಔಲಿ ತಲುಪಬಹುದು. ಭಾರತದ ಪ್ರಮುಖ ನಗರಗಳೊಂದಿಗೆ ಈ ರೈಲು ನಿಲ್ದಾಣವು ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಔಲಿಯಿಂದ ಸುಮಾರು 270 ಕಿ.ಮೀ.ದೂರದಲ್ಲಿರುವ ಡೆಹರಾಡೂನಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಟ್ಯಾಕ್ಸಿ ಹಿಡಿದು ತಲುಪಬೇಕಾದ ಸ್ಥಳಕ್ಕೆ ಹೋಗಬಹುದು. ವಿದೇಶಿ ಪ್ರವಾಸಿಗರು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬರಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat