ಔಲಿ ನಗರದಿಂದ 3 ಕಿ.ಮೀ.ದೂರದಲ್ಲಿರುವ ಗುರ್ಸೊ ಬುಗ್ಯಾಲ್ ಸಮುದ್ರ ಮಟ್ಟದಿಂದ ಸುಮಾರು 3056 ಮೀ.ಎತ್ತರದಲ್ಲಿದೆ. ಬೇಸಿಗೆ ಕಾಲದಲ್ಲೂ, ಹಚ್ಚ ಹಸಿರಾದ ಗಿಡಮರಗಳು ಹಾಗೂ ಪೊದೆಗಳಿಂದಾಗಿ ಈ ಪ್ರದೇಶ ಹೆಸರುವಾಸಿಯಾಗಿದೆ. ಇಲ್ಲಿನ ಕಾಡಿನಲ್ಲಿ ಕೋನಿಫೆರೋಸ್ ಹಾಗೂ ಓಕ್ ಮರಗಳಿದ್ದು ಜೋಶಿ ಮಠದಿಂದ ಇಲ್ಲಿಗೆ ರೋಪ್ ವೇ ಮೂಲಕ ತಲುಪಬಹುದಾಗಿದೆ. ಈ ಸ್ಥಳದಲ್ಲಿ ತಂಗಲು ಪ್ರವಾಸಿಗರಿಗೆ ಯಾವುದೇ ಅನುಕೂಲತೆಗಳು ಇಲ್ಲದಿರುವುದರಿಂದ ಪ್ರವಾಸಿಗರು ಬೆಳಗ್ಗೆ ಇಲ್ಲಿಗೆ ಭೇಟಿ ನೀಡಿ ಸಂಜೆ ಔಲಿಗೆ ಹಿಂದಿರುಗಬಹುದು. ಗುರ್ಸೊ ಬುಗ್ಯಾಲ್ ನಿಂದ ಕೇವಲ ಒಂದು ಕಿ.ಮೀ.ದೂರದಲ್ಲಿರುವ ಚತ್ತರ್ ಕುಂಡ್ ಸರೋವರವನ್ನೂ ಪ್ರವಾಸಿಗರು ನೋಡಿಕೊಂಡು ಬರಬಹುದು. ಈ ಸರೋವರವು ಶುದ್ದವಾದ ನೀರಿಗಾಗಿ ಹೆಸರುವಾಸಿಯಾಗಿದೆ.