ಸಮುದ್ರ ಮಟ್ಟದಿಂದ ಅತಿ ಎತ್ತರದ ಪ್ರದೇಶದಲ್ಲಿ ಔಲಿಯ ಈ ಕೃತಕ ಸರೋವರವನ್ನು ನಿರ್ಮಿಸಲಾಗಿದೆ. ಕಡಿಮೆ ಪ್ರಮಾಣದಲ್ಲಿ ಹಿಮ ಬೀಳುವ ತಿಂಗಳುಗಳಲ್ಲಿ ಸ್ಕೀಯಿಂಗ್ ಮಾಡುವವರಿಗೆ ಅನುಕೂಲವಾಗುವಂತೆ ಕೃತಕವಾಗಿ ಹಿಮ ನಿರ್ಮಿಸುವ ವ್ಯವಸ್ಥೆಯನ್ನು ಅಳವಡಿಸಿ ಇಲ್ಲಿನ ಸರ್ಕಾರ ಈ ಸರೋವರವನ್ನು ನಿರ್ಮಾಣ ಮಾಡಿದೆ. ಸ್ಕೀಯಿಂಗ್ ಸೀಜನ್ ಗಳಿಗೆ ಸಹಾಯಕವಾಗುವಂತೆ ಇಲ್ಲಿನ ಸ್ಕೀಯಿಂಗ್ ಪ್ರದೇಶದ ಮೇಲ್ಭಾಗವನ್ನೂ ಸಮತಟ್ಟಾಗಿ ಮಾಡಲಾಗಿರುತ್ತದೆ.