ಸ್ಕೀಯಿಂಗ್, ಔಲಿ

ಔಲಿಗೆ ಬರುವ ಪ್ರವಾಸಿಗರಿಗೆ ಸ್ಕೀಯಿಂಗ್ ಅತ್ಯಂತ ಆಕರ್ಷಕವಾದ ಸಾಹಸ ಕ್ರೀಡೆ. ಹಿಮದಿಂದ ಆವೃತವಾದ ಬೆಟ್ಟಗಳ ಇಳಿಜಾರು ಪ್ರದೇಶ ಸ್ಕೀಯಿಂಗ್ ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸ್ಕೀಯಿಂಗ್ ನಲ್ಲಿ ಹೆಸರುವಾಸಿಯಾದ ನೋರ್ಡಿಕ್ ಸ್ಕೀಯಿಂಗ್, ಆಲ್ಪೈನ್ ಸ್ಕೀಯಿಂಗ್ ಹಾಗೂ ಟೆಲಿಮಾರ್ಕ ಸ್ಕೀಯಿಂಗ್ ಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳು ಇಲ್ಲಿರುವುದರಿಂದ ಇದು ಇಡೀ ವಿಶ್ವದಲ್ಲೇ ಅತ್ಯಂತ ಹೆಸರುವಾಸಿಯಾದ ಸ್ಕೀಯಿಂಗ್ ಪ್ರದೇಶ ಇದಾಗಿದೆ.

ಆಸಕ್ತರು ಹಾಗೂ ಅನುಭವಿಗಳು ಇಲ್ಲಿನ ಸಲೋಮ್, ಕ್ರಾಸ್ ಕಂಟ್ರಿ ಹಾಗೂ ಡೌನ್ ವರ್ಡ್ ಸ್ಕೀಯಿಂಗ್ ಆಕ್ಷನ್ ಗಳಲ್ಲಿಯೂ ಭಾಗವಹಿಸಬಹುದು. ಸಂಪೂರ್ಣ ಗಟ್ಟಿಯಾದ ಹಿಮಗಡ್ಡೆಗಳಿಂದ ಆವೃತವಾದ ಇಳಿಜಾರು ಪ್ರದೇಶವು ಸುಮಾರು 20 ಕಿ.ಮೀ.ಗಳಿದ್ದು ಇಲ್ಲಿಗೆ ಹೋಗಿ ಬರಲು ಗೋಂಡಾಲ ಕೇಬಲ್ ಕಾರಿನ ಸೌಕರ್ಯವೂ ಇದೆ. ಈ ಇಳಿಜಾರನ್ನು ಅತ್ಯಂತ ನುಣುಪಾಗಿ ಮಾಡಲು ಸ್ನೋ ಪ್ಯಾಕಿಂಗ್ ಮೆಷೀನ್ ಹಾಗೂ ಸ್ನೋ ಬೀಟರ್ಸ್ ಗಳನ್ನು ಬಳಸಲಾಗುತ್ತದೆ. ಸ್ಕೀಯಿಂಗ್ ಸ್ಥಳದಲ್ಲಿ ಎತ್ತರವಾದ ಮರಗಳು ಇರುವುದರಿಂದ ಇದು ಸುರಕ್ಷಿತವೂ ಹೌದು. ಈ ಮರಗಳು ಸ್ಕೀಯಿಂಗ್ ಮಾಡುವ ಸಮಯದಲ್ಲಿ ವಿಪರೀತವಾದ ವಾಯುಭಾರ ಆಗುವುದನ್ನು ತಡೆಗಟ್ಟುತ್ತದೆ. ಬೇಸಿಗೆ ಕಾಲದಲ್ಲಿ ಇಲ್ಲಿ ಸ್ಕೀಯಿಂಗ್ ಮಾಡುವುದು ಅತ್ಯಂತ ಸೂಕ್ತವಾದ ಕಾಲವಾಗಿದೆ.

ಔಲಿಯಲ್ಲಿರುವ ವಿವಿಧ ಏಜೆನ್ಸಿಗಳು ಸ್ಕೀ ಸಾಮಗ್ರಿಗಳು, ಸ್ನೋ ಬೀಟರ್ಸ್ ಹಾಗೂ ವಿಶೇಷ ಸ್ಕೀಯಿಂಗ್ ಪ್ಯಾಕೇಜ್ ಒದಗಿಸಿಕೊಡುತ್ತವೆ. ಸ್ಕೀಯಿಂಗ್ ನಲ್ಲಿ ಭಾಗವಹಿಸಲು ಬಯಸುವ ಪ್ರವಾಸಿಗರು ತಮ್ಮೊಂದಿಗೆ ವುಲ್ಲನ್ ಸಾಕ್ಸ್, ಕ್ಯಾಪ್, ಗ್ಲೌಸ್, ಕಪ್ಪು ಕನ್ನಡಕ, ಪುಲ್ ಓವರ್ಸ್, ವಿಂಡ್ ಫ್ರೂಫ್ ಜಾಕೆಟ್ಸ್, ಮಫ್ಲರ್, ಗಮ್ ಬೂಟ್ ಹಾಗು ಒಂದು ಟಾರ್ಚ್ ಕೂಡ ತರಬೇಕಾಗುತ್ತದೆ. ಸ್ಕೀಯಿಂಗ್ ತರಬೇತಿ ಪಡೆಯಲು ಬರುವವರೆಲ್ಲರಿಗೂ ಔಲಿಯಲ್ಲಿ ಉತ್ತಮ ಸ್ಕೀಯಿಂಗ್ ತರಬೇತಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Please Wait while comments are loading...