ಇದು ಔಲಿಯ ಪ್ರಮುಖ ಆಕರ್ಷಕ ಪ್ರವಾಸಿತಾಣಗಳಲ್ಲೊಂದಾಗಿದ್ದು, ಸಮುದ್ರ ಮಟ್ಟದಿಂದ 23490 ಅಡಿ ಎತ್ತರದಲ್ಲಿದೆ. ಈ ಪ್ರದೇಶದಲ್ಲಿ ಶಿವನನ್ನು ಆರಾಧಿಸಲಾಗುವುದರಿಂದ ಆತನ ತ್ರಿಶೂಲದ ಹೆಸರನ್ನೇ ಈ ಶೃಂಗಕ್ಕೆ ಇಡಲಾಗಿದೆ. ಇಲ್ಲಿಯೂ ಕೂಡ ಸ್ಕೀಯಿಂಗ್ ಗೆ ಅನುಕೂಲವಾದ ಪ್ರದೇಶವಿದ್ದು ಇಂಡೋ ಟಿಬೇಟ್ ಗಡಿ ಭದ್ರತಾ ಪಡೆಯ ಪೋಲೀಸರಿಗೆ ಇಲ್ಲಿ ಸ್ಕೀಯಿಂಗ್ ತರಬೇತಿ ನೀಡಲಾಗುವುದು.
ಈ ಬೆಟ್ಟದ ತಪ್ಪಲಿನಲ್ಲಿ ರೂಪಕಲಾ ಸರೋವರ ಇದ್ದು ಇದನ್ನು 'ಮಿಸ್ಟೀರಿಯಸ್ ವಾಟರ್ ಬಾಡಿ' ಎಂದೂ ಕರೆಯುತ್ತಾರೆ. ಈ ಸರೋವರದಲ್ಲಿ ಸುಮಾರು 600 ಮಾನವ ಹಾಗೂ ಕುದುರೆಯ ಅಸ್ಥಿಪಂಜರಗಳು ಸಿಕ್ಕಿವೆ. ತ್ರಿಶೂಲ್ ಪೀಕ್ ನಿಂದ ಕೌಸಾನಿ ಹಾಗೂ ಬೀಡಿನಿ ಬುಗ್ಯಾಲ್ ಪ್ರದೇಶವನ್ನೂ ನೋಡಬಹುದು.