ಭರತ್ಪುರ್ - ಬನ್ನಿ, ಪಕ್ಷಿಗಳ ಜೊತೆ ಸುಮಧುರ ಸಮಯ ಕಳೆಯಿರಿ

ಭಾರತದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಭರತ್ಪುರ್ ಕೂಡ ಒಂದು. ಇದನ್ನು 'ರಾಜಸ್ಥಾನಕ್ಕೆ ಪೂರ್ವದ ದಾರಿ' ಎಂದೂ ಕೂಡ ಕರೆಯಲಾಗುತ್ತದೆ. ಇದು ರಾಜಸ್ಥಾನದ ಭರತ್ಪುರ್ ಜಿಲ್ಲೆಯಲ್ಲಿದೆ. 1733 ರಲ್ಲಿ ಮಹಾರಾಜಾ ಸೂರಜ್ ಮಲ್ ನಿಂದ ನಿರ್ಮಿತವಾದ ಈ ಪಟ್ಟಣ ಒಂದು ಪುರಾತನ ನಗರ. ಹಿಂದುಗಳ ದೇವತೆಯಾದ ಭಗವಾನ್ ರಾಮನ ಸಹೋದರ ಭರತನ ಗೌರವವಾಗಿ ಇದಕ್ಕೆ ಭರತ್ಪುರ್ ಎಂದು ಹೆಸರಿಸಲಾಗಿದೆ.

ರಾಮನ ಮತ್ತೊಬ್ಬ ಸಹೋದರನಾದ ಲಕ್ಷ್ಮಣನನ್ನೂ ಕೂಡ ಇಲ್ಲಿ ಮನೆ ದೇವತೆಯಾಗಿ ಪೂಜಿಸಲಾಗುತ್ತದೆ. 'ಲೋಹ್ ಗರ್' ಎಂಬ ಹೆಸರಿನಿಂದಲೂ ಖ್ಯಾತಿಯಾಗಿರುವ ಭರತ್ಪುರ್, ಜನಪ್ರಿಯ ಪ್ರವಾಸಿ ಸ್ಥಳಗಳಾದ ಜೈಪುರ್, ಉದಯ್ ಪುರ್, ಜೈಸಲ್ಮೇರ್ ಮತ್ತು ಜೋಧಪುರ್ ಗೆ ಹೋಗಲು ಮಾರ್ಗವಾಗಿದೆ. ಭರತ್ಪುರ್ ಜಿಲ್ಲೆಯು ಹರಿಯಾಣಾ, ಉತ್ತರ ಪ್ರದೇಶ, ಢೋಲ್ಪುರ್, ಕರೌಲಿ, ಜೈಪುರ್ ಮತ್ತು ಅಲ್ವಾರ್ ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ.

ಪಕ್ಷಿಗಳಿಗೆ ಸ್ವರ್ಗ

ಪಕ್ಷಿ ವೀಕ್ಷಕರ ಸ್ವರ್ಗವೆಂದೇ ಹೇಳಲಾಗುವ, ರಾಷ್ಟ್ರೀಯ ಪಾರ್ಕ್ ನಿಂದ ಭರತ್ಪುರ್ ವಿಶ್ವವಿಖ್ಯಾತವಾಗಿದೆ. ಈ ಪಾರ್ಕ್ ಒಂದು ನೈಸರ್ಗಿಕ ಅವಾಸಸ್ಥಾನವಾಗಿದ್ದು ಸುಮಾರು 375 ವಿಧಗಳ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಚಳಿಗಾಲ ಮತ್ತು ಮಳೆಗಾಲವು ಈ ಪಾರ್ಕ್ ಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ವಲಸೆ ನೀರು ಕೋಳಿಗಳು ಅದರಲ್ಲೂ ಬಾರ್ ಹೆಡೆಡ್ ಮತ್ತು ಗ್ರೇ ಲ್ಯಾಗ್ ಗೀಸ್ ಗಳು ಮತ್ತು ಇನ್ನಿತರ ಪಕ್ಷಿಗಳಾದ ಪಿನ್ ಟೇಲ್ ಗಳು, ಕಾಮನ್ ಟೇಲ್ ಗಳು, ಕಾಡು ಬಾತುಗಳು, ಶಾವೆಲೇರ್ಸ್ ಗಳು, ಸಾಮಾನ್ಯ ಹೆಣ್ಣು ಬಾತುಗಳು, ಕೆಂಪು ಜುಟ್ಟುಳ್ಳ ಪೋಚರ್ಡ್ ಗಳು ಮತ್ತು ಗಾಡ್ವಾಲ್ ಗಳು ಇಲ್ಲಿ ಕಾಣಸಿಗುವ ಕೆಲವು ಪಕ್ಷಿ ಪ್ರಭೇದಗಳು.

ಪ್ರಕಾರಗಳ ಮಿಶ್ರಣವನ್ನು ಹೊಂದಿದ ವಾಸ್ತುಶಿಲ್ಪ

ಭರತ್ಪುರಿನ ಸ್ಮಾರಕಗಳ ವಾಸ್ತು ಕಲೆಯು ರಜಪೂತ್, ಮುಘಲ್ ಮತ್ತು ಬ್ರಿಟೀಷ್ ವಾಸ್ತುಕಲೆಯಿಂದ ಪ್ರಭಾವಿತವಾಗಿವೆ. ಲೋಹಗರ್ ಕೋಟೆಯು, ರಾಜಸ್ಥಾನಿನ ಒಂದು ಸುಪ್ರಸಿದ್ಧ ಕೋಟೆಯಾಗಿದೆ. ಇಲ್ಲಿರುವ ಇನ್ನಿತರ ಪ್ರಸಿದ್ಧ ಪ್ರವಾಸಿ ತಾಣಗಳೆಂದರೆ ದೀಗ್ ಕೋಟೆ, ಭರತ್ಪುರ್ ಪ್ಯಾಲೇಸ್, ಗೋಪಾಲ್ ಭವನ್ ಮತ್ತು ನಗರದಲ್ಲಿರುವ ಸರ್ಕಾರಿ ಸಂಗ್ರಹಾಲಯ. ಬಾಂಕೆ ಬಿಹಾರಿ ದೇವಸ್ಥಾನದ ಜೊತೆಗೆ ಇಲ್ಲಿರುವ ಗಂಗಾ ದೇವಸ್ಥಾನ ಮತ್ತು ಲಕ್ಷ್ಮಣ ದೇವಸ್ಥಾನಗಳೂ ಕೂಡ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ.

ಭರತ್ಪುರ್ ಗೆ ತಲುಪಲು

ಈ ಸುಂದರವಾದ ಸ್ಥಳವನ್ನು ಸಾರಿಗೆಯ ಮೂರು ರೂಪಗಳಾದ ವಾಯು, ರೈಲು ಮತ್ತು ರಸ್ತೆಗಳ ಮೂಲಕ ಸುಲಭವಾಗಿ ತಲುಪ್ಬಹುದಾಗಿದೆ. ಪ್ರವಾಸಿಗರು ದೆಹಲಿಯ ಇಂದಿರಾಗಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಈ ಸ್ಥಳಕ್ಕೆ ಟ್ಯಾಕ್ಸಿ ಅಥವಾ ಬಸ್ಸಿನ ಮುಖಾಂತರ ಮುಟ್ಟಬಹುದು. ಈ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಮುಂಬೈ, ಬೆಂಗಳೂರು, ಕೊಲ್ಕತ್ತಾ ಮತ್ತು ಚೆನ್ನೈಗಳಿಗೆ ವಿಮಾನಗಳು ಲಭ್ಯವಿರುತ್ತವೆ. ಭರತ್ಪುರ್ ರೈಲು ನಿಲ್ದಾಣವು ದೆಹಲಿ, ಮುಂಬೈ, ಅಹ್ಮದಾಬಾದ್ ಮತ್ತು ಜೈಪುರ್ ನೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ರಾಜ್ಯದ ಅಧಿಕೃತ ಮತ್ತು ಖಾಸಗಿ ಬಸ್ಸುಗಳ ಸೇವೆಯು ಭರತ್ಪುರ್ ನಿಂದ ಆಗ್ರಾ, ದೆಹಲಿ, ಫತೇಪುರ್ ಸಿಕ್ರಿ, ಜೈಪುರ್ ಮತ್ತು ಅಲ್ವಾರ್ ಗೆ ಲಭ್ಯವಿದೆ.

ಥಾರ್ ಮರಭೂಮಿಗೆ ಹತ್ತಿರವಾಗಿರುವುದರಿಂದ ಭರತ್ಪುರ್ ಯಾದೃಚ್ಛಿಕವಾದ ಹವಾಗುಣವನ್ನು ಹೊಂದಿದೆ. ಮಳೆಗಾಲ ಮತ್ತು ಚಳಿಗಾಲವು ಭರತ್ಪುರ್ ಗೆ ಭೇಟಿ ನೀಡಲು ಉತ್ತಮ ಕಾಲಗಳಾಗಿವೆ.

Please Wait while comments are loading...