Search
 • Follow NativePlanet
Share

ಚಂಫೈ : ಮಯನ್ಮಾರ್ ಗೆ ವಾಣಿಜ್ಯ ಹೆಬ್ಬಾಗಿಲು

18

ಸಂಸ್ಕೃತಿ ಮತ್ತು ಪರಂಪರೆಯಿಂದ ಸಿಂಗರಿಸಲ್ಪಟ್ಟ ಭವ್ಯ ಮಯನ್ಮಾರ್ ಬೆಟ್ಟಗಳ, ಮೇಲಿರುವ ಜನಪ್ರಿಯವಾಗಿ 'ಮಿಜೋರಾಂ ಅನ್ನದ ಪಾತ್ರೆ' ಎಂದು ಕರೆಯಲಾಗುವ ಚಂಫೈ ಈಶಾನ್ಯ ಭಾರತದಲ್ಲಿನ ಒಂದು ಪ್ರಮುಖವಾದ ಪ್ರವಾಸಿ ತಾಣವಾಗಿದೆ. ಈ ಅದ್ಭುತ ತಾಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಲೇಬೇಡಿ! ಚಂಫೈ ಪ್ರವಾಸೋದ್ಯಮ ತಾಣ, ಬುಡಕಟ್ಟು ಜನರ ಸಂಪ್ರದಾಯಗಳನ್ನು ಹೊತ್ತು ನಿಂತಿರುವ ಈ ತಾಣ, ಸುಂದರವಾದ ಬಣ್ಣಗಳಿಂದ ಮತ್ತು ಸಮೃದ್ಧಿಯಿಂದ ಅರಳಿನಿಂತ ಆರ್ಕಿಡ್ ಗಳು ಹಾಗೂ ಕಾಲ್ಪನಿಕ ಕಥೆಗಳಲ್ಲಿನ ವರ್ಣನೆಯಂತೆ ಸ್ವಚ್ಛಂದವಾಗಿ ಹಾರುವ ಚಿಟ್ಟೆಗಳಿಂದ ತುಂಬಿದ್ದು ಪ್ರವಾಸಿಗರಿಗೆ ರೋಮಾಂಚಕರ ಅನುಭವವನ್ನು ನೀಡುತ್ತದೆ. ಚಂಫೈ ಪಟ್ಟಣ, ನೀಲಿ ಮಯನ್ಮಾರ್ ಬೆಟ್ಟಗಳ ಭವ್ಯವಾದ ನೋಟವನ್ನು ಒದಗಿಸುತ್ತದೆ. ಜಿಲ್ಲೆಯಲ್ಲಿನ ಹಳ್ಳಿಗಳು ಸಣ್ಣ ಕೊಪ್ಪಲಗಳ ರೂಪದಲ್ಲಿವೆ. ಪ್ರಾಚೀನ ಸ್ಮಾರಕಗಳು ಮತ್ತು ಏಕಶಿಲೆಗಳು, ಮಿಜೋ ಬುಡಕಟ್ಟು ಜನಾಂಗದ ಧೀರ ಇತಿಹಾಸವನ್ನು ಬಿಂಬಿಸುವುದರ ಜೊತೆಗೆ ಚಂಫೈ ಅನ್ನು ಸಂಸ್ಕೃತಿ ಮತ್ತು ಸಂಪ್ರದಾಯದ ಶ್ರೀಮಂತ ಪಟ್ಟಣವನ್ನಾಗಿಸಿವೆ.

ಚಂಫೈ, ಮಿಜೋರಾಂ ನಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಪಟ್ಟಣ ಹಾಗೂ ಚಂಫೈ ಜಿಲ್ಲೆಯ ಕೇಂದ್ರ ಕಾರ್ಯಾಲಯವೂ ಆಗಿದೆ. ಇದು ಆಯಕಟ್ಟಿನ ಸ್ಥಳ ಹಾಗೂ ಮಯನ್ಮಾರ್ ಹತ್ತಿರದಲ್ಲಿರುವ ಬೆಳೆಯುತ್ತಿರುವ ಗಡಿ ಪಟ್ಟಣವಾಗಿದೆ. ಇದನ್ನು ಭಾರತ ಮತ್ತು ಮಯನ್ಮಾರ್ ನ ಮುಖ್ಯ ವ್ಯಾಪಾರ ಕಾರಿಡಾರ್ /ಕೇಂದ್ರವನ್ನಾಗಿ ಪರಿಗಣಿಸಲಾಗಿದೆ.

ಚಂಫೈನ ಹಾಗೂ ಸುತ್ತಲಿನ ಪ್ರವಾಸಿ ತಾಣಗಳು

ಚಂಫೈ ನಗರ, ಮಯನ್ಮಾರ್ ಮತ್ತು ಮುಂದಿನ ಆಗ್ನೇಯ ಏಷ್ಯಾಕ್ಕೆ ವ್ಯಾಪಾರ ಮಾರ್ಗವಾಗಿ ತೆರೆದುಕೊಳ್ಳುವುದರ ಮೂಲಕ ಕೇವಲ ಬೆಳೆಯುತ್ತಿರುವ ವ್ಯಾಪಾರಿ ನಗರ ಮಾತ್ರವಾಗಿರದೆ ಭಾರತದ ಒಂದು ಅದ್ಭುತ ಪ್ರವಾಸಿ ತಾಣವೂ ಕೂಡ ಆಗಿದೆ. ಚಂಫೈನ ಸಮತಟ್ಟಾದ ಭೂಮಿ, ಸುಂದರವಾದ ಮಯನ್ಮಾರ್ ಬೆಟ್ಟಗಳಿಂದ ಸುತ್ತುವರೆದ ಮನಮೋಹಕ ತಾಣ. ಚಂಫೈ ಪಟ್ಟಣ, ಮುರ್ಲಿನ್ ರಾಷ್ಟ್ರೀಯ ಉದ್ಯಾನ, ಮುರಾ ಪುಕ್, ರಿಹ್ ದಿಲ್ ಸರೋವರ ಮತ್ತು ಥಶ್ಯೀಮಾ ಸೆನೊ ನೈನಾ ಮೊದಲಾದ ಪ್ರವಾಸಿ ಸ್ಥಳಗಳಿಗೆ ಅತ್ಯಂತ ಪ್ರಸಿದ್ಧವಾಗಿದೆ.

ಚಂಫೈನ ಸಾಂಸ್ಕೃತಿಕ ಇತಿಹಾಸ

ಚಂಫೈ ಪ್ರವಾಸೋದ್ಯಮದ ಸಾಂಸ್ಕೃತಿಕ ಅಂಶಗಳು ಸೂಕ್ಷ್ಮದರ್ಶಿ ಪ್ರಯಾಣಿಕರಲ್ಲಿ ಆಸಕ್ತಿಯುಂಟುಮಾಡುತ್ತದೆ. ಮಿಜೋ ಗಳ ಇತಿಹಾಸ ಪ್ರಾರಂಭವಾಗಿದ್ದು ಹಾಗೂ ಕೊನೆಯಾಗಿದ್ದು ಚಂಫೈ ನಲ್ಲೇ ಎಂದು ನಂಬಲಾಗಿದೆ. ಆದ್ದರಿಂದ, ಇದು ಪ್ರಾಚೀನ ಸ್ಮಾರಕಗಳು ಹಾಗು ಇಲ್ಲಿನ ದಂತಕಥೆಗಳು ಮಿಜೋಗಳ ಜಾನಪದ ಲೋಕಕ್ಕೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತದೆ.  ಪ್ರಸ್ತುತ ಮಿಜೋರಾಮ್‍ನ ಅನೇಕ ಭಾಗಗಳಲ್ಲಿ ಇರುವ ಅನೇಕ ಬುಡಕಟ್ಟು ಸಮುದಾಯಗಳು ಒಮ್ಮೆ ಚಂಫೈ ನಲ್ಲಿ ವಾಸಿಸುತ್ತಿದ್ದವರು ಎಂದು ನಂಬಲಾಗಿದೆ. ರಲ್ಟಿಗಳು ಮತ್ತು ಸೈಲೊಗಳು ಈ ಸ್ಥಳವನ್ನು ಫಲವತ್ತಾದ ಕೃಷಿ ಭೂಮಿಯನ್ನಾಗಿ ನಿರ್ಮಿಸಿದ್ದಾರೆ.

ಚಂಫೈ ತಲುಪುವುದು ಹೇಗೆ?

ಚಂಫೈ,  ಮಿಜೋರಾಮ್ ರಾಜಧಾನಿ ಐಜ್ವಾಲ್ ನಿಂದ 192 ಕಿಲೋಮೀಟರ್ ದೂರದಲ್ಲಿದೆ. ರಸ್ತೆ ಎರಡು ಪಟ್ಟಣಗಳು ನಡುವೆ ಸಾಕಷ್ಟು ಉತ್ತಮ, ಮತ್ತು ನಿಯಮಿತ ಬಸ್ ಸೇವೆ ಲಭ್ಯವಿದೆ. ಇದರ ಹೊರತಾಗಿ  ಖಾಸಗಿ ಸಾರಿಗೆ ಮತ್ತು ಟ್ಯಾಕ್ಸಿಗಳು ನಿಯಮಿತವಾದ ಅಂತರಗಳಲ್ಲಿ ಲಭ್ಯವಿದೆ.

ಚಂಫೈ ಹವಾಮಾನ

ಚಂಫೈ ನಗರವು ವರ್ಷಪೂರ್ತಿ ಆಹ್ಲಾದಕರ ಹವಾಗುಣ ಹೊಂದಿದ್ದು  ಅಮೋಘವಾದ ನಗರ. ಬೇಸಿಗೆಯು ಹಿತಕರವಾಗಿರುತ್ತದೆ. ಜೊತೆಗೆ ಚಳಿಗಾಲ ಇಲ್ಲಿ  ಸೌಮ್ಯವಾಗಿರುತ್ತದೆ. ಮಿಜೋರಾಂ ಇತರ ಭಾಗಗಳಂತೆ ಚಂಫೈ ಕೂಡ ಮಾನ್ಸೂನ್ ತಿಂಗಳಲ್ಲಿ ಭಾರೀ ಮಳೆಯನ್ನು ಅನುಭವಿಸುತ್ತದೆ. ಪ್ರವಾಸಿಗರು ವರ್ಷಪೂರ್ತಿ ಈ  ಪಟ್ಟಣಕ್ಕೆ ಭೇಟಿ ನೀಡಬಹುದು.

ಚಂಫೈ ಪ್ರಸಿದ್ಧವಾಗಿದೆ

ಚಂಫೈ ಹವಾಮಾನ

ಚಂಫೈ
29oC / 83oF
 • Partly cloudy
 • Wind: S 7 km/h

ಉತ್ತಮ ಸಮಯ ಚಂಫೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಚಂಫೈ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 54, ರಾಜ್ಯದ ಇತರ ಭಾಗಗಳಿಗೆ ಚಂಫೈ ನಗರವನ್ನು ಸಂಪರ್ಕಿಸುತ್ತದೆ. ಚಂಫೈ ಮಿಜೋರಾಂ ನ ಒಂದು ಜನನಿಬಿಡತೆಯಿರುವ ವ್ಯಾಪಾರ ಪಟ್ಟಣವಾದ್ದರಿಂದ ರಸ್ತೆ ಸಂಪರ್ಕ ಬಹಳ ಉತ್ತಮವಾಗಿದೆ. ಪ್ರವಾಸಿಗರು ಸುಲಭವಾಗಿ ನಿಯಮಿತವಾಗಿ ಚಲಿಸುವ ಬಸ್ ಗಳು ಮತ್ತು ಈ ಮಾರ್ಗದಲ್ಲಿ ಚಲಿಸುವ ಇತರ ಸಣ್ಣ ವಾಹನಗಳನ್ನು ಪ್ರಯಾಣಕ್ಕೆ ಆಯ್ಕೆಮಾಡಿಕೊಳ್ಳಬಹುದು. ಐಜ಼ಾಲ್ ನಿಂದ ಚಂಫೈ ತಲುಪಲು ಸುಮಾರು ನಾಲ್ಕು ಘಂಟೆಗಳ ಅವಧಿ ಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಿಜೋರಾಮ್ ನಲ್ಲಿ ರೈಲ್ವೆ ನಿಲ್ದಾಣವಿಲ್ಲ. ಅದಾಗ್ಯೂ ಚಂಫೈ ಗೆ ಹತ್ತಿರದ ರೈಲು ನಿಲ್ದಾಣ ಸುಮಾರು 352 ಕಿಲೋಮೀಟರ್ ದೂರವಿರುವ ಅಸ್ಸಾಂನ ಸಿಲ್ಚರ್. ಇಲ್ಲಿಂದ ಚಂಫೈ ತಲುಪಲು ಆರು ಘಂಟೆಗಳ ಅವಧಿ ಬೇಕಾಗುವುದು. ಸಿಲ್ಚರ್ ರೈಲು ನಿಲ್ದಾಣ ಒಂದು ಸಣ್ಣ ನಿಲ್ದಾಣವಾಗಿದ್ದು, ಗೌಹಾತಿಗೆ ಸಂಪರ್ಕ ಕಲ್ಪಿಸುವ ಲುಮ್ಡಿಂಗ್ ನ್ಯಾರೋ ಗೇಜು ಮಾರ್ಗವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಚಂಫೈ ನ ಹತ್ತಿರದ ವಿಮಾನ ನಿಲ್ದಾಣವು ಸರಿಸುಮಾರು 192 ಕಿಲೋಮೀಟರ್ ದೂರ ಇರುವ ಐಜ಼ಾಲ್ ವಿಮಾನ ನಿಲ್ದಾಣವಾಗಿದೆ. ಲೆಂಗುಪಿ ವಿಮಾನ ನಿಲ್ದಾಣದಿಂದ ಗೌಹಾತಿ, ಕೋಲ್ಕತ್ತಾ, ಅಗರ್ತಲ ಮತ್ತು ಇಂಫಾಲ್ ಗೆ ಪ್ರತಿನಿತ್ಯ ವಿಮಾನಗಳಿವೆ. ವಿಮಾನಯಾನ ಸ್ವಲ್ಪ ದುಬಾರಿ ಆದರೂ, ಇದು ಅತ್ಯಂತ ವೇಗವಾಗಿ ಚಂಫೈ ಅನ್ನು ತಲುಪುವ ಮಾರ್ಗವಾಗಿದೆ. ವಿಮಾನ ನಿಲ್ದಾಣದಿಂದ, ನೇರವಾಗಿ ಚಂಫೈ ಗೆ ಷಟಲ್ ಗಳು ಲಭ್ಯ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Sep,Tue
Return On
30 Sep,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Sep,Tue
Check Out
30 Sep,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Sep,Tue
Return On
30 Sep,Wed
 • Today
  Champhai
  29 OC
  83 OF
  UV Index: 7
  Partly cloudy
 • Tomorrow
  Champhai
  18 OC
  65 OF
  UV Index: 7
  Partly cloudy
 • Day After
  Champhai
  18 OC
  65 OF
  UV Index: 7
  Partly cloudy