Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಫೈ » ಹವಾಮಾನ

ಚಂಫೈ ಹವಾಮಾನ

ಚಂಫೈನಲ್ಲಿನ ಸಮಶೀತೋಷ್ಣ ಹವಾಮಾನವಿರುವುದರಿಂದ ವರ್ಷದ ಉದ್ದಕ್ಕೂ ಪ್ರವಾಸಿಗರು ಪ್ರಯಾಣ ಮಾಡಬಹುದು. ಬೇಸಿಗೆ ಮತ್ತು ಚಳಿಗಾಲ ಸೌಮ್ಯವಾಗಿದ್ದು, ಬೆಟ್ಟಗಳಲ್ಲಿ ಗುಹೆಗಳು ಮತ್ತು ಪಟ್ಟಣವನ್ನು ಸುತ್ತುವರೆದಿರುವ ಸರೋವರಗಳು  ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂಗಾರಿನಲ್ಲಿ  ಪ್ರಯಾಣ ಮಾಡುವುದು ಸ್ವಲ್ಪ ಕಷ್ಟವಾದರೂ  ಪರಿಶೋಧಕರು ಮತ್ತು ಸಾಹಸಿಗರಿಗೆ ಅದ್ಭುತವಾದ ತಾಣ.

ಬೇಸಿಗೆಗಾಲ

ಚಂಫೈ ನಗರದಲ್ಲಿ ಬೇಸಿಗೆಯು ಮಾರ್ಚ್ ನಲ್ಲಿ ಆರಂಭವಾಗಿ ಮೇ ತಿಂಗಳಿನಲ್ಲಿ  ಕೊನೆಗೊಳ್ಳುತ್ತದೆ. ಇಲ್ಲಿನ ತಾಪಮಾನ 15 ಡಿ.ಸೆ ನಿಂದ 30 ಡಿ.ಸೆ ವರೆಗೆ ದಾಖಲಾಗುತ್ತದೆ.

ಮಳೆಗಾಲ

ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್  ತಿಂಗಳಿನಲ್ಲಿ  ಈ ಜಿಲ್ಲೆಯಲ್ಲಿ  ಧಾರಾಕಾರ  ಮಳೆ ಸುರಿಯುತ್ತದೆ. ಚಂಫೈ ನಲ್ಲಿ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುತ್ತದೆ. ಚಂಫೈ ನಗರವನ್ನು ಸುತ್ತುವರೆದ ಗುಡ್ಡಗಳು, ಮುಂಗಾರಿನಲ್ಲಿ ವಿಶೇಷ  ಸೌಂದರ್ಯ ಮತ್ತು ಬಣ್ಣದಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲವು ಚಂಫೈನಲ್ಲಿ ಸೌಮ್ಯವಾಗಿದ್ದು,  20 ಡಿ.ಸೆವರೆಗೆ ತಾಪಮಾನ ದಾಖಲಾಗುತ್ತದೆ.  ಈ ತಿಂಗಳುಗಳಲ್ಲಿ 10 ಡಿ.ಸೆ ನಿಂದ ಗರಿಷ್ಠ 20 ಡಿ.ಸೆ ನಷ್ಟು ತಾಪಮಾನ ದಾಖಲಾಗುತ್ತದೆ. ಚಳಿಗಾಲವು ನವೆಂಬರ್ ನಿಂದ ಫೆಬ್ರವರಿ ತಿಂಗಳಿನವರೆಗೆ ಇರುತ್ತದೆ. ಜನವರಿ ಅತ್ಯಂತ ತಂಪಾಗಿರುತ್ತದೆ. ಚಳಿಗಾಲದಲ್ಲಿ ಚಂಫೈಗೆ ಭೇಟಿ ನೀಡುವಾಗ ಉಣ್ಣೆ ಬಟ್ಟೆಯನ್ನು ಧರಿಸಲೇಬೇಕು.