Search
 • Follow NativePlanet
Share
ಮುಖಪುಟ » ಸ್ಥಳಗಳು» ಸಿಲ್ಚರ್

ಸಿಲ್ಚರ್ : ಬರಾಕ್ ನದಿಯಿಂದ ಆವೃತ ತಾಣ

15

ಸಿಲ್ಚರ್ ದಕ್ಷಿಣ ಅಸ್ಸಾಂನಲ್ಲಿರುವ ಕಚಾರ್ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಸಣ್ಣದಾದರೂ ಸುಂದರವಾದ ನಗರ ಸಿಲ್ಚರ್ ವಿಭಿನ್ನವಾಗಿ ಆಕರ್ಷಕವಾಗಿದೆ. ಬರಾಕ್ ನದಿಯು ಈ ನಗರವನ್ನ್ನು ಆವರಿಸಿದೆ ಮತ್ತು ನಗರದ ಸೌಂದರ್ಯವನ್ನು ದುಪ್ಪಟ್ಟಾಗಿಸಿದೆ. ಸಿಲ್ಚರ್ ಹಾಗೂ ಸುತ್ತಮುತ್ತಲಿನ ನಗರಳ ಸುತ್ತ ಬರಾಕ್ ನದಿಯು ಹಾದು ಹೋಗುವ ಕಾರಣ ಇವುಗಳನ್ನು ಬರಾಕ್ ನದಿಯ ಕಣಿವೆ ಪ್ರದೇಶಗಳು ಎಂದು ಕರೆಯಲಾಗುತ್ತದೆ.

ಭೌಗೋಳಿಕವಾಗಿ ಸಿಲ್ಚರ್ ಮಣಿಪುರ ಮತ್ತು ಮಿಜ಼ೋರಾಂ ಗೆ ಸಂಪರ್ಕದಲ್ಲಿದ್ದು ಇಲ್ಲಿಂದ ದೇಶದ ಇತರೆ ಭಾಗಗಳಿಗೆ ಸಂಪರ್ಕ ಸಾಧಿಸುತ್ತದೆ. ಈ ಕಾರಣದಿಂದಾಗಿ ಇದು ಆರ್ಥಿಕವಾಗಿ ಯಾವಾಗಲೂ ಹೆಚ್ಚು ಚಾಲ್ತಿಯಲ್ಲಿರುತ್ತದೆ. ಇದರ ಜೊತೆಗೆ ಇಲ್ಲಿನ ಚಹಾದ ಎಸ್ಟೇಟ್ ಗಳು ಇಲ್ಲಿನ ಆರ್ಥಿಕತೆಗೆ ಹೆಚ್ಚಿನ ಮಹತ್ವ ತಂದಿದೆ. ಇದು ಭತ್ತ, ಚಹಾ ಮತ್ತು ಇತರ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಕೇಂದ್ರ ಸ್ಥಳವೂ ಆಗಿದೆ.

ಸಿಲ್ಚರ್ ಪ್ರವಾಸೋದ್ಯಮ : ಸಿಲ್ಚರ್ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಸಿಲ್ಚರ್ ಸುತ್ತಮುತ್ತಲಿನ ಸ್ಥಳಗಳಲ್ಲಿ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿವೆ. ನಗರದ ಸಾಮಾನ್ಯ ನೋಟ ನಿಮ್ಮನ್ನು ಬೇಸರಗೊಳಿಸಿದರು ಬೆಟ್ಟದ ಮೇಲಿನ ದೇವಾಲಯಗಳು ಅಲ್ಲಿಗೆ ಸಾಗಿ ಹೋಗುವ ದಾರಿ ನಿಮ್ಮನ್ನು ರಂಜಿಸದೇ ಇರದು.  ಸಿಲ್ಚರ್ ಪ್ರವಾಸೋದ್ಯಮದ ಪ್ರಮುಖ ಸ್ಥಳ ಕಾಂಚಾ ಕಾಂತಿ ದೇವಿ ದೇವಾಲಯವಾಗಿದೆ. ಇದು ನಗರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗಳಿಬ್ಬರಿಂದಲೂ ಬಹಳವೇ ಪ್ರಶಂಸೆಗೆ ಪಾತ್ರವಾದ ದೇವಾಲಯವಾಗಿದೆ. ಇತರೆ ಸ್ಥಳಗಳೆಂದರೆ ಭುವನ್ ಮಹಾದೇವ್ ದೇವಾಲಯ, ಹುತಾತ್ಮರ ಸಮಾಧಿ ಮತ್ತು ಖಾಸ್ ಪುರ್.

ಸಿಲ್ಚರ್ ತಲುಪುವುದು ಹೇಗೆ

ದಕ್ಷಿಣ ಅಸ್ಸಾಂ ನಲ್ಲಿರುವ ಈ ನಗರದಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ನಗರದ ಮೂಲಕ ಹಾದು ಹೋಗುವ ರಾಷ್ಟೀಯ ಹೆದ್ದಾರಿ ಇದ್ದು ನಗರವನ್ನು ದೇಶದ ನಾನಾ ಭಾಗಗಳಿಗೆ ಸಂಪರ್ಕಿಸುತ್ತದೆ. ಇಲ್ಲಿನ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ಮತ್ತು ಗುವಾಹಟಿ ಗೆ ಪ್ರತಿದಿನ ವಿಮಾನ ಸಂಚಾರವಿದ್ದು ಸಿಲ್ಚರ್ ನಿಂದ ಗುವಾಹಟಿಯನ್ನು ಸಂಪರ್ಕಿಸುವ ರಾ.ಹೆ. 44 ಅಷ್ಟೊಂದು ಸುಸ್ಥಿತಿಯಲ್ಲಿಲ್ಲ.

ಸಿಲ್ಚರ್ ವಾಯುಗುಣ

ಸಿಲ್ಚರ್ ವಾಯುಗುಣದ ಪ್ರಮುಖ ಅಂಶಗಳೆಂದರೆ ಹೆಚ್ಚಾದ ಮಳೆ, ಶುಷ್ಕ ಬೇಸಗೆ ಮತ್ತು ಆಹ್ಲಾದಕರವಾದ ಚಳಿಗಾಲ.

ಸಿಲ್ಚರ್ ಪ್ರಸಿದ್ಧವಾಗಿದೆ

ಸಿಲ್ಚರ್ ಹವಾಮಾನ

ಉತ್ತಮ ಸಮಯ ಸಿಲ್ಚರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಿಲ್ಚರ್

 • ರಸ್ತೆಯ ಮೂಲಕ
  ರಾ.ಹೆ. 44 ಸಿಲ್ಚರ್-ಶಿಲ್ಲಾಂಗ್-ಗುವಾಹಟಿಯನ್ನು ಸಂಪರ್ಕಿಸುತ್ತದೆ. ರಸ್ತೆ ಮಾರ್ಗಗಳು ನಗರದ ಜೀವನಾಡಿಯಾಗಿ ಕೆಲಸ ಮಾಡುತ್ತದೆ. ಆದರೂ ಮಲೆಗಾಲದಲ್ಲಿ ಹೆಚ್ಚಾದ ಭೂ ಕುಸಿತದ ಕಾರನದಿಂದಾಗಿ ರಸ್ತೆ ಮಾರ್ಗಗಳ ಸಂಪರ್ಕ ಕಡಿತವಾಗಿ ಸಮಸ್ಯೆ ಉಂಟಾಗುತ್ತದೆ. ಪ್ರತಿದಿನ ಮತ್ತು ರಾತ್ರಿಯ ವೇಲೆ ಗುವಾಹಟಿಯಿಂದ ಶಿಲ್ಲಾಂಗ್ ಮಾರ್ಗವಾಗಿ ಸಿಲ್ಚರ್ ಗೆ ಮತ್ತು ಇದೇ ಮಾರ್ಗದಲ್ಲಿ ವಾಪಸ್ಸು ಬರುವ ಬಸ್ಸುಗಳಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಿಲ್ಚರ್ ಮೀಟರ್ ಗೇಜ್ ರೈಲ್ವೆ ಹಳಿಗಳನ್ನು ಲುಮ್ ಡಿಂಗ್ ತನಕ ಹೊಂದಿದೆ. ಬ್ರಾಡ್ ಗೇಜ್ ರೈಲ್ವೆ ನಿರ್ಮಾಣ ಇನ್ನೂ ಪ್ರಗತಿಯಲ್ಲಿದೆ. ರೈಲ್ವೆ ಮಾರ್ಗವಾಗಿ ಸಿಲ್ಚರ್ ತಲುಪುವ ಉದ್ದೇಶವುಳ್ಳ ಪ್ರಯಾಣಿಗರು ಲುಮ್ ಡಂಗ ತನಕ ಬ್ರಾಡ್ ಗೇಜ್ ರೈಲಿನಲ್ಲಿ ತಲುಪಿ ಅಲ್ಲಿಂದ ಮುಂದೆ ಸಿಲ್ಚರ್ ಗೆ ಮೀಟರ್ ಗೇಜ್ ನಲ್ಲಿ ತಲುಪಬೇಕಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಗರ ಕೇಂದ್ರ ಭಾಗದಿಂದ ಸುಮಾರು 22 ಕಿ.ಮೀ ದೂರದ ಕುಂಭಿಗ್ರಾಮದಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಂದ ಕೋಲ್ಕತ್ತಾ ಮತ್ತು ಗುವಾಹಟಿಗೆ ಪ್ರತಿದಿನ ವಿಮಾನ ಸಂಪರ್ಕವಿದೆ. ಈ ವಿಮಾನ ನಿಲ್ದಾಣವನ್ನು ಬ್ರಿಟಿಷರ ಅವಧಿಯಲ್ಲಿ ಕಟ್ಟಲಾಗಿದ್ದು ಭಾರತೀಯ ಸರ್ಕಾರ ಇದನ್ನು ಮೇಲ್ದರ್ಜೆಗೆ ಏರಿಸಿದೆ. ಇಲ್ಲಿಂದ ಸಿಲ್ಚಾರ್ ನಗರಕ್ಕೆ ಭೇಟಿ ಕೊಡಲು ಟಾಕ್ಸಿ ಸಂಚಾರವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun