Search
 • Follow NativePlanet
Share
ಮುಖಪುಟ » ಸ್ಥಳಗಳು» ಶಿಲ್ಲಾಂಗ್

ಪೂರ್ವಭಾರತದ ಸ್ಕಾಟ್ಲೆಂಡ್ - ಶಿಲ್ಲಾಂಗ್

49

ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು ಎಂಬುದಂತೂ ನಿಸ್ಸಂದೇಹ.  ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ ಪ್ರದೇಶಗಳು, ಅತ್ಯುನ್ನತ ಪರ್ವತಶ್ರೇಣಿಗಳನ್ನು ಮುತ್ತಿಕೊಂಡಿರುವ ಮೋಡಗಳು, ಕಂಪನ್ನು ಸೂಸುವ ಹೂಗಳು, ಯಾವುದೇ ಗ್ರಂಥದಲ್ಲಿ ಅಲಭ್ಯವಿರಬಹುದಾದ, ಉಲ್ಲೇಖಗೊಂಡಿರದ ತಾಣಗಳು, ಸ್ನೇಹಪರ ಜನರು, ಆತ್ಮೀಯವಾದ ಆತಿಥ್ಯ ನೀಡುವ ವಸತಿಗೃಹಗಳು, ಇವೆಲ್ಲವೂ ಕೂಡ ಶಿಲ್ಲಾಂಗ್ ನ ವೈಶಿಷ್ಟ್ಯಗಳು.  ಸುತ್ತಮುತ್ತಲೂ ಹಚ್ಚ ಹಸುರಿನ ಪ್ರಕೃತಿ ಸೌಂದರ್ಯ ಒಂದೆಡೆಯಾದರೆ, ಮತ್ತೊಂದೆಡೆ ಪಟ್ಟಣದ ಹೃದಯ ಭಾಗದಲ್ಲಿ ಗಿಜಿಗುಟ್ಟುವ ನಗರ ಜೀವನ.  ಇವೆರಡರ ಸಂಗಮವು, ಶಿಲ್ಲಾಂಗ್ ನ ಪ್ರವಾಸೋದ್ಯಮವನ್ನು ರೋಚಕಗೊಳಿಸುತ್ತದೆ.

ಶಿಲ್ಲಾಂಗ್ ಮತ್ತು ಶಿಲ್ಲಾಂಗ್ ನ ಸುತ್ತಮುತ್ತಲ ಪ್ರವಾಸಿ ತಾಣಗಳು

ಪ್ರಕೃತಿ ಮಾತೆಯು ಶಿಲ್ಲಾಂಗ್ ನ್ನು ಅನೇಕ ಜಲಪಾತಗಳು, ಅವಿಸ್ಮರಣೀಯ ಪರ್ವತಶ್ರೇಣಿ (ಆ ಪ್ರದೇಶದಲ್ಲಿಯೇ ಎರಡನೆ ಅತಿ ಎತ್ತರದ್ದು), ಮತ್ತು ಅನೇಕ ಇತರ ಆಸಕ್ತಿದಾಯಕ, ಹೆಚ್ಚು ಪರಚಿತವಲ್ಲದ ಸುಂದರ ತಾಣಗಳಿಂದ ಪುನೀತಳಾಗಿಸಿದ್ದಾಳೆ.  ಶಿಲ್ಲಾಂಗ್ ನ ಪರ್ವತ, ಎಲಿಫೆಂಟ್ ಜಲಪಾತ, ಸ್ವೀಟ್ ಜಲಪಾತ, ಲೇಡಿ ಹೈದರಿ ಉದ್ಯಾನ, ವಾರ್ಡ್ಸ್ ಸರೋವರ, ಮತ್ತು ಪೋಲಿಸ್ ಬಜಾರ್ ಗಳಿಗೆ ಭೇಟಿ ನೀಡದೇ ಹೋದರೆ, ಶಿಲ್ಲಾಂಗ್ ನ ಪ್ರವಾಸವು ಅಪೂರ್ಣವಾಗುತ್ತದೆ.  ಶಿಲ್ಲಾಂಗ್ ನ ಸ್ಥಳೀಯ ಸಂಸ್ಕೃತಿಗಳ ಡಾನ್ ಬಾಸ್ಕೋ ಕೇಂದ್ರವು ಒಂದು ಆಸಕ್ತಿದಾಯಕ ವಸ್ತುಸಂಗ್ರಹಾಲಯವಾಗಿದ್ದು ಇದಕ್ಕೆ ಭೇಟಿ ನೀಡುವುದನ್ನು ಯಾರೂ ತಪ್ಪಿಸಬಾರದು.

ಖಸಿಸ್ - ಶಿಲ್ಲಾಂಗ್ ನ ಸ್ಥಳೀಯ ಬುಡಕಟ್ಟು ಜನಾಂಗ

ಮೇಘಾಲಯವು ಬುಡಕಟ್ಟು ಜನಾಂಗದ ರಾಜ್ಯವಾಗಿದ್ದು, ಖಸಿಸ್, ಜೈನ್ತಾಯಿಸ್, ಮತ್ತು ಗರೋಸ್ ಇವು ರಾಜ್ಯದ ಮೂರು ಪ್ರಮುಖ ಬುಡಕಟ್ಟು ಜನಾಂಗಗಳಾಗಿವೆ.  ಖಸಿಸ್ ಪರ್ವತ ಪ್ರದೇಶಕ್ಕೆ ಸೇರಿರುವ ಶಿಲ್ಲಾಂಗ್ ನ ಭಾಗದಲ್ಲಿ ಖಸಿಸ್ ಜನಾಂಗದವರ ಸಂಖ್ಯೆಯು ಅಧಿಕವಾಗಿದೆ.  ಖಸಿಸ್ ಜನಾಂಗವು ಈಶಾನ್ಯ ಭಾರತದ ಅತಿ ಪ್ರಾಚೀನ ಬುಡಕಟ್ಟು ಜನಾಂಗವಾಗಿದೆ.  ಖಸಿಸ್ ಜನಾಂಗವು ಆಸ್ಟ್ರೋ - ಏಷಿಯಾಟಿಕ್(Austro - Asiatic) ಪೀಳಿಗೆಗೆ ಸೇರಿದವರಾಗಿದ್ದು, ಇವರು ಮಾತೃಪ್ರಧಾನ ಕುಟುಂಬ ಪದ್ಧತಿಯನ್ನು ಅನುಸರಿಸುತ್ತಾರೆ (ಇದು ಭಾರತದಲ್ಲಿಯೇ ಅತಿ ಅಪರೂಪವಾದ ಸಂಪ್ರದಾಯಗಳಲ್ಲೊಂದು).

ಹೆಣ್ಣು ಶಿಶುವಿನ ಜನನದ ಕುರಿತು ಖುಷಿಪಡುವ ವೈಶಿಷ್ಟ್ಯ ಈ ಖಸಿಸ್ ಜನಾಂಗದ್ದು.  ಕಾರಣ, ಹೆಣ್ಣು ಶಿಶುವು ವಂಶವನ್ನು ಮುನ್ನಡೆಸುವವಳು ಎಂಬ ನಂಬಿಕೆ ಈ ಜನಾಂಗದ್ದು.  ಖಸಿಸ್ ಜನಾಂಗದ ಕುಟುಂಬ ಸಂಪ್ರದಾಯದ ಒಂದು ವೈಶಿಷ್ಟ್ಯವೆಂದರೆ, ಮದುಮಗನು, ಮದುಮಗಳ ಮನೆಯಲ್ಲಿಯೇ ಜೀವನ ನಡೆಸುತ್ತಾನೆ. ಕೌಟುಂಬಿಕ ವಿಚಾರದಲ್ಲಿ ಮಾತೃ ಸಂಬಂಧಿ ಸೋದರ ಮಾವನ ಪಾತ್ರವೇ ನಿರ್ಣಾಯಕ, ವಿಶೇಷವಾಗಿ ಮದುವೆ, ಆಸ್ತಿಪಾಸ್ತಿಗಳ ವಿಚಾರದಲ್ಲಿ ಈತನ ನಿರ್ಣಯವೇ ಅಂತಿಮ.

ಶಿಲ್ಲಾಂಗ್ ಅನ್ನು ಬಂಧಿಸುವ ಆಂಗ್ಲರ ಪ್ರಭಾವ

ಶಿಲ್ಲಾಂಗ್ ನಗರವು ಒಂದು ಕಾಲದಲ್ಲಿ ಅವಿಭಜಿತ ಅಸ್ಸಾಂನ ರಾಜಧಾನಿಯಾಗಿತ್ತು.  ಇದು ಈಶಾನ್ಯ ಭಾರತದ ಅಚ್ಚುಮೆಚ್ಚಿನ ಪರ್ವತಧಾಮವೂ ಮತ್ತು ಆಡಳಿತಾತ್ಮಕ ಕೇಂದ್ರ ಸ್ಥಾನವು ಆಗಿತ್ತು.  ಇದಕ್ಕೆ ಕಾರಣ, ಇಲ್ಲಿನ ಆಹ್ಲಾದಕರ ಹವಾಗುಣ ಮತ್ತು ಪೂರ್ವ ಬಂಗಾಳದ ಸಾಮಿಪ್ಯ (ಈಗಿನ ಬಾಂಗ್ಲಾದೇಶ).  ಹಿಂದೆ ಶಿಲ್ಲಾಂಗ್ ನಲ್ಲಿ ಪ್ರಮುಖವಾಗಿ 3 ಹಳ್ಳಿಗಳು ಇದ್ದಿದ್ದು, ಬ್ರಿಟಿಷರು ಶಿಲ್ಲಾಂಗ್ ಗಾಗಿ ಸಾಕಷ್ಟು ಕೆಲಸ ಮಾಡಿದರು.  ಬ್ರಿಟಿಷರ ಮುಖ್ಯ, ಆಡಳಿತಾತ್ಮಕ ಕೇಂದ್ರಸ್ಥಾನವು ಶಿಲ್ಲಾಂಗ್ ಆಗಿರುವ ಕಾಲದಲ್ಲೇ, ಹಲವಾರು ಮಿಷಿನರಿಗಳು ಪರ್ವತಧಾಮಕ್ಕೆ ಬರತೊಡಗಿದರು.  

ವೆಲ್ಶ್ ಮಿಷನ್, ಚಿರಾಪುಂಜಿಯಲ್ಲಿ ಪ್ರಥಮ ಹೆಜ್ಜೆ ಇರಿಸಿದ ಮಿಶಿನರಿಯಾಗಿದ್ದು, ಇದು ನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿತು.  ಅನಂತರದಲ್ಲಿ, ಐರಿಶ್ ಮಿಶಿನರಿಯೂ ಸೇರಿದಂತೆ, ಅನೇಕ ಇತರೆ ಮಿಷಿನರಿಗಳು ಇಲ್ಲಿಗೆ ಆಗಮಿಸಿದವು.  ಸಂತ ಎಡ್ಮಂಡ್ಸ್(Edmunds), ಸಂತ ಅಂತೋನಿ, ಲೋರೆತೋ ಕಾನ್ವೆಂಟ್ ಮತ್ತು ಸಂತ ಮೇರಿಯಂತಹ ಶಾಲೆಗಳೆಲ್ಲವೂ, ಮಿಷಿನರಿಗಳ ಪ್ರಭಾವಕ್ಕೆ ಸಾಕ್ಷಿಯಾಗಿವೆ. ಮಿಷಿನರಿಗಳು ನಗರಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾಗ್ಯೂ, ಈ ವಿಚಾರದಲ್ಲಿ ಬ್ರಿಟಿಷ್ ಆಡಳಿತವೇನೂ ಹಿಂದೆ ಬಿದ್ದಿರಲಿಲ್ಲ.  ಬ್ರಿಟಿಷರು ಪೈನ್ ಮೌಂಟ್ ಸ್ಕೂಲ್(Pine Mount School) ಎಂಬ ಸರ್ಕಾರಿ ಶಾಲೆ ಆರಂಭಿಸಿದರು ಹಾಗೂ ಈ ಶಾಲೆಯು ಆ ಪ್ರಾಂತ್ಯದಲ್ಲಿ ಪ್ರತಿಷ್ಠಿತ ಶಾಲೆಗಳಲ್ಲೊಂದಾಗಿತ್ತು.

ಶಿಲ್ಲಾಂಗ್ ನಲ್ಲಿ ಬಂಗಾಳಿಗಳ ಉಪಸ್ಥಿತಿ

ಮೂಲತಃ ಸೈಲ್ಹೆಟ್ (Syhlet) ಜಿಲ್ಲೆಯಿಂದ ಬಂದ ಬಂಗಾಳಿಗಳು, ನಗರದ ಅಭಿವೃದ್ಧಿಗೆ ಗುರುತರ ಕೊಡುಗೆ ನೀಡಿದ್ದಾರೆ.  ಈ ಬಂಗಾಳಿಗಳನ್ನು ಬ್ರಿಟಿಷರು ಆಡಳಿತಾತ್ಮಕ ಕೆಲಸ ಕಾರ್ಯಗಳಿಗಾಗಿ ಇಲ್ಲಿಗೆ ಕರೆತಂದರು ಹಾಗೂ ಇಲ್ಲಿ ನೆಲೆಯೂರಲು ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿದರು.  'ಬಾಬು' ಗಳೆಂದು ಕರೆಯಲ್ಪಡುವ ಈ ಬಂಗಾಳಿಗಳು ಸಹ ಇಲ್ಲಿನ ಅಭಿವೃದ್ದಿಗೆ ಕೊಡುಗೆ ನೀಡಿದರು.  ಮಧ್ಯಮವರ್ಗದ ಬಂಗಾಳಿಗಳಿಗಾಗಿ ಅನೇಕ ಜ್ಞಾನದಾಯಿ ಶಾಲೆಗಳು ಇಲ್ಲಿ ಆರಂಭಗೊಂಡವು.  ಜೈಲ್ ರೋಡ್ ಬಾಯ್ಸ್ ಸ್ಕೂಲ್ (Jail Road Boys' School) ಮತ್ತು ಲೇದಿ ಕೀನ್ ಸ್ಕೂಲ್ (Lady Keane School) ಗಳು ಅಂತಹ ಎರಡು ಶಾಲೆಗಳು.

ಶಿಲ್ಲಾಂಗ್ ಗೆ ಭೇಟಿ ನೀಡಲು ಅತಿ ಪ್ರಶಸ್ತ ಕಾಲಾವಧಿ

ಚಳಿಗಾಲ ಮತ್ತು ಮಳೆಗಾಲಗಳು ಕಳೆದ ನಂತರದ ಅವಧಿಯು ಶಿಲ್ಲಾಂಗ್ ಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.  ಅರ್ಥಾತ್, ಮಾರ್ಚ್-ಏಪ್ರಿಲ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ಗಳ ನಡುವಿನ ಕಾಲಾವಧಿ.

ಶಿಲ್ಲಾಂಗ್ ಅನ್ನು ತಲುಪುವ ಬಗೆ ಹೇಗೆ?

ರಾಷ್ಟ್ರೀಯ ಹೆದ್ದಾರಿ 40 ಶಿಲ್ಲಾಂಗ್ ಪಟ್ಟಣವನ್ನು ದೇಶದ ಇತರ ಭಾಗಗಳೊಡನೆ ಅತ್ಯುತ್ತಮವಾಗಿ ಸಂಪರ್ಕಿಸುತ್ತದೆ.  ರಾಷ್ಟ್ರೀಯ ಹೆದ್ದಾರಿ 40, ಶಿಲ್ಲಾಂಗ್ ಮತ್ತು ಗುವಹಾಟಿಗಳನ್ನು ಸಂಪರ್ಕಿಸುತ್ತದೆ.  ಉಮ್ರೋಯ್ ಎಂಬಲ್ಲಿ ಶಿಲ್ಲಾಂಗ್ ನ ವಿಮಾನ ನಿಲ್ದಾಣವಿದೆ (ನಗರದಿಂದ 30 ಕಿ. ಮೀ. ದೂರದಲ್ಲಿ).  ಆದರೆ ಇದು ಜನವರಿ 2013 ರಿಂದ ಕಾರ್ಯವನ್ನು ಸ್ಥಗಿತಗೊಳಿಸಿದೆ.

ಶಿಲ್ಲಾಂಗ್ ನ ಹವಾಮಾನ

ಶಿಲ್ಲಾಂಗ್ ವರ್ಷವಿಡಿ, ಅಹ್ಲಾದಕರವಾದ ಮಧ್ಯಮ, ತಂಪು ವಾತಾವರಣವನ್ನು ಹೊಂದಿರುತ್ತದೆ.  ಅದ್ದರಿಂದ ಇದು ಪ್ರವಾಸಿಗರಿಗೆ ಅಚ್ಚುಮೆಚ್ಚಿನದ್ದಾಗಿದೆ.  ಚಳಿಗಾಲದಲ್ಲಿ ತಾಪಮಾನವು ಗಣನೀಯವಾಗಿ ಕಡಿಮೆಯಾದರೂ ಕೂಡ ಬೇಸಿಗೆಯು ಅತಿ ಆಹ್ಲಾದಕರವಾಗಿರುತ್ತದೆ.  ಶಿಲ್ಲಾಂಗ್ ಭಾರಿ ಮಳೆಯನ್ನೂ ಸಹ ಅನುಭವಿಸುತ್ತದೆ.

ಶಿಲ್ಲಾಂಗ್ ಪ್ರಸಿದ್ಧವಾಗಿದೆ

ಶಿಲ್ಲಾಂಗ್ ಹವಾಮಾನ

ಶಿಲ್ಲಾಂಗ್
22oC / 72oF
 • Patchy rain possible
 • Wind: SSW 10 km/h

ಉತ್ತಮ ಸಮಯ ಶಿಲ್ಲಾಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಶಿಲ್ಲಾಂಗ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 40 (ಗುವಹಾಟಿಗೆ) ಮತ್ತು ರಾಷ್ಟ್ರೀಯ ಹೆದ್ದಾರಿ 44 (ಸಿಲ್ಚರ್ ಮತ್ತು ಅಲ್ಲಿಂದ ಮುಂದೆ ತ್ರಿಪುರಕ್ಕೆ) ಇವು ಪರ್ವತ ಧಾಮದಿಂದ ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ 2 ಪ್ರಮುಖ ಹೆದ್ದಾರಿಗಳಾಗಿವೆ. ಶಿಲ್ಲಾಂಗ್ ಪಟ್ಟಣಕ್ಕೆ ಮಾತ್ರವಲ್ಲದೇ, ದಕ್ಷಿಣ ಅಸ್ಸಾಂ ನ ಇತರೆ ಹಲವು ಪಟ್ಟಣಗಳು, ಮಣಿಪುರ ಮತ್ತು ತ್ರಿಪುರದ ಭಾಗಗಳಿಗೆ, ಶಿಲ್ಲಾಂಗ್-ಗುವಹಾಟಿ ರಾಷ್ಟ್ರೀಯ ಹೆದ್ದಾರಿಯು ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮೇಘಾಲಯಕ್ಕೆ ರೈಲ್ವೆ ಸಂಪರ್ಕವಿಲ್ಲದಿದ್ದಾಗ್ಯೂ, ಗುವಹಾಟಿಯು ಶಿಲ್ಲಾಂಗ್ ನಿಂದ ಕೇವಲ 100 ಕಿ. ಮೀ. ದೂರದಲ್ಲಿರುವುದರಿಂದ ಗುವಾಹಾಟಿ ರೈಲ್ವೆ ನಿಲ್ದಾಣವು ಅತಿ ಅನುಕೂಲಕರ ಆಯ್ಕೆಯಾಗಿದೆ. ದೇಶದ ಎಲ್ಲಾ ಭಾಗಗಳಿಗೂ ಇಲ್ಲಿಂದ ಪ್ರತಿದಿನ ರೈಲುಗಳು ಸಂಚರಿಸುತ್ತವೆ. ಶಿಲ್ಲಾಂಗ್ ನಿಂದ ರೈಲ್ವೆ ನಿಲ್ದಾಣಕ್ಕೆ Sumo ವಾಹನ ಸೌಲಭ್ಯವು ಸಾಧ್ಯವಿರುವ ಎಲ್ಲಾ ವೇಳೆಯಲ್ಲಿಯೂ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶಿಲ್ಲಾಂಗ್ ಗೆ ಅತಿ ಸಮೀಪದಲ್ಲಿರುವ ವಿಮಾನ ನಿಲ್ದಾಣವು ಉಮ್ರೋಯ್ ನಲ್ಲಿದೆ (ನಗರದ ಮುಖ್ಯ ಭಾಗದಿಂದ 30 ಕಿ. ಮೀ. ದೂರದಲ್ಲಿದೆ). ಆದರೆ ಇದು ಸದ್ಯ ಕಾರ್ಯನಿರತವಾಗಿಲ್ಲ. ಅದ್ದರಿಂದ ಗುವಾಹಾಟಿಯಲ್ಲಿರುವ (ಸುಮಾರು 117 ಕಿ. ಮೀ. ದೂರದಲ್ಲಿ) ಲೋಕಪ್ರಿಯಾ ಬೊರ್ಡೋಲೊಯ್ (Lokpriya Bordoloi) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅತಿ ಸಮೀಪದ, ಹಾಗೂ ಅತಿ ಅನುಕೂಲಕರ ವಿಮಾನ ನಿಲ್ದಾಣವಾಗಿದೆ. ದಿನನಿತ್ಯದ ಪ್ರವಾಸಿ ಟ್ಯಾಕ್ಸಿ ಗಳು ನಿಲ್ದಾಣದಿಂದ ಶಿಲ್ಲಾಂಗ್‍ಗೆ ತೆರಳಲು ಲಭ್ಯವಿರುತ್ತವೆ.
  ಮಾರ್ಗಗಳ ಹುಡುಕಾಟ

ಶಿಲ್ಲಾಂಗ್ ಲೇಖನಗಳು

One Way
Return
From (Departure City)
To (Destination City)
Depart On
29 Sep,Tue
Return On
30 Sep,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Sep,Tue
Check Out
30 Sep,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Sep,Tue
Return On
30 Sep,Wed
 • Today
  Shillong
  22 OC
  72 OF
  UV Index: 5
  Patchy rain possible
 • Tomorrow
  Shillong
  16 OC
  60 OF
  UV Index: 5
  Patchy rain possible
 • Day After
  Shillong
  16 OC
  61 OF
  UV Index: 5
  Patchy rain possible