Search
 • Follow NativePlanet
Share
ಮುಖಪುಟ » ಸ್ಥಳಗಳು» ಜೋವಾಯ್

ಜೋವಾಯ್ : ನಾರ್ ಜನಾಂಗದ ಬುಡಕಟ್ಟಿನ ನೆಲೆ

7

ಮೇಘಾಲಯದಲ್ಲಿರುವ ಜೋವಾಯ್ ಒಂದು ಬೆಳೆಯುತ್ತಿರುವ ಕೈಗಾರಿಕಾ ಪಟ್ಟಣ. ಇದು ಮೇಘಾಲಯ ರಾಜ್ಯದ ಜೈನ್‍ತಿಯ ಹಿಲ್ಸ್ ಜಿಲ್ಲಾಕೇಂದ್ರ ಮತ್ತು ಹೆಚ್ಚಾಗಿ ನಾರ್ ಬುಡಕಟ್ಟಿನ ಪಂಗಡದವರು ಇಲ್ಲಿ ನೆಲೆಸಿದ್ದಾರೆ. ಈ ಸುಂದರ ಚಿತ್ರಸದೃಶ ನೋಟಗಳ ಜೋವಾಯ್‍ ಮೂರು ಕಡೆಗಳಿಂದ ಮೈಂಟ್ಡು ನದಿಯಿಂದ ಆವರಿಸಲ್ಪಟ್ಟು ದಕ್ಷಿಣದಲ್ಲಿ ಬಂಗ್ಲಾ ದೇಶದ  ಗಡಿ‍ಇದೆ. ಜೋವಾಯ್ ಸಮುದ್ರ ಮಟ್ಟದಿಂದ 1380 ಮೀಟರ್  ಮೇಲೆ ನೆಲೆಗೊಂಡಿದ್ದು ಒಂದು ಪ್ರಸ್ತಭೂಮಿಯ ಮೇಲೆ ನೆಲೆಸಿದೆ. ಹೀಗೆ ಎತ್ತರದ ಪ್ರದೇಶದಲ್ಲಿರುವುದರಿಂದ ಹವಾಮಾನವು ಅಹ್ಲಾದಕರವಾಗಿದ್ದು ತಂಪಾಗಿರುತ್ತದೆ. ಜೈನ್‍ತಿಯಾ ಬೆಟ್ಟದಲ್ಲಿ ಸಮೃದ್ಧ ಖನಿಜಗಳಿವೆ.  ಇದರ ಸುತ್ತ ಕಲ್ಲಿದ್ದಲಿನ ಗಣಿಗಳಿವೆ. ಇದರಿಂದಾಗಿ ಕಲ್ಲಿದ್ದಲ ಗಣಿಗಾರಿಕೆಯಿಂದ ಸ್ಥಳದ ಆರ್ಥಿಕ ಸ್ಥಿತಿಯು ವರ್ಧಿಸುತ್ತಿದೆ.  

ಜೋವಾಯ್ ಸುತ್ತಮುತ್ತ ಇರುವ ಪ್ರವಾಸಿ ಸ್ಥಳಗಳು

ಜೋವಾಯ್ ಪ್ರವಾಸೋದ್ಯಮದಲ್ಲಿ ಜುಲೈ ತಿಂಗಳ ಎರಡನೇ ವಾರದಲ್ಲಿ ಬೆಹ್‍ಡೈಂ‍ಕ್ಲಂ (Behdeimkhlam) ಹಬ್ಬ ಮುಖ್ಯವಾಗಿದೆ. ಬೆಹ್‍ಡೈಂ‍ಕ್ಲಂ ಫೆಸ್ಟಿವಲ್ ನಾರ್ ಪಂಗಡದ ಅತ್ಯಂತ ಪ್ರಸಿದ್ಧ ಧಾರ್ಮಿಕ ಹಬ್ಬ.  ಇನ್ನೂ ಅನೇಕ ಆಕರ್ಷಣೆಗಳೆಂದರೆ ಮಾನವ ನಿರ್ಮಿತ ತಡ್ಲಾಸ್ಕೈನ್ (Thadlaskein) ಸರೋವರ, ಲಲಾಂಗ್ ಪಾರ್ಕ್ ಮತ್ತು ಜೋವಾಯ್ ಪ್ರೆಸ್ಬಿಟೇರಿಯನ್ (Presbyterian) ಚರ್ಚ್.

ಜೋವಾಯಿಯನ್ನು ತಲುಪುವುದು ಹೇಗೆ?

ಜೋವಾಯ್ ಮೇಘಾಲಯದ ರಾಜಧಾನಿಯಾದ ಶಿಲ್ಲಾಂಗ್ ಪಟ್ಟಣದಿಂದ 65 ಕಿ.ಮೀ. ದೂರದಲ್ಲಿದೆ. ಜೋವಾಯ್ ತಲುಪಲು ಪ್ರವಾಸಿಗರು ಪ್ರವಾಸಿ ವಾಹನವನ್ನೋ ಅಥವಾ, ಶಿಲ್ಲಾಂಗ್‍ನಿಂದ ಅಗಾಗ್ಗೆ ಹೊರಡುವ ಅಂತರ ರಾಜ್ಯ ಬಸ್ ತೆಗೆದುಕೊಂಡು ಬರಬಹುದು. ವಿಮಾನದಲ್ಲಿ ಪ್ರಯಾಣ ಬಯಸುವವರು ಕೋಲ್ಕತ್ತದಿಂದ ಉಮ್ರಾಯ್ ಸೇರಿ ಅಲ್ಲಿಂದ ಜೋವಾಯ್ ತಲುಪಬಹುದು. ಆದಾಗ್ಯೂ ಗುವಾಹಟಿ ವಿಮಾನ ನಿಲ್ದಾಣಕ್ಕೆ ಪ್ರಯಾಣಮಾಡುವುದು ಒಳ್ಳೆಯ ಆಯ್ಕೆ.

ಜೋವಾಯ್ ಭೇಟಿ ಮಾಡಲು ಅತ್ಯುತ್ತಮ ಸಮಯ

ಚಳಿಗಾಲ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಜೋವಾಯ್ ಭೇಟಿ ಮಾಡಲು ಅತ್ಯುತ್ತಮ ಸಮಯ.

ಜೋವಾಯ್ ಪ್ರಸಿದ್ಧವಾಗಿದೆ

ಜೋವಾಯ್ ಹವಾಮಾನ

ಜೋವಾಯ್
24oC / 76oF
 • Patchy rain possible
 • Wind: SSW 13 km/h

ಉತ್ತಮ ಸಮಯ ಜೋವಾಯ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜೋವಾಯ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ ನಂ. 44 ಜೋವಾಯ್ ಮೂಲಕ ಹಾದುಹೋಗುವುದರಿಂದ ಒಂದು ಜೀವಂತ ಸಂಪರ್ಕವಾಗಿದೆ. ಹಲವಾರು ಬಸ್‍ಗಳು ಸಿಲ್ಚಾರ್ ಮತ್ತು ತ್ರಿಪುರಾದ ಇನ್ನಿತರ ಭಾಗಗಳಿಗೆ ಹೋಗುವ ಮಾರ್ಗದಲ್ಲಿ ಸಂಚರಿಸುತ್ತವೆ. ಪ್ರವಾಸಿಗರು ಖಾಸಗಿ ಪ್ರವಾಸಿ ವಾಹನಗಳನ್ನು ಶಿಲ್ಲಾಂಗ್‍ನಿಂದ ಜೋವಾಯ್‍ಗೆ ಬಳಸಬಹುದು. ನಯನಮನೋಹರವಾದ ಭೂಪ್ರದೇಶ ಮತ್ತು ಸಣ್ಣ ಹಳ್ಳಿಗಳು ಹೆದ್ದಾರಿಯ ಎರಡೂ ಬದಿಗಳಲ್ಲಿ ಕಾಣಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮೇಘಾಲಯದಲ್ಲಿ ಯಾವ ರೈಲು ಸಂಪರ್ಕ ಇಲ್ಲ. ಜೋವಾಯ್‍ಗೆ ಅತಿ ಸಮೀಪದ ರೈಲು ನಿಲ್ದಾಣ ಗುವಹತಿಯಲ್ಲಿದೆ. ಗುವಹತಿ ಜೋವಾಯ್‍ನಿಂದ ಸುಮಾರು 160 ಕಿ.ಮೀ. ದೂರದಲ್ಲಿದ್ದು, ಪ್ರಯಾಣಕ್ಕೆ 4 ಘಂಟೆಗಳಿಗಿಂತಾ ಹೆಚ್ಚು ಸಮಯ ಬೇಕಾಗುತ್ತದೆ. ಪ್ರವಾಸಿಗರು ಮೊದಲು ಶಿಲ್ಲಾಂಗನ್ನು ಸೇರಿ ಮತ್ತೆ ಅಲ್ಲಿಂದ ಜೋವಾಯ್‍ಗೆ ರಸ್ತೆ ಮೂಲಕ ಪ್ರಯಾಣ ಮಾಡಬೇಕು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಜೊವಾಯ್‍ಗೆ ಹತ್ತಿರದ ವಿಮಾನ ನಿಲ್ದಾಣ ಉಮ್ರಾಯ್‍ನಲ್ಲಿದೆ. ಆದರೆ ಕೇವಲ ಕೋಲ್ಕತ್ತಕ್ಕೆ ಮಾತ್ರ ನೇರ ವಿಮಾನಯಾನಗಳಿವೆ. ಆದ್ದರಿಂದ ಗುವಾಹಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿ, ಉಳಿದ ಪ್ರಯಾಣವನ್ನು ರಸ್ತೆಯ ಮೂಲಕ ಹೋಗುವುದು ಉತ್ತಮ ಆಯ್ಕೆ. ಗುವಾಹಟಿಯಲ್ಲಿರುವ ಲೋಕ್‍ಪ್ರಿಯ ಗೋಪಿನಾತ್ ಬೋರ್ಡೊಲಯ್ ಅಂತರ ರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ದೇಶದ ಎಲ್ಲಾ ಭಾಗಗಳಿಂದ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Oct,Wed
Return On
17 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Oct,Wed
Check Out
17 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Oct,Wed
Return On
17 Oct,Thu
 • Today
  Jowai
  24 OC
  76 OF
  UV Index: 5
  Patchy rain possible
 • Tomorrow
  Jowai
  20 OC
  68 OF
  UV Index: 5
  Patchy rain possible
 • Day After
  Jowai
  21 OC
  69 OF
  UV Index: 5
  Patchy rain possible