Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋವಾಯ್ » ಹವಾಮಾನ

ಜೋವಾಯ್ ಹವಾಮಾನ

ಚಳಿಗಾಲ ಮತ್ತು ಬೇಸಿಗೆಕಾಲದ ತಿಂಗಳುಗಳಲ್ಲಿ ಜೋವಾಯ್‍ಗೆ ಭೇಟಿ ನೀಡಲು ಅತ್ಯುತ್ತಮ ಸಮಯ. ಚಳಿಗಾಲದಲ್ಲಿ ಪ್ರವಾಸಿಗರು ಸಮರ್ಪಕವಾಗಿ ಉಣ್ಣೆಯ ಮತ್ತು ಬೆಚ್ಚಗಿನ ಬಟ್ಟೆಗಳನ್ನು ತೆಗೆದು ಇಟ್ಟುಕೊಂಡಿರಬೇಕು. ಚಳಿಗಾಲದಲ್ಲಿ ಮತ್ತು ಬೇಸಿಗೆಕಾಲದಲ್ಲಿ ಪ್ರಯಾಣಮಾಡಲು ರಸ್ತೆಗಳು ಸಾಮಾನ್ಯವಾಗಿ  ನಿಚ್ಚಳವಾಗಿರುವುದರಿಂದ ಬಹಳ ಆರಾಮದಾಯಕವಾಗಿರುತ್ತದೆ.  ಟ್ರೆಕ್ಕಿಂಗ್ ಮಾಡಲೂ ಸಹ ಇದು ಒಳ್ಳೆಯ ಸಮಯ. 

ಬೇಸಿಗೆಗಾಲ

ಜೋವಾಯ್ ಒಂದು ಪ್ರಸ್ತಭೂಮಿಯಮೇಲಿರುವುದರಿಂದ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಅಷ್ಟಾಗಿರುವುದಿಲ್ಲ.  ಮಾರ್ಚ್‍ನಿಂದ ಮೇ ವರಿಗೆ ಬೇಸಿಗೆಯಿರುತ್ತದೆ. ತಾಪಮಾನವು  ಅಪರೂಪವಾಗಿಯೂ ಕೂಡ 22 ಡಿಗ್ರಿ  ಮೀರುವುದಿಲ್ಲ.  ಆದಾಗ್ಯೂ ರಾತ್ರಿವೇಳೆ ತಾಪಮಾನವು ಇದ್ದಕ್ಕಿದ್ದಂತೆ  ಇಳಿದು  ಸಾಕಷ್ಟು ತಣ್ಣಗಾಗಲು ಸಾಧ್ಯ.  ಆದ್ದರಿಂದ ಪ್ರವಾಸಿಗಳು ಅವರೊಂದಿಗೆ ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯುವುದು ಒಳ್ಳೆಯದು. 

ಮಳೆಗಾಲ

ಜೋವಾಯ್‍ನಲ್ಲಿ ಮಳೆಗಾಲವು ಹೆಚ್ಚು ಕಡಿಮೆ ಯಾವಾಗಲೂ ಇರುವುದರಿಂದ ಅದು ಒಂದು ವಿಶಿಷ್ಟಭಾಗವಾಗಿದೆ. ಮೇ ಕೊನೆಯಭಾಗದಲ್ಲಿ ಮಳೆಗಾಲ ಆರಂಭಗೊಂಡು ಅನೇಕ ಸಮಯ ಕೆಲವೊಮ್ಮೆ ಅಕ್ಟೊಬರ್‌ವರೆಗೆ ಇರುತ್ತದೆ. ಭಾರಿ ಮಳೆಕಾರಣ, ಇಡೀ ಗ್ರಾಮಾಂತರವು ಹಸಿರುಬಣ್ಣಕ್ಕೆ ತಿರುಗಿ ಕಣ್ಣುಗಳಿಗೆ ಒಂದು ಹಬ್ಬವಾಗಿರುತ್ತದೆ.  ಆದರೆ, ಈ ಭಾರೀ ಮಳೆಯಿಂದ ಓಡಾಡುವುದಕ್ಕೆ ಅಡಚಣೆಯಾಗುತ್ತದೆ.

ಚಳಿಗಾಲ

ಚಳಿಗಾಲವು ನವೆಂಬರ್‌ನಲ್ಲಿ ಆರಂಭಗೊಂಡು ಫೆಬ್ರುವರಿ ಕೊನೆಯವರೆಗೆ ಇರುತ್ತದೆ.  ಈ ಕಾಲದಲ್ಲಿ ಆಗಾಗ್ಗೆ ತುಂತುರುಮಳೆಬಂದರೂ ಸಾಧಾರಣವಾಗಿ ಒಣಹವೆ ಇರುತ್ತ್ತದೆ. ಚಳಿಗಾಲದಲ್ಲಿ ಅತ್ಯಂತ ಕಡಿಮೆ ತಾಪಮಾನ 4 ಡಿಗ್ರಿ ವರೆಗೆ ಹೋಗಲು ಸಾಧ್ಯ.  ಬೆಳಗಿನ ಹೊತ್ತು ಪ್ರಕಾಶಮಾನವಾಗಿಯೂ ಮತ್ತು ಸೂರ್ಯನ ಬಿಸಿಲೂ ಸಹ ಇರುತ್ತದೆ. ಆದರೆ ರಾತ್ರಿ ಹೊತ್ತು ಚಳಿಯಿರುತ್ತದೆ.