Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋವಾಯ್ » ಆಕರ್ಷಣೆಗಳು » ಜೋವಾಯ್ ಪ್ರೆಸ್ಬಿಟೇರಿಯನ್ ಚರ್ಚ್

ಜೋವಾಯ್ ಪ್ರೆಸ್ಬಿಟೇರಿಯನ್ ಚರ್ಚ್, ಜೋವಾಯ್

1

ಜೋವಾಯ್ ಪ್ರೆಸ್ಬಿಟೇರಿಯನ್ ಚರ್ಚ್  ವೆಲ್ಶ್ ಪ್ರೆಸ್ಬಿಟೇರಿಯನ್ ಮಿಶನ್ ಅವರು 150 ವರ್ಷಗಳ ಹಿಂದೆ ಸ್ಥಾಪಿಸಿದರು.  ಇದು ಪ್ರದೇಶದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆಯೆಂದು ಹೆಮ್ಮೆಪಡುತ್ತಾರೆ.  ಇದು ನಂ. 44ನೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜೋವಾಯ್ ಪಟ್ಟಣದಲ್ಲಿದೆ. ಈ ಕ್ರಿಯಾಶೀಲ ಕೈಗಾರಿಕಾ ಪಟ್ಟಣವು ಮೇಘಾಲಯ ರಾಜ್ಯದ ಜೈನ್‍ತಿಯ ಹಿಲ್ಸ್ ಜಿಲ್ಲೆಯಲ್ಲಿದೆ.   

ಈ ಚರ್ಚ್ ವಿಶಿಷ್ಟ ಬ್ರಿಟಿಷ್ ವಾಸ್ತುಶಿಲ್ಪದ ಅನುಗುಣವಾಗಿ ನಿರ್ಮಿಸಲಾಗಿದೆ. ಅದೊಂದು  ಅತ್ಯುತ್ತಮ ಗುಣಮಟ್ಟದ ಕಟ್ಟಡವಾಗಿದೆ.  ಚರ್ಚಿನ ಒಳಭಾಗವು ವಿಶಾಲವಾಗಿದೆ ಮತ್ತು ಚರ್ಚಿನ ಆವರಣದಲ್ಲಿ  ಸತತವಾಗಿ ಜರಗುವ ದಿವ್ಯಾರಾಧನೆಗೆ ಬರುವ ದೊಡ್ಡ ಸಂಖ್ಯೆಯ ಜನರಿಗೆ ಸಾಕಷ್ಟು ಸ್ಥಳಾವಕಾಶವಿರುತ್ತದೆ. ಚರ್ಚನ್ನು ಪಟ್ಟಣದ ಶಬ್ದಗಳಿಂದ ದೂರ ಪ್ರಶಾಂತವಾದ  ಸ್ಥಳದಲ್ಲಿ ನಿರ್ಮಿಸಲಾಗಿದ್ದು, ಬರುವ ಭಕ್ತರಿಗೆ ಶಾಂತಿಯಿಂದ ಪ್ರಾರ್ಥನೆ ಸಲ್ಲಿಸಲು ಸಹಾಯವಾಗುತ್ತದೆ.  150 ವರ್ಷಗಳ ಹಳೆಯಾದುದರಿಂದ ಈ ಚರ್ಚ್ ಬಹು ಸಂಖ್ಯೆಯ ಪ್ರವಾಸಿಗರನ್ನು ವಿವಿಧ ಸ್ಥಳಗಳಿಂದ ವರ್ಷಾದ್ಯಂತ ಆಕರ್ಷಿಸುತ್ತದೆ.

ಬಹಳ ಸುಲಭವಾಗಿ ಚರ್ಚಿಗೆ ಭೇಟಿಮಾಡಲು ಶಿಲ್ಲಾಂಗ್ - ಜೋವಾಯ್ ಹೆದ್ದಾರಿಯಲ್ಲಿ ಪ್ರಯಾಣಬೆಳಸುವುದು ಒಳ್ಳೆಯದು.  ಭಜಾರ್ ಬಸ್ಸುಗಳಲ್ಲಿ ಬಹುತೇಕವಾಗಿ ಸಾಮಾನು ಸರಂಜಾಮುಗಳು ಇರುವುದರಿಂದ  ಪ್ರವಾಸಿಗಳಿಗೆ ಅನುಕೂಲವಾಗಿರುವುದಿಲ್ಲ. ಆದಾಗ್ಯೂ ಶಿಲ್ಲಾಂಗಿನಿಂದ ಜೋವಾಯ್ಗೆ ಕೇವಲ 64 ಕಿ.ಮೀ. ಇರುವುದರಿಂದ ಪ್ರೈವೇಟ್ ಟ್ಯಾಕ್ಸಿ ತೆಗೆದುಕೊಂಡು ಸುಲಭವಾಗಿ ಬರಬಹುದು. 

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat