Search
 • Follow NativePlanet
Share
ಮುಖಪುಟ » ಸ್ಥಳಗಳು» ವೆಸ್ಟ್ ಗಾರೊ ಹಿಲ್ಸ್

ಪಶ್ಚಿಮ ಗರೊ ಬೆಟ್ಟಗಳು - ಮೇಘಾಲಯದ ಜೀವ ವೈವಿಧ್ಯತೆಯ ವಿಶ್ವರೂಪ ದರ್ಶನ

33

ಪಶ್ಚಿಮ ಗರೊ ಬೆಟ್ಟಗಳು ಮೇಘಾಲಯದಲ್ಲಿನ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಟುರ ಇದರ ಜಿಲ್ಲಾ ಕೇಂದ್ರವಾಗಿದ್ದು, ಈ ರಾಜ್ಯದ ಎರಡನೆಯ ಅತಿ ದೊಡ್ಡ ನಗರವಾಗಿದೆ. ಇಡೀ  ಪಶ್ಚಿಮ ಗರೊ ಬೆಟ್ಟಗಳ ಜಿಲ್ಲೆಯು ಬೆಟ್ಟಗಾಡು ಪ್ರದೇಶವಾಗಿದ್ದು, ಕೇವಲ ತುದಿಗಳಲ್ಲಿ ಮಾತ್ರ ಚಪ್ಪಟೆಯಾದ ಭೂಮಿಯಿದೆ. ಸುಮಾರು 3714 ಚ.ಕಿ.ಮೀ ವ್ಯಾಪ್ತಿಯಷ್ಟು ವಿಸ್ತರಿಸಿರುವ ಪಶ್ಚಿಮ ಗರೊ ಬೆಟ್ಟಗಳು ಈಶಾನ್ಯ ಮತ್ತು ಉತ್ತರ ದಿಕ್ಕಿನಲ್ಲಿ ಗೋಲ್‍ಪರ ಜಿಲ್ಲೆಯನ್ನು ಹಾಗು ಆಗ್ನೇಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಬಾಂಗ್ಲದೇಶವನ್ನು ಹೊಂದಿದೆ.

ಪಶ್ಚಿಮ ಗರೊ ಬೆಟ್ಟಗಳ ಸುತ್ತ- ಮುತ್ತ ಇರುವ ಪ್ರವಾಸಿ ತಾಣಗಳು

ಪಶ್ಚಿಮ ಗರೊ ಬೆಟ್ಟಗಳು ಒಂದು ನಯನ ಮನೋಹರವಾದ ಪ್ರವಾಸಿ ತಾಣವಾಗಿದೆ. ಈ ಬೆಟ್ಟಗಳು ತಮ್ಮದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಜೀವ ವೈವಿಧ್ಯಕ್ಕೆ, ಜಲಪಾತಗಳಿಗೆ,ಕೆರೆಗಳಿಗೆ ಮತ್ತು ಶಿಖರಗಳಿಗೆ ನೆಲೆಯನ್ನು ಒದಗಿಸಿದೆ. ಪಶ್ಚಿಮ ಗರೊ ಬೆಟ್ಟಗಳು ತನ್ನಲ್ಲಿರುವ ದುರ್ಗಮವಾದ ಬೆಟ್ಟಗಳು ಮತ್ತು ನದಿಗಳಿಂದಾಗಿ ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ.

ಹಲವಾರು ನಯನ ಮನೋಹರವಾದ ತಾಣಗಳು ಇಲ್ಲಿವೆ. ಟುರ ಶಿಖರ, ನೊಕ್ರೆಕ್ ವನ್ಯಧಾಮ, ಚಿಬ್ರಗ್ರೆ, ಪೆಲ್ಗ ಜಲಪಾತ, ರೊಂಗ್‍ಬಾಂಗ್ ಡೆರ್ ಇತ್ಯಾದಿ ಸ್ಥಳಗಳು ಇಲ್ಲಿಗೆ ಭೇಟಿ ನೀಡುವವರನ್ನು ಮಂತ್ರ ಮುಗ್ಧಗೊಳಿಸುತ್ತವೆ. ಸಸತ್ಗ್ರೆ ಹಳ್ಳಿಯು ಕಿತ್ತಳೆ ಹಣ್ಣಿಗೆ ಹೆಸರುವಾಸಿಯಾಗಿದ್ದರೆ, ಟುರವು ತನ್ನ ಪ್ರಾಕೃತಿಕ ವೈಭವಕ್ಕೆ ಹೆಸರುವಾಸಿಯಾಗಿದೆ. ರಂಗಪಾನಿ ಮತ್ತು ಭೈಟ್‍ಬರಿ ಗ್ರಾಮಗಳು ಪ್ರಾಚ್ಯ ಶಾಸ್ತ್ರಙ್ಞರಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಗರೊ ಎಂಬುದು ಗರೊ ಬೆಟ್ಟಗಳಲ್ಲಿ ನೆಲೆಸಿರುವ ಪ್ರಮುಖ ಬುಡಕಟ್ಟು ಸಮುದಾಯವನ್ನು ಸೂಚಿಸುತ್ತವೆ. ಈ ಗರೊಗಳು ಟಿಬೆಟೊ-ಬರ್ಮನ್ ಪಂಗಡಕ್ಕೆ ಸೇರಿದ ಬೋಡೊ ವಂಶಕ್ಕೆ ಸೇರಿದವರಾಗಿರುತ್ತಾರೆ. ಇವರು ಭಾರತದಲ್ಲಿ ಅಪರೂಪವಾದ  ಮಾತೃ ಪ್ರಧಾನ ಸಂಪ್ರದಾಯವನ್ನು ಅನುಸರಿಸುವ ಬುಡಕಟ್ಟಿನವರಾಗಿದ್ದಾರೆ.

ಗರೊ ಬೆಟ್ಟಗಳಿಗೆ ತಲುಪುವುದು ಹೇಗೆ

ಟುರ ಪಶ್ಚಿಮ ಗರೊ ಬೆಟ್ಟಗಳ ಜಿಲ್ಲಾ ಕೇಂದ್ರವಾಗಿರುವುದಲ್ಲದೆ, ಜಿಲ್ಲೆಯ ಹೆಬ್ಬಾಗಿಲಾಗಿ ಸಹ ಕಾರ್ಯ ನಿರ್ವಹಿಸುತ್ತಿದೆ. ಟುರವು ಗುವಾಹಟಿಯಿಂದ 222 ಕಿ.ಮೀ ಮತ್ತು ಶಿಲ್ಲಾಂಗ್‍ನಿಂದ 309 ಕಿ.ಮೀ ದೂರದಲ್ಲಿದೆ. ಈ ಜಿಲ್ಲಾ ಕೇಂದ್ರಕ್ಕೆ ರಸ್ತೆ ಸಂಪರ್ಕವು ಸಮರ್ಪಕವಾಗಿರುವುದರಿಂದ ಪ್ರವಾಸಿಗರು ಟುರಗೆ ಬಸ್ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ತಲುಪಬಹುದು.

ಪಶ್ಚಿಮ ಗರೊ ಬೆಟ್ಟಗಳ ಹವಾಮಾನ

ಪಶ್ಚಿಮ ಗರೊ ಬೆಟ್ಟಗಳು ಮೇಘಾಲಯ ರಾಜ್ಯದ ತಗ್ಗು ಪ್ರದೇಶಗಳಲ್ಲಿ ನೆಲೆಗೊಂಡಿರುವುದರಿಂದಾಗಿ ನಾವು ಇಲ್ಲಿ ಸ್ವಲ್ಪ ಮಟ್ಟಿಗೆ ಬೆಚ್ಚಗಿನ ಹವಾಮಾನವನ್ನು ವರ್ಷಪೂರ್ತಿ ಕಾಣಬಹುದು. ಈ ಬೆಟ್ಟಗಳು ವಾರ್ಷಿಕವಾಗಿ ಸರಾಸರಿ 330 ಸೆಂ.ಮೀ ಮಳೆಯನ್ನು ಕಾಣುತ್ತದೆ. ಈ ಜೆಲ್ಲೆಯು ಮುಖ್ಯವಾಗಿ ನೈಋತ್ಯ ಮಾನ್ಸೂನ್ ಮಾರುತಗಳ ಪ್ರಭಾವದಿಂದಾಗಿ ಮಳೆಯನ್ನು ಕಾಣುತ್ತದೆ. ಇಲ್ಲಿನ ಚಳಿಗಾಲಗಳು ಒಣ ಹವೆಯಿಂದ ಕೂಡಿದ್ದರೆ, ಬೇಸಿಗೆಗಳು ಸುಡುವ ಬಿಸಿಲಿನಿಂದ ಕೂಡಿರುತ್ತದೆ. ಹಾಗಾಗಿ ಪಶ್ಚಿಮ ಗರೊ ಬೆಟ್ಟಗಳಿಗೆ ಭೇಟಿ ನೀಡಲು ಮಳೆಗಾಲದ ನಂತರದ ಅವಧಿ ಮತ್ತು ಚಳಿಗಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಇಲ್ಲಿ ಮಳೆಯು ತಗ್ಗಿದಾಗ ಉಷ್ಣಾಂಶದಲ್ಲಿ ಇಳಿಕೆಯಾಗುತ್ತದೆ ಹಾಗು ಆರ್ದ್ರತೆಯು ಸಹ ಕಡಿಮೆಯಾಗುತ್ತದೆ. ಈ ಸಮಯವು ಇಲ್ಲಿ ಸ್ಥಳ ವೀಕ್ಷಣೆಗೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಆದರೂ ಪಶ್ಚಿಮ ಗರೊ ಬೆಟ್ಟಗಳಿಗೆ ಭೇಟಿ ನೀಡುವುದಾದಲ್ಲಿ ಸ್ವಲ್ಪ ಹಗುರವಾದ ಉಣ್ಣೆಯ ಬಟ್ಟೆಗಳನ್ನು ಮತ್ತು ವಾಟರ್ ಪ್ರೂಫ್ ಜಾಕೆಟ್ ತೆಗೆದುಕೊಂಡು ಹೋಗುವುದು ಉತ್ತಮ.

ವೆಸ್ಟ್ ಗಾರೊ ಹಿಲ್ಸ್ ಪ್ರಸಿದ್ಧವಾಗಿದೆ

ವೆಸ್ಟ್ ಗಾರೊ ಹಿಲ್ಸ್ ಹವಾಮಾನ

ವೆಸ್ಟ್ ಗಾರೊ ಹಿಲ್ಸ್
24oC / 74oF
 • Partly cloudy
 • Wind: ESE 8 km/h

ಉತ್ತಮ ಸಮಯ ವೆಸ್ಟ್ ಗಾರೊ ಹಿಲ್ಸ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವೆಸ್ಟ್ ಗಾರೊ ಹಿಲ್ಸ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 51 ಟುರದ ಮೂಲಕ ಹಾದು ಹೋಗುತ್ತದೆ. ಇದು ಕೇವಲ ಟುರಗೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿಗರು ಗುವಹಾಟಿಯಿಂದ ಟ್ಯಾಕ್ಸಿಯಲ್ಲಿ ಅಥವಾ ಐಎಸ್‍ಬಿಟಿಯಿಂದ ಬಸ್ಸಿನ ಮೂಲಕ ಟುರಗೆ ಆಗಮಿಸಬಹುದು. ಗುವಹಾಟಿಯಿಂದ ಟುರಗೆ 24 ಗಂಟೆಗಳ ಕಾಲವೂ ಬಸ್ ಸಂಪರ್ಕ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ಗುವಹಾಟಿಯಲ್ಲಿ ನೆಲೆಗೊಂಡಿದೆ. ಇದು ಪಶ್ಚಿಮ ಗರೊ ಬೆಟ್ಟಗಳಿಂದ 210 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಗುವಹಾಟಿ ರೈಲು ನಿಲ್ದಾಣವು ದೇಶದ ಇತರ ಭಾಗಗಳಿಗೆ ವಾರಕ್ಕೆ ಒಮ್ಮೆ ಮತ್ತು ಪ್ರತಿ ನಿತ್ಯದ ರೈಲು ಓಡಾಟವನ್ನು ಹೊಂದಿದೆ. ಗುವಹಾಟಿ ರೈಲು ನಿಲ್ದಾಣದಿಂದ ಪ್ರವಾಸಿಗರು ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಪಶ್ಚಿಮ ಗರೊ ಬೆಟ್ಟಗಳನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಶ್ಚಿಮ ಗರೊ ಬೆಟ್ಟಗಳ ಕೇಂದ್ರ ಸ್ಥಾನವಾದ ಟುರಗೆ ಸಮೀಪವಾದ ವಿಮಾನ ನಿಲ್ದಾಣವು ಗುವಹಾಟಿಯಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಗುವಹಾಟಿಯ ಲೋಕ್‍ಪ್ರಿಯ ಗೋಪಿನಾಥ್ ಬೊರ್ಡೊಲೊಯ್ ವಿಮಾನ ನಿಲ್ದಾಣದಿಂದ ಪಲ್ಟನ್ ಬಜಾರ್ ಅಥವಾ ಐಎಸ್‍ಬಿಟಿಗೆ ಬಂದು ಟುರಗೆ ನೇರವಾದ ಸಾರಿಗೆ ವ್ಯವಸ್ಥೆಯನ್ನು ಪಡೆಯಬಹುದು. ಗುವಹಾಟಿಯಿಂದ ಟುರಗೆ 5 ಗಂಟೆಗಳ ಪ್ರಯಾಣಾವಧಿ ತಗುಲುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Oct,Thu
Return On
18 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Oct,Thu
Check Out
18 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Oct,Thu
Return On
18 Oct,Fri
 • Today
  West Garo Hills
  24 OC
  74 OF
  UV Index: 7
  Partly cloudy
 • Tomorrow
  West Garo Hills
  22 OC
  71 OF
  UV Index: 8
  Partly cloudy
 • Day After
  West Garo Hills
  24 OC
  75 OF
  UV Index: 8
  Partly cloudy