Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ

ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ, ವೆಸ್ಟ್ ಗಾರೊ ಹಿಲ್ಸ್

1

ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ ಅಥವಾ ನೊಕ್ರೆಕ್ ರಾಷ್ಟ್ರೀಯ ಉದ್ಯಾನವನವು ಶಿಬಿರ ಹಾಕಲು, ಪಕ್ಷಿ ವೀಕ್ಷಣೆ ಮಾಡಲು ಮತ್ತು ವಿವಿಧ ಬಗೆಯ ಪ್ರಾಣಿಗಳನ್ನು ಅವುಗಳ ನೈಜ ವಾಸ ಸ್ಥಾನದಲ್ಲಿ ನೋಡಿ ತಣಿಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ನೊಕ್ರೆಕ್ ಪಶ್ಚಿಮ ಗರೊ ಬೆಟ್ಟಗಳಲ್ಲಿನ ಅತ್ಯಂತ ಎತ್ತರವಾದ ಶೃಂಗವಾಗಿರುವುದಲ್ಲದೆ, ಹಲವಾರು ಪ್ರಾಣಿ- ಪಕ್ಷಿಗಳಿಗೆ ಆಶ್ರಯವನ್ನು ಸಹ ಒದಗಿಸಿದೆ.

ಇಲ್ಲಿ ಮೆರಂಟಿ, ವೈಲ್ಡ್ ಲೆಮನ್, ಲಾಲಿ, ಚಂಪಕ ಮತ್ತು ಗ್ರ್ಯಾಂಡ್ ರಸಮಲಗಳಂತಹ ಅಪರೂಪದ ಆರ್ಕಿಡ್‍ಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ನಾವು ಹಲವಾರು ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಹಲವು ಪ್ರಾಣಿ ಪ್ರಭೇದಗಳನ್ನು ಇಲ್ಲಿ ಕಾಣಬಹುದಾಗಿದೆ. ಇವುಗಳಲ್ಲಿ ಹಿಲ್ಲ್ ಲಾಕ್ ಗಿಬ್ಬನ್, ಹಂದಿ ಬಾಲದ ಮ್ಯಾಕಕ್ಯೂ, ಹಿಮಾಲಯನ್ ಬ್ಲಾಕ್ ಬಿಯರ್, ಆನೆ ಮತ್ತು ಹಾರುವ ದೊಡ್ಡ ಅಳಿಲುಗಳು ಸೇರಿವೆ. ನೊಕ್ರೆಕ್‍ನಿಂದ ಟುರಗೆ ಸಾಗುವ ಚಾರಣ ಹಾದಿಯು ಸಾಹಸಿಗರಿಗೆ ಮತ್ತು ಚಾರಣಿಗರಿಗೆ ರೋಮಾಂಚಕಾರಿ ಅನುಭವವನ್ನು ಒದಗಿಸುತ್ತದೆ.

ಈ ಚಾರಣವು ನೋಡುಗರನ್ನು ಮಂತ್ರ ಮುಗ್ಧಗೊಳಿಸುವ ಬೃಹತ್ ಬೆಟ್ಟಗಳು ಹಾಗು ಬ್ರಹ್ಮ ಪುತ್ರ ನದಿಯ ಸೊಬಗನ್ನು ಸವಿಯುವ ಅವಕಾಶವನ್ನು ನೀಡುತ್ತವೆ. ಈ ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮವನ್ನು ತಲುಪಲು ಶಿಲ್ಲಾಂಗ್ ಅಥವಾ ಟುರದಿಂದ ಬಸ್ ಮೂಲಕ ಬರುವುದು ಉತ್ತಮ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue