ಚಿಬ್ರಗ್ರೆ ಎನ್ನುವುದು ಮೇಘಾಲಯದ ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಒಂದು ಪ್ರಸಿದ್ಧ ವಿಹಾರ ತಾಣವಾಗಿದೆ. ಟುರದಲ್ಲಿ ನೆಲೆಸಿರುವ ನಿವಾಸಿಗಳಿಗೆ ಇದು ಕೇವಲ ಇಪ್ಪತ್ತೈದು ಕಿ.ಮೀ ದೂರದಲ್ಲಿದೆ. ಅಂಥುರಿಯಮ್ ಪ್ಲಾಂಟೇಷನ್ನಿಂದ ಕೇವಲ ಅರ್ಧ ತಾಸಿನ ಪಯಣದಷ್ಟು ದೂರವಿರುವ ಈ ಸ್ಥಳಕ್ಕೆ ತಲುಪುವುದು ತೀರಾ ಸುಲಭ.
ಗಂಗೊಲ್ ಮತ್ತು ರೊಂಗ್ರಮ್ ನದಿಗಳು ಚಿಬ್ರಗ್ರೆನಲ್ಲಿ ಸಂಗಮಗೊಳ್ಳುತ್ತವೆ. ನಂತರ ಇವು ಒಟ್ಟಿಗೆ ಬ್ರಹ್ಮಪುತ್ರ ನದಿಯೊಂದಿಗೆ ಸಂಗಮಗೊಳ್ಳುವ ಮೊದಲು ರೊಂಗ್ರಮ್, ಗರೊಬಧ ಮತ್ತು ಮಂಕಚಾರ್ (ಅಸ್ಸಾಂ) ಗಳ ಮೂಲಕ ಸಾಗಿ ಕೊನೆಗೆ ಬ್ರಹ್ಮಪುತ್ರ ನದಿಯೊಂದಿಗೆ ಕೂಡಿ ಬಂಗಾಳ ಕೊಲ್ಲಿಗೆ ಸೇರುತ್ತವೆ.
ಇಲ್ಲಿ ಇರುವ ಒಂದು ಸಣ್ಣ ಹಳ್ಳವು ಈಜಾಡುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದರ ಜೊತೆಗೆ ವಿಶಾಲವಾಗಿರುವ ಮರಳಿನಿಂದ ಕೂಡಿದ ಬೀಚ್ ನೂರಾರು ಜನರಿಗೆ ವಿಹಾರ ಮಾಡಲು ಪ್ರಶಸ್ತವಾಗಿದೆ. ಇಲ್ಲಿನ ಬೆಟ್ಟದ ಮೇಲೆ ವೀಕ್ಷಣಾ ತಾಣವನ್ನು ಸಹ ನಿರ್ಮಾಣ ಮಾಡಲಾಗಿದೆ. ಆದರೆ ನಿಜವಾದ ಮೋಜು ಇಲ್ಲಿನ ಬೀಚ್ನಲ್ಲಿ ಆಟವಾಡುವುದರಲ್ಲಿ, ಕೊಳದಲ್ಲಿ ಈಜಾಡುವುದರಲ್ಲಿ , ಮರಳಿನ ದಂಡೆಯಲ್ಲಿ ಸ್ನೇಹಿತರ ಮತ್ತು ಕುಟುಂಬ ಸದಸ್ಯರ ಜೊತೆ ಅಡುಗೆ ಮಾಡಿ ತಿನ್ನುವುದರಲ್ಲಿ ಅಡಗಿದೆ.
ತುರಾದಿಂದ ಬಸ್ನ ಮೂಲಕ್ ಚಿಬ್ರಗ್ರೆ ಬರುವುದು ಉತ್ತಮವಾದ ಮಾರ್ಗವಾಗಿದೆ.