Search
 • Follow NativePlanet
Share
ಮುಖಪುಟ » ಸ್ಥಳಗಳು» ಕೂಚ್ ಬೆಹರ್

ಕೂಚ್ ಬೆಹರ್  : ಸಂಸ್ಕೃತಿ, ಇತಿಹಾಸಗಳ ಸ್ಪೂರ್ತಿಧಾಮ

11

ಕೂಚ್ ಬೆಹರ್ ಪಶ್ಚಿಮ ಬಂಗಾಳದ ಯೋಜನಾಬದ್ಧವಾದ ಪಟ್ಟಣಗಳಲ್ಲಿ ಒಂದಾಗಿದ್ದು, ಸರ್ವವಿಧದಲ್ಲಿಯೂ ಒಂದು ವರ್ಗದ ಪಾರಂಪರಿಕ ಮೌಲ್ಯಗಳ ಪಡಿಯಚ್ಚಿನಂತಿದೆ.   ಹಿಂದಿನ ದಿನಗಳಲ್ಲಿ ಈ ಪಟ್ಟಣವು ಅರಸೊತ್ತಿಗೆಯ ಬಿಹಾರ ರಾಜ್ಯದ ಕೇಂದ್ರಸ್ಥಾನವಾಗಿದ್ದು, ಇಂದು ಒಂದೆಡೆ ಕಾಲನಿಗಳ ಶೈಲಿಯ ಕಟ್ಟಡಗಳು ಹಾಗೂ ಇನ್ನೊಂದೆಡೆ ಘನ ಗಂಭಿರವಾದ ಹಿಮಾಲಯ ಪರ್ವತಗಳನ್ನು ಹೊಂದಿರುವ ಈ  ಕೂಚ್ ಬೆಹರ್ ವು ವಿಶ್ವವಿಖ್ಯಾತವಾದ ಪ್ರವಾಸೀ ತಾಣವಾಗಿದೆ.  

ಹಿಮಾಲಯ ಪರ್ವತಗಳ ಪೂರ್ವ ಭಾಗದ ತಪ್ಪಲಿನಲ್ಲಿರುವ  ಕೂಚ್ ಬೆಹರ್ ಮಂಜಿನಿಂದ ಅಚ್ಚಾದಿತವಾದ ಬೆಟ್ಟಗಳು ಮತ್ತು ವಿಶಾಲವಾದ ಅಲ್ಪೈನ್ ಕಾಡುಗಳನ್ನು ಹೊಂದಿದ್ದು, ಇವು ಈ ಪಟ್ಟಣಕ್ಕೊಂದು ಪ್ರಕೃತಿ ಸಹಜವಾದ ಸೊಬಗನ್ನು ನೀಡಿವೆ. ಕೂಚ್ ಬೆಹರ್ ವಿವಿಧ ಸಂಸ್ಕೃತಿಗಳಾದ ಬೆಂಗಾಲಿ, ಬೌದ್ಧ, ಮತ್ತು ಟಿಬೆಟ್ ಸಂಸ್ಕೃತಿಯಂತಹ ಹಲವು ಸಂಸ್ಕೃತಿಗಳ ಪ್ರಭಾವಕ್ಕೆ ಒಳಪಟ್ಟಿದ್ದು, ಭಾರತೀಯ ಸಾಂಸ್ಕೃತಿಕ ವೈವಿಧ್ಯಕ್ಕೆ ಇದೊಂದು ಸಮರ್ಪಕವಾದ, ಪರಿಪೂರ್ಣವಾದ ಉದಾಹರಣೆಯಾಗಿದೆ.

ಕೂಚ್ ಬೆಹರ್ ನಲ್ಲಿರುವ ಹಾಗೂ ಸುತ್ತಮುತ್ತ ಪ್ರವಾಸೀ ತಾಣಗಳು

ಬಾರಾದೇಬಿ ಬಾರಿ ಪ್ರವಾಸೋದ್ಯಮವು ಪ್ರವಾಸಿಗರಿಗಾಗಿ ಕೆಲವೊಂದು ಬಹು ಮುಖ್ಯವಾದ ಸ್ಥಳಗಳನ್ನು ಹೊಂದಿದೆ.  ಪ್ರಮುಖವಾದ ಪ್ರವಾಸೀ ಸ್ಥಳಗಳ ಪೈಕಿ ಬನೇಶ್ವರ ಶಿವ ದೇವಸ್ಥಾನ, ಬಾರಾದೇಬಿ ಬಾರಿ ದೇವಸ್ಥಾನ, ಪ್ರಮುಖ ಉತ್ಖನನ ಪ್ರದೇಶವಾದ ಗೋಸಾನಿಮರಿ ರಾಜ್ಪತ್ ಇವೇ ಮೊದಲಾದವು ಕೂಚ್ ಬೆಹರ್ ದ ಕೆಲವೊಂದು ಪ್ರವಾಸೀ ಆಕರ್ಷಣೆಗಳಾಗಿವೆ.

ಕೂಚ್ ಬೆಹರ್ ನಲ್ಲಿ ಆಚರಿಸಲ್ಪಡುವ ಹಬ್ಬಗಳು

ಕೂಚ್ ಬೆಹರ್ ವು ತೊರ್ಸಾ ನದಿಗೆ ಅತೀ ಸಮೀಪದಲ್ಲಿದೆ.  ಈ ಪ್ರದೇಶದಲ್ಲಿ ಮಳೆಗಾಲವು ಅತಿವೃಷ್ಟಿಗಾಗಿ ಕುಖ್ಯಾತಿಯನ್ನು ಹೊಂದಿದ್ದು, ಕೆಲವೊಮ್ಮೆ ಇಲ್ಲಿಗೆ ತಲುಪುವುದು ದುಸ್ಸಾಧ್ಯವಾಗುತ್ತದೆ. ಕೂಚ್ ಬೆಹರ್ ದ ಸ್ಥಳೀಯರು ವಿನೋದಪ್ರಿಯ ಜನರಾಗಿದ್ದಾರೆ.  ಇವರು ಎಲ್ಲಾ ಪ್ರಮುಖ ಭಾರತೀಯ ಮತ್ತು ಬೆಂಗಾಲಿ ಹಬ್ಬಗಳಾದ ದೀಪಾವಳಿ, ದುರ್ಗಾ ಪೂಜಾ, ಕಾಳಿ ಪೂಜಾ ಮತ್ತು ದಸರಾಗಳನ್ನು ಆಚರಿಸುತ್ತಾರೆ.  ಉತ್ಸವದಂತಹ ಆಚರಣೆಗಳಂತೂ ಇಲ್ಲಿ ಪ್ರತಿ ವರ್ಷವೂ ಆಯೋಜಿಸಲ್ಪಡುತ್ತಿದ್ದು, ರಸ್ ಮೇಳವು ಉತ್ತರ ಬೆಂಗಾಲ್ ನ ಅತೀ ಹಳೆಯ ಉತ್ಸವಗಳಲ್ಲಿ ಒಂದಾಗಿದೆ.

ಆಹಾರ

ಕೂಚ್ ಬೆಹರ್ ನಲ್ಲಿರುವಾಗ ನೀವು ವಿಧ ವಿಧವಾದ ಅಡುಗೆಗಳ ಸ್ವಾದವನ್ನು ಸವಿಯಬಹುದು.  ಭುನಾ ಖಿಚಡಿ ಮತ್ತು ಲಬ್ರಾ ಗಳು ಇಲ್ಲಿನ ಸ್ಥಳೀಯ ಅಚ್ಚುಮೆಚ್ಚಿನ ತಿನಿಸುಗಳಾಗಿವೆ.  ಮೊಮೋ ಗಳೆಂದು ಕರೆಯಲ್ಪಡುವ ರಸ್ತೆ ಬದಿಯಲ್ಲಿ ದೊರೆಯುವ ಸಿಹಿ ಮೋದಕದಂತಹ ತಿನಿಸುಗಳಿಂದ  ಹಿಡಿದು ಬಾಂಗ್ಲಾದೇಶಿ ಮತ್ತು ಬೆಂಗಾಲಿ ಅಡುಗೆಗಳವರೆಗೆ ವಿವಿಧ  ರಸ್ತೆ ಬದಿಯ ಡಾಬಾಗಳು, ರೆಸ್ಟೋರೆಂಟ್ ಗಳು, ಮತ್ತು ದರ್ಶಿನಿಗಳು ವೈವಿದ್ಯಮಯವಾದ ತಿನಿಸುಗಳನ್ನು ಪೂರೈಸುತ್ತವೆ.  

ಇಲ್ಲಿನ ಕೆಲವು ಸ್ಥಳೀಯ ಸೀಫುಡ್ (ಸಮುದ್ರ ಆಹಾರ) ಮತ್ತು ಸ್ಥಳೀಯ ವಿಶೇಷವಾದ ಖಾದ್ಯಗಳನ್ನು ಸವಿಯಲು ಮರೆಯದಿರಿ.

ಕೂಚ್ ಬೆಹರ್ ನ ಸ್ಥಳಿಯರು ಅದೆಷ್ಟು ಆತ್ಮೀಯರಾಗಿರುತ್ತಾರೆಂದರೆ, ಇಲ್ಲಿ ಪಾರಾ (para) ಎಂದು ಕರೆಯಲ್ಪಡುವ ಪ್ರತಿಯೊಂದು ನೆರೆಕರೆಯ ಗುಂಪಿನವರು ತಮ್ಮದೇ ಆದ ಕಮ್ಯೂನಿಟಿ ಕ್ಲಬ್, ಮನೋರಂಜನಾ ಕೇಂದ್ರ, ಮತ್ತು ಭೋಜನಾಲಯವನ್ನು ಹೊಂದಿದ್ದು, ಈ ಬೇರೆ ಬೇರೆ ಪಾರಾಗಳವರು ಇಲ್ಲಿ ನಿಯಮಿತವಾಗಿ ಒಟ್ಟಾಗಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ.

ಶಿಕ್ಷಣವೂ ಕೂಡ ಇಲ್ಲಿ ಉತ್ತಮವಾಗಿ ಪ್ರಗತಿ ಹೊಂದಿದ್ದು, ಇಲ್ಲಿ ಅನೇಕ ಇಂಜಿನಿಯರಿಂಗ್ ಸಂಸ್ಥೆಗಳು ತಲೆಯೆತ್ತುತ್ತಿವೆ ಮತ್ತು ಇವುಗಳಿಗೆ ಹಿನ್ನೆಲೆಯಾಗಿ ಕೆಲವು ಅತ್ಯುತ್ತಮ ಶಾಲೆಗಳಿವೆ. ವಿದ್ಯಾರ್ಥಿಗಳು ನೆರೆಯ ಪಟ್ಟಣಗಳಿಂದ ವರ್ಷಗಟ್ಟಲೆ ವಿದ್ಯಾಭ್ಯಾಸಕ್ಕಾಗಿ ಕೂಚ್ ಬೆಹರ್ ಕ್ಕೆ ಬಂದು ನೆಲೆಸುತ್ತಿದ್ದಾರೆ.

ಕ್ರೀಡೆಗಳು

ಪಶ್ಚಿಮ ಬಂಗಾಳದ ಇತರ ಭಾಗಗಳಂತೆ ಇಲ್ಲಿಯೂ ಕೂಡ ಸ್ಥಳೀಯರು ಎಲ್ಲಾ ವಿಧದ ಕ್ರೀಡೆಗಳಲ್ಲಿಯೂ ಹರ್ಷದಿಂದ ಪಾಲ್ಗೊಳ್ಳುತ್ತಾರೆ.  MJN,  ಕೂಚ್ ಬೆಹರ್ ಮತ್ತು ನೆಹರು ಸ್ಟೇಡಿಯಂಗಳು ಇಲ್ಲಿನ ಸ್ಥಳೀಯರಿಗಾಗಿ ಮತ್ತು ಪ್ರವಾಸಿಗರಿಗಾಗಿ, ಒಂದೆರಡು ಕ್ರೀಡೆಗಳಲ್ಲಿ ಶಾಮೀಲಾಗಲು ಬೇಕಾಗುವ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತದೆ.

ಕೈಗಾರಿಕಾ ವಲಯ

ಪ್ರವಾಸೀ ದೃಷ್ಟಿಕೋನದಿಂದ ಮಾತ್ರವಲ್ಲದೇ, ಕೂಚ್ ಬೆಹರ್ ವು, ಪ್ರಾಥಮಿಕವಾಗಿ ಕೈಗಾರಿಕಾ ಪಟ್ಟಣವೆಂದೂ ಕೂಡ ಹೆಸರುವಾಸಿಯಾಗಿದೆ.  ಇಲ್ಲಿ ಅನೇಕ ಉತ್ಪಾದಕರು ತಮ್ಮ  ಕಾರ್ಖಾನೆಗಳನ್ನು ಸ್ಥಾಪಿಸಿ ತನ್ಮೂಲಕ ವಿಫುಲ ಉದ್ಯೋಗಾವಕಾಶಕ್ಕೆ ಕಾರಣರಾಗಿದ್ದಾರೆ.

ಕೂಚ್ ಬೆಹರ್ ವು ಯಾರೊಬ್ಬರಿಗೂ ನಿರಾಸೆಯನ್ನುಂಟು ಮಾಡದೇ, ಪ್ರತಿಯೊಬ್ಬರಿಗೂ ಕೂಡ, ಅವರು ಕೇವಲ ವ್ಯವಹಾರದ ಕಾರಣಕ್ಕಾಗಿಯೇ ಭೇಟಿ ನೀಡಿರಲಿ ಅಥವಾ ನವಜೋಡಿಯೇ ಆಗಿರಲಿ, ಅಥವಾ ಕುಟುಂಬವೇ ಆಗಿರಲಿ, ಎಲ್ಲರಿಗೂ ಬೇಕಾದಂತಹ ಯಾವುದಾದರೂ ಒಂದು ಅಂಶವನ್ನು ಖಂಡಿತಾ ಹೊಂದಿರುತ್ತದೆ.  ಉತ್ತರ ಬಂಗಾಳದ ಪ್ರಮುಖ ಪಟ್ಟಣಗಳಿಗೆ ಇದು ಸಂಪರ್ಕಿಸುತ್ತದೆ ಮತ್ತು ಇತರ ಸಣ್ಣ ಪಟ್ಟಣಗಳಿಗೆ ಭೇಟಿ ನೀಡಲೂ ಕೂಚ್ ಬೆಹರ್ ವು ಮಹತ್ತರವಾದ ಆರಂಭಿಕ ತಾಣವಾಗಿದೆ.  ಸಿಲ್ಲಿಗುರಿಯು ಇಲ್ಲಿಂದ ಕೆಲವೇ ಘಂಟೆಗಳ ಪ್ರಯಾಣದಷ್ಟು ದೂರದಲ್ಲಿದೆ.

ಕೂಚ್ ಬೆಹರ್ ಕ್ಕೆ ಭೇಟಿ ನೀಡಲು ಪ್ರಶಸ್ತ ಕಾಲಾವಧಿ

ಚಳಿಗಾಲದಲ್ಲಿ ಪ್ರಯಾಣಕ್ಕೆ ಪೂರಕವಾಗಿ ಇಲ್ಲಿನ ಹವಾಮಾನವು ಇರುತ್ತದಾದ್ದರಿಂದ ಈ ಅವಧಿಯು ಕೂಚ್ ಬೆಹರ್ ಕ್ಕೆ ಭೇಟಿ ನೀಡಲು ಅತೀ ಸೂಕ್ತ ಕಾಲಾವಧಿಯಾಗಿರುತ್ತದೆ.

ಕೂಚ್ ಬೆಹರ್ ವನ್ನು ತಲುಪುವ ಬಗೆ

ಕೂಚ್ ಬೆಹರ್ ವು ದೇಶದ ಇತರ ಭಾಗಗಳೊಂದಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವು  ಕೂಚ್ ಬೆಹರ್ ಗೆ ಅತೀ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ.  ಕೂಚ್ ಬೆಹರ್ ವು ರಸ್ತೆಯ ಮಾರ್ಗದ ಮೂಲಕವೂ ಕೂಡ ದೇಶದ ಇತರ ಭಾಗಗಳಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ.

ಕೂಚ್ ಬೆಹರ್ ಪ್ರಸಿದ್ಧವಾಗಿದೆ

ಕೂಚ್ ಬೆಹರ್ ಹವಾಮಾನ

ಉತ್ತಮ ಸಮಯ ಕೂಚ್ ಬೆಹರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೂಚ್ ಬೆಹರ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿಗಳಾದ 31 ಮತ್ತು 31 D ಕೂಚ್ ಬೆಹರ್ ವನ್ನು ಸಿಲ್ಲಿಗುರಿ ಗೆ ಸಂಪರ್ಕಿಸುತ್ತದೆ. ಸಿಲ್ಲಿಗುರಿಯು ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದ ಒಂದು ಪ್ರಮುಖವಾದ ನಗರವಾಗಿದೆ. ಕೂಚ್ ಬೆಹರ್ ವು ಸಿಲ್ಲಿಗುರಿಯಿಂದ 141 ಕಿ. ಮೀ. ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಲಪೈಗುರಿ ಮತ್ತು ಸಿಲಿಗುರಿ ರೈಲ್ವೆ ನಿಲ್ದಾಣಗಳು ಕೂಚ್ ಬೆಹರ್ ವನ್ನು ರಾಜ್ಯದ ಮತ್ತು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೂಚ್ ಬೆಹರ್ ವಿಮಾನ ನಿಲ್ದಾಣವು ಕೆಲಕಾಲದವರೆಗೆ ಕಾರ್ಯನಿರತವಾಗಿರಲಿಲ್ಲ. ಸಿಲಿಗುರಿ ವಿಮಾನನಿಲ್ದಾಣವು ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಇದು ಕೂಚ್ ಬೆಹರ್ ದಿಂದ ಸರಿಸುಮಾರು 141 ಕಿ. ಮೀ. ದೂರದಲ್ಲಿದ್ದು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
03 Jul,Sun
Return On
04 Jul,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Jul,Sun
Check Out
04 Jul,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Jul,Sun
Return On
04 Jul,Mon