ಪೆಲ್ಗ ಜಲಪಾತವು ಗಾಳ ಹಾಕಿ ಮೀನು ಹಿಡಿಯುವವರ ಮತ್ತು ವಿಹಾರಕ್ಕೆಂದು ಬರುವವರ ವಲಯದಲ್ಲಿ ಭಾರೀ ಪ್ರಖ್ಯಾತಿಯನ್ನು ಪಡೆದಿದೆ. ಶಾಂತ ಮತ್ತು ಶುಭ್ರತೆಯನ್ನು ಹೊಂದಿರುವ ಈ ತಾಣವು ಪ್ರಕೃತಿ ಪ್ರಿಯರ ಸ್ವರ್ಗವಾಗಿದೆ. ಇಲ್ಲಿನ ಪ್ರವಾಸೋದ್ಯಮ ಇಲಾಖೆಯು ಜಲಪಾತದ ಬುಡಕ್ಕೆ ತಲುಪಲು ಕಾಲು ಹಾದಿಯನ್ನು ಸಹ ನಿರ್ಮಾನ ಮಾಡಿದ್ದಾರೆ. ಜಲಪಾತದ ಬುಡಕ್ಕೆ ತಲುಪಿದ ಕೂಡಲೆ ನೀವು ಜಲಪಾತದ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ಒಂದು ವೀಕ್ಷಣಾ ಗೋಪುರವನ್ನು ಸಹ ನಿರ್ಮಾಣ ಮಾಡಿದ್ದಾರೆ. ಈ ತಾಣವು ನಗರದ ಗೌಜು -ಗದ್ದಲಗಳಿಂದ ದೂರವುಳಿದು, ನಮ್ಮ ಮನಸ್ಸಿಗೆ ಪುನಃಶ್ಚೇತನವನ್ನು ಒದಗಿಸಲು ಹೇಳಿ ಮಾಡಿಸಿದ ತಾಣವಾಗಿದೆ.
ಗನೊಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬಿದಿರಿನ ಸೇತುವೆ ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ. ಇದಕ್ಕೆ ಬೊಂಬಿನ ಹೊರತಾಗಿ ಬೇರೆ ಇನ್ಯಾವ ವಸ್ತುಗಳನ್ನು ಇಲ್ಲಿ ಬಳಸದಿರುವುದು ವಿಶೇಷವಾಗಿದೆ. ಪೆಲ್ಗ ಜಲಪಾತದ ಬಳಿಯಲ್ಲಿ ಹಲವಾರು ತಿಂಡಿಗಳನ್ನು ಮಾರುವ ಅಂಗಡಿಗಳು ಇವೆ. ಇಲ್ಲಿ ಪ್ರವಾಸಿಗರು ಸ್ಥಳೀಯ ಗರೊ ತಿಂಡಿಗಳ ರುಚಿಯನ್ನು ಸವಿಯಬಹುದು. ಪೆಲ್ಗ ಜಲಪಾತವು ಟುರದಿಂದ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಟುರದಿಂಡ ಇಲ್ಲಿಗೆ ಟ್ಯಾಕ್ಸಿಯಲ್ಲಿ ತಲುಪುಬಹುದು.