Search
 • Follow NativePlanet
Share
ಮುಖಪುಟ » ಸ್ಥಳಗಳು» ಕಾಜಿರಂಗಾ

ಕಾಜಿರಂಗಾ - ಪ್ರಖ್ಯಾತವಾದ ಒಂದು ಕೊಂಬಿನ ಘೇಂಡಾಮೃಗಗಳ ತಾಣ

24

ಒಂದು ಕೊಂಬಿನ ಘೇಂಡಾಮೃಗಗಳಿಗೆ, ಹುಲಿಗಳಿಗೆ ಹಾಗು ವೈವಿಧ್ಯಮಯವಾದ ಪಕ್ಷಿ ಸಂಪತ್ತಿಗೆ ಖ್ಯಾತಿ ಪಡೆದ ತಾಣ.

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ 2006ರಲ್ಲಿ ಇದು ಹುಲಿ ಸಂರಕ್ಷಿತ ವನ್ಯಧಾಮವೆಂದು ಸಹ ಘೋಷಿಸಲ್ಪಟ್ಟಿತು. ಇದು ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋದ ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಸಹ ಸೇರಲ್ಪಟ್ಟಿದೆ. ಸುಮಾರು 429.93 ಚ.ಕಿ.ಮೀ ವ್ಯಾಪ್ತಿಯಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಗೋಲಘಾಟ್ ಮತ್ತು ನೊವಗಾಂವ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ಕಾಜಿರಂಗಾದಲ್ಲಿ ಪ್ರವಾಸ ಕೈಗೊಂಡಾಗ ನೀವು ಕೇವಲ ಘೇಂಡಾಮೃಗ ಮತ್ತು ಹುಲಿಗಳನ್ನು ಮಾತ್ರವಲ್ಲದೆ, ಏಶಿಯಾಟಿಕ್ ಆನೆಗಳು, ಏಶಿಯಾಟಿಕ್ ನೀರು ಎಮ್ಮೆಗಳು ಮತ್ತು ಜೌಗು ಪ್ರದೇಶದಲ್ಲಿ ಕಂಡು ಬರುವ ಜಿಂಕೆಗಳನ್ನು ಇಲ್ಲಿ ಬಹುಸಂಖ್ಯೆಯಲ್ಲಿ ನೋಡಬಹುದು. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ವಿಪುಲವಾದ ಪಕ್ಷಿ ಸಂಪತ್ತಿಗೆ ಸಹ ಹೆಸರುವಾಸಿಯಾಗಿದೆ. ಇಲ್ಲಿಗೆ ವಿದೇಶಿ ವಲಸೆ ಹಕ್ಕಿಗಳು ಮತ್ತು ದೇಶಿ ಹಕ್ಕಿಗಳು ಸ್ವಚ್ಛಂಧವಾಗಿ ಹಾರಾಡುವುದನ್ನು ನಾವು ಇಲ್ಲಿ ನೋಡಬಹುದು.

ಉದ್ಯಾನವನದ ಒಳಗಿನ ಆನೆ ಸಫಾರಿ - ಕಾಜಿರಂಗಾದಲ್ಲಿನ ಪ್ರವಾಸದ ಪ್ರಮುಖ ಆಕರ್ಷಣೆ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಆನೆ ಸಫಾರಿ. ತರಬೇತಿ ಹೊಂದಿದ ಮಾವುತರ ಜೊತೆಯಲ್ಲಿ ಆನೆಯ ಮೇಲೆ ಕುಳಿತು, ವಿಶಾಲವಾದ ಬಯಲು ಪ್ರದೇಶಗಳಲ್ಲಿ ಭವ್ಯವಾದ ಪ್ರಾಣಿಗಳನ್ನು ನೋಡುತ್ತ ಸುತ್ತಾಡುವ ಅನುಭವವು, ಇದನ್ನು ನಿಮ್ಮ ಜೀವನದ ಅವಿಸ್ಮರಣೀಯ ಘಟನೆಗಳಲ್ಲಿ ಒಂದನ್ನಾಗಿಸುತ್ತದೆ.

ಇದನ್ನು ಹೊರತುಪಡಿಸಿ ಈ ರಾಷ್ಟ್ರೀಯ ಉದ್ಯಾನವನವನ್ನು ನೋಡಲು ಜೀಪ್ ಅಥವಾ 4WD ವಾಹನಗಳನ್ನು ಸಹ ಬುಕ್ ಮಾಡಿಕೊಂಡು ಹೋಗಬಹುದು. ಈ ವಾಹನಗಳನ್ನು ಈ ಉದ್ಯಾನವನದಲ್ಲಿರುವ ಆಡಳಿತ ಕೇಂದ್ರದಲ್ಲಿ ಮುಂಗಡವಾಗಿ ಬುಕ್ ಮಾಡುವುದು ಒಳಿತು.

ಕಾಜಿರಂಗಾ ಪ್ರವಾಸ - ಉದ್ಯಾನವನದ ಒಳಗೆ ಮತ್ತು ಹೊರಗೆ ಇರುವ ಕುತೂಹಲ ಕೆರಳಿಸುವ ಪ್ರವಾಸಿ ತಾಣಗಳು

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸ ಕೈಗೊಂಡರೆ ಕೇವಲ ಉದ್ಯಾನವನವನ್ನು ಮಾತ್ರ ನೋಡುತ್ತ ಕಾಲ ಕಳೆಯಬೇಕಿಲ್ಲ. ಜೊತೆಗೆ ಇಲ್ಲಿನ ಹಾಸು ಪಾಸಿನಲ್ಲಿ ಹಲವಾರು ಆಕರ್ಷಣೆಗಳು ಇದ್ದು, ಒಂದೆರಡು ದಿನ ನೋಡುತ್ತ ಸುತ್ತಾಡಬಹುದು. ಸೊನಿಟ್‍ಪುರ್ ಜಿಲ್ಲೆಯಲ್ಲಿನ ಪ್ರಸಿದ್ಧ ಐತಿಹಾಸಿಕ ಹಿನ್ನಲೆಯ ಸ್ಥಳವಾದ ಗೋಹ್‍ಪುರ್, ಕಕೊಚಾಂಗ್ ಜಲಪಾತಗಳನ್ನು ಪ್ರವಾಸಿಗರು ಸಂದರ್ಶಿಸಬಹುದು. ಜೊತೆಗೆ ನುಮಲಿಗಡ್ ( ಗೊಲಘಾಟ್ ಜಿಲ್ಲೆ) ನಲ್ಲಿ ಪ್ರವಾಸಿಗರು ಡಿಯೊಪರ್ಬತ್ ಅವಶೇಷಗಳನ್ನು ವೀಕ್ಷಿಸಬಹುದು.

ಕಾಜಿರಂಗಾಗೆ ತಲುಪುವುದು ಹೇಗೆ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ರಸ್ತೆಯ ಮೂಲಕವೆ ತಲುಪಬೇಕು. ಇದು ಗುವಹಾಟಿಯಿಂದ 217 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಬಾಡಿಗೆ ಕ್ಯಾಬ್‍ಗಳ ಮೂಲಕ ನಾವು ಕಾಜಿರಂಗಾ ತಲುಪಬಹುದು. ಜೊತೆಗೆ ತೇಜ್‍ಪುರ್ ಮತ್ತು ಗೊಲಘಾಟ್‍ಗಳು ಇಲ್ಲಿಗೆ ಸಮೀಪದಲ್ಲಿವೆ, ಈ ನಗರಗಳು ರಾಜ್ಯದ ಇತರ ಭಾಗದ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಕಾರಣದಿಂದಾಗಿ ಇಲ್ಲಿಗೆ ಬಂದು ಕಾಜಿರಂಗಕ್ಕೆ ತಲುಪಬಹುದು.

ಕಾಜಿರಂಗಾದ ಹವಾಮಾನ

ಕಾಜಿರಂಗಾದಲ್ಲಿ ಅತ್ಯಧಿಕ ಪ್ರಮಾಣದ ಮಳೆ ಬೀಳುತ್ತದೆ. ಹಾಗಾಗಿ ಈ ರಾಷ್ಟ್ರೀಯ ಉದ್ಯಾನವನವು ಕೆಲವು ತಿಂಗಳುಗಳ ಕಾಲ ಸಾರ್ವಜನಿಕರಿಗೆ ಪ್ರವೇಶವಿಲ್ಲದೆ ಮುಚ್ಚಲ್ಪಟ್ಟಿರುತ್ತದೆ. ಈ ಉದ್ಯಾನವನದಲ್ಲಿ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳೆಂಬ ಕಾಲವನ್ನು ನಾವು ನೋಡಬಹುದು. ಇಲ್ಲಿನ ಬೇಸಿಗೆಗಳು ವಿಪರೀತ ಗಾಳಿಯಿಂದ ಕೂಡಿದ್ದರೆ, ಮಳೆಗಾಲಗಳು ಪ್ರವಾಹದಿಂದ ಕೂಡಿರುತ್ತವೆ. ಚಳಿಗಾಲಗಳು ತಮ್ಮ ಆಹ್ಲಾದಕರವಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಕಾಜಿರಂಗಾ ಪ್ರಸಿದ್ಧವಾಗಿದೆ

ಕಾಜಿರಂಗಾ ಹವಾಮಾನ

ಕಾಜಿರಂಗಾ
27oC / 80oF
 • Partly cloudy
 • Wind: ESE 3 km/h

ಉತ್ತಮ ಸಮಯ ಕಾಜಿರಂಗಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಾಜಿರಂಗಾ

 • ರಸ್ತೆಯ ಮೂಲಕ
  ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪಲು ರಸ್ತೆ ಮಾರ್ಗಗಳೇ ಪ್ರಮುಖವಾದ ಸಂಪರ್ಕ ಜಾಲಗಳಾಗಿವೆ. ರಾಷ್ಟ್ರೀಯ ಹೆದ್ದಾರಿ 37A ಯು ಕಾಜಿರಂಗಾವನ್ನು ಗುವಾಹಟಿ ಮತ್ತು ಮೇಲಿನ ಅಸ್ಸಾಂನ ಇತರ ಭಾಗದ ಜೊತೆಗೆ ಸಂಪರ್ಕಿಸುತ್ತದೆ. ತೇಜ್‍ಪುರ್, ಜೊರ್ಹಟ್ ಮುಂತಾದ ನಗರಗಳು ಇಲ್ಲಿಗೆ ರಸ್ತೆ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಕಾಜಿರಂಗಾಕ್ಕೆ ರಸ್ತೆ ಮೂಲಕ ತಲುಪ ಬಯಸುವವರು ಗುವಹಾಟಿಯ ಮೂಲಕ ಇಲ್ಲಿಗೆ ತಲುಪಬಹುದು. ಏಕೆಂದರೆ ಇಲ್ಲಿಂದ ಸುಮಾರು ಬಸ್ಸುಗಳು ಮತ್ತು ವಾಹನಗಳು ನಿಮ್ಮನ್ನು ಕಾಜಿರಂಗಾಕ್ಕೆ ತಲುಪಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಾಜಿರಂಗಾಗೆ ಸಮೀಪದ ರೈಲು ನಿಲ್ದಾಣವು ಫುರ್ಕೆಟಿಂಗ್‍ನಲ್ಲಿ ನೆಲೆಗೊಂಡಿದೆ. ಇದು ಈ ಉದ್ಯಾನವನದಿಂದ 69 ಕಿ.ಮೀ ದೂರದಲ್ಲಿದೆ. ಇಲ್ಲಿ ಕೆಲವೊಂದು ರೈಲುಗಳು ಮಾತ್ರ ನಿಲ್ಲುತ್ತವೆ. ಇದರ ಜೊತೆಗೆ ಇಲ್ಲಿಗೆ ಬರಲು ಮರಿಯಾನಿ ಜಂಕ್ಷನ್ ರೈಲು ನಿಲ್ದಾಣವು ಸಹ ನೆರವಾಗುತ್ತದೆ. ಇದು ಇಲ್ಲಿಂದ 98 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ದಿಬ್ರುಗಡ್- ಬೌಂಡ್ ರೈಲಿನ ಮೂಲಕ ಮರಿಯಾನಿ ಜಂಕ್ಷನ್ ತಲುಪಿ ಅಲ್ಲಿಂದ ಕಾಜಿರಂಗಾಕ್ಕೆ ರಸ್ತೆ ಮಾರ್ಗದ ಮೂಲಕ ತಲುಪಬಹುದು. ಇದರ ಜೊತೆಗೆ ಪ್ರವಾಸಿಗರಿಗೆ ಅನುಕೂಲವಿದ್ದರೆ ಗುವಹಾಟಿ ರೈಲು ನಿಲ್ದಾಣದ ಮೂಲಕ ಬೇಕಾದರು ಕಾಜಿರಂಗಾಕ್ಕೆ ತಲುಪಬಹುದು. ಇದು ಈಶಾನ್ಯ ಭಾರತದ ಅತ್ಯಂತ ದೊಡ್ಡ ಮತ್ತು ಸದಾ ಚಟುವಟಿಕೆಯಿಂದಿರುವ ರೈಲು ನಿಲ್ದಾಣವಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕಾಜಿರಂಗಾಗೆ ಸಮೀಪದ ವಿಮಾನ ನಿಲ್ದಾಣವು ಜೊರ್ಹಾಟ್‍ನಲ್ಲಿ ನೆಲೆಗೊಂಡಿದೆ. ಇದು ಇಲ್ಲಿಂದ 82 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಜೊರ್ಹಾಟ್ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಗುವಾಹಟಿ ಮತ್ತು ಕೊಲ್ಕಟಾಗಳಿಗೆ ವಿಮಾನಗಳು ಹೋಗಿ ಬರುತ್ತಿರುತ್ತವೆ. ಗುವಹಾಟಿಯ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇಲ್ಲಿಂದ 220 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Apr,Fri
Return On
27 Apr,Sat
 • Today
  Kaziranga
  27 OC
  80 OF
  UV Index: 7
  Partly cloudy
 • Tomorrow
  Kaziranga
  25 OC
  77 OF
  UV Index: 6
  Moderate or heavy rain shower
 • Day After
  Kaziranga
  25 OC
  77 OF
  UV Index: 6
  Patchy rain possible