Search
 • Follow NativePlanet
Share
ಮುಖಪುಟ » ಸ್ಥಳಗಳು» ಇಟಾನಗರ

ಇಟಾನಗರ ಪ್ರವಾಸೋದ್ಯಮ : ಆರ್ಕಿಡ್ ನ ರಾಜಧಾನಿಯಲ್ಲಿ ಬುಡಕಟ್ಟು ನಿವಾಸಿಗಳ ವರ್ಣರಂಜಿತ, ರೋಮಾಂಚಕ ಜೀವನವನ್ನು ಆನಂದಿಸಿರಿ.

51

ಅರುಣಾಚಲ ಪ್ರದೇಶದ ರಾಜಧಾನಿ ನಗರವಾದ ಇಟಾನಗರ್, ಹಿಮಾಲಯದ ಮಡಿಲಿನಲ್ಲಿ ನೆಲೆನಿಂತಿದೆ.  ಈ ನಗರವು ಪಪುಂಪರೆ ಜಿಲ್ಲೆಯ ಶಾಸನಾತ್ಮಕ ಆಡಳಿತಕ್ಕೆ ಒಳಪಟ್ಟಿದ್ದು,  1974 ರ ಏಪ್ರಿಲ್ 20 ರಿಂದಲೂ ಸಹ ರಾಜಧಾನಿ ನಗರವಾಗಿದೆ.  ಇದು ಈಶಾನ್ಯ ಭಾರತದಲ್ಲೇ ಅತಿ ದೊಡ್ಡ ರಾಜ್ಯವೊಂದರ ರಾಜಧಾನಿ ನಗರವಾಗಿದ್ದು, ಆ ರಾಜ್ಯದಲ್ಲೇ, ಅತಿ ದೊಡ್ಡ ನಗರವೂ ಆಗಿದೆ.

ದೇಶದ ಪ್ರತಿಯೊಂದು ಮೂಲೆಯ ಜನರೂ ಇಲ್ಲಿ ನೆಲೆಸಿರುವುದರಿಂದ, ಇಟಾನಗರವನ್ನು ಮಿನಿ ಇಂಡಿಯಾ ಎಂದೇ ಪರಿಗಣಿಸಲಾಗಿದೆ.  ರಾಮಚಂದ್ರನ  ರಾಜಧಾನಿಯಾದ ಮಾಯಾಪುರ್ ನೊoದಿಗೆ ಇಟಾನಗರ್ ಗುರುತಿಸಿಕೊಳ್ಳುತ್ತದೆ. ರಾಮಚಂದ್ರನು 14 - 15 ನೆಯ ಶತಮಾನದ ಕಾಲಾವಧಿಯಲ್ಲಿ ಜಿತಾರಿ ಸಾಮ್ರಾಜ್ಯದ ಅರಸನಾಗಿದ್ದನು.

ಇಟಾನಗರ್ ಮತ್ತು ಅದರ ಸುತ್ತಮುತ್ತಲೂ ಇರುವ ಪ್ರವಾಸೀ ತಾಣಗಳು

ಮಾನವನ ಇತಿಹಾಸದ ಕುರಿತ ಅಧ್ಯಯನಕ್ಕೆ ಪೂರಕವಾಗಿರುವ ತಾಣಗಳು ಇಟಾನಗರ್ ಅನ್ನು ಅಕ್ಷರಶಃ ಅಳುತ್ತವೆ.  ಇಲ್ಲಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು, ಇಲ್ಲಿನ ಐತಿಹಾಸಿಕ ಮಹತ್ವನ್ನು ಮತ್ತಷ್ಟು ಹೆಚ್ಚಿಸುತ್ತವೆ.  ಪ್ರಮುಖ ಆಕರ್ಷಣೀಯ ತಾಣವಾದ ಇಟಾ ಕೋಟೆ ಪ್ರವಾಸಿಗರು ಒಂದು ಭೇಟಿಯನ್ನು ನೀಡುತ್ತಾರೆ.  ಈ ಕೋಟೆಯ ಕಾರಣದಿಂದಲೇ, ಇಟಾನಗರವು ತನ್ನ ಹೆಸರನ್ನು ಪಡೆದುಕೊಂಡಿದೆ.

ಇತರ ಪ್ರೇಕ್ಷಣೀಯ ತಾಣಗಳಾದ ಬೊಮ್ಡಿಲಾ, ಪರಶುರಾಮ ಕುಂಡ, ಮಲಿನಿತನ್ ಮತ್ತು ಭೀಷ್ಮಕ ನಗರಗಳಿಗೆ ಬಸ್ ಅಥವಾ ಟ್ಯಾಕ್ಸಿಯ ಮೂಲಕ ಭೇಟಿ ನೀಡಬಹುದು.  ರಾಜಭವನ್, ಇಟಾನಗರದ ರಾಜ್ಯಪಾಲರ ಕಛೇರೀಯ ನಿವಾಸವಾಗಿದ್ದು ಇದೂ ಕೂಡ ಇಟಾನಗರದಲ್ಲಿದೆ ಮತ್ತು ಪ್ರವಾಸಿಗರ ಆಕರ್ಷಕ ತಾಣವಾಗಿದೆ.

ಇತರೆ ಪ್ರವಾಸೀ ತಾಣಗಳೆಂದರೆ, ಗಂಗಾ ಸರೋವರ, ಜವಾಹರಲಾಲ್ ನೆಹರು ವಸ್ತು ಸಂಗ್ರಹಾಲಯ, ಕರಕುಶಲ ವಸ್ತುಗಳ ಕೇಂದ್ರ, ಮತ್ತು ಮಳಿಗೆಗಳು.  ವಸ್ತು ಸಂಗ್ರಹಾಲಯವು ನಾನಾ ವಿಧದ, ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಗಾರವಾಗಿದ್ದು, ಇದು ಅರುಣಾಚಲ ಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುತ್ತದೆ.

ದಂತಕಥೆಯಾಗಿರುವ ಗಂಗಾ ಸರೋವರವು ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಅದ್ಭುತವಾದ ಸಸ್ಯಶ್ಯಾಮಲೆಯಿಂದ ಸುತ್ತುವರೆಯಲ್ಪಟ್ಟಿರುವುದಷ್ಟೇ ಅಲ್ಲದೇ ದೊಡ್ಡ ಗಾತ್ರದ ಬಂಡೆಗಳಿoದಲೂ ಸುತ್ತುವರಿದಿದೆ. ಕರಕುಶಲ ಕೇಂದ್ರದಲ್ಲಿರುವ ಅವಿಸ್ಮರಣೀಯ, ರೋಚಕ ವಸ್ತುಗಳೆಂದರೆ, ಗೋಡೆಯ ಚಿತ್ತಾರಗಳು, ಬಿದಿರು ಮತ್ತು ಕಾಕಂಬಿಯ ವಸ್ತುಗಳು ಹಾಗೂ ಸಾಂಪ್ರದಾಯಿಕ ಉಡುಗೆತೊಡುಗೆಗಳು.

ಪ್ರಾಣೀಶಾಸ್ತ್ರೀಯ ಉದ್ಯಾನ, ಇಂದಿರಾ ಗಾಂಧಿ ಉದ್ಯಾನ, ಮತ್ತು ಪೋಲೊ ಉದ್ಯಾನಗಳು ಪ್ರವಾಸಿಗರು ಮತ್ತು ಇಲ್ಲಿನ ಸ್ಥಳೀಯರು ವಿಶ್ರಾಂತಿಯನ್ನು ಹೊಂದುವುದಕ್ಕಾಗಿ ಮೀಸಲಾಗಿರುವ ಕೆಲವು ಉದ್ಯಾನಗಳು.  ಬುದ್ಧ ವಿಹಾರವು ಹೊಸದಾಗಿ ನಿರ್ಮಾಣಗೊಂಡ ಬೌದ್ಧ ದೇವಾಲಯವಾಗಿದ್ದು, ಇದು ದಲೈ ಲಾಮಾ ಅವರಿಂದ ಯಾತ್ರಾಸ್ಥಳವಾಗಿ ಪರಿವರ್ತಿತವಾಗಿದೆ.  

ಸ್ವರ್ಣಹಳದಿ ಬಣ್ಣದ, ದೇವಳದ ಮೇಲ್ಚಾವಣಿಯು ಟಿಬೆಟಿನ  ಶಿಲ್ಪಿ ಕಲಾ ಕೌಶಲ್ಯಕ್ಕೆ ಉತ್ತಮ ಉದಾಹರಣೆಯಾಗಿದೆ ಹಾಗೂ ಇದು ಇಟಾನಗರದ ಮತ್ತು ಅದರ ಸುತ್ತಮುತ್ತಲ ಪ್ರದೇಶದ ಪ್ರಾಕೃತಿಕ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ.  ಇಟಾನಗರದಿಂದ ರಾಜ್ಯದ ಮೂಲೆ ಮೂಲೆಗಳಿಗೆ ಕಡಿದಾದ, ಹಲವು ಬೆಟ್ಟ, ಗುಡ್ಡ, ಬಂಡೆಗಳಿಂದೊಡಗೂಡಿದ ಮಾರ್ಗಗಳಿದ್ದು, ಚಾರಣಪ್ರಿಯರ ಪಾಲಿಗೆ ಇಟಾನಗರವು ಸ್ವರ್ಗಸಮಾನವಾಗಿದೆ.  ಇಲ್ಲಿನ ಪ್ರವಾಸೋದ್ಯಮದ ಕುರಿತಾದ ಸಮಗ್ರ ಮಾಹಿತಿಯನ್ನು ಅರುಣಾಚಲಪ್ರದೇಶದಿಂದ ಮಾತ್ರವಲ್ಲದೇ ಪಶ್ಚಿಮ ಬಂಗಾಳ, ಅಸ್ಸಾಂ, ಮತ್ತು ಮೇಘಾಲಯಗಳಂತಹ ರಾಜ್ಯಗಳಿಂದಲೂ ಕೂಡ ಪಡೆಯಬಹುದು.

ಜನರು ಮತ್ತು ಸಂಸ್ಕೃತಿ

ನಗರದ ಜನಸಂಖ್ಯೆಯ ಬಹುಭಾಗವು ಬುಡಕಟ್ಟು ವರ್ಗದವರನ್ನು ಒಳಗೊಂಡಿದ್ದು, ಇವರಲ್ಲಿ ಸಿಂಹಪಾಲು ನಿಯ್ಶಿ ಜನಾಂಗದ್ದು.  ಇವರು ನಿಶಿಗಳು ಅಥವಾ ನಿಶಿಂಗ್ ಗಳೆಂದು ಕೂಡ ಕರೆಯಲ್ಪಡುತ್ತಾರೆ.  ಇಲ್ಲಿನ ಜನರು ಬೌದ್ಧಧರ್ಮ ಅನುಯಾಯಿಗಳು.  ಇಟಾನಗರದ ನಿವಾಸಿಗಳು ಜೀವನೋತ್ಸಾಹಿಗಳಾಗಿದ್ದು, ಇವರು ವರ್ಷವಿಡೀ ಹಬ್ಬದ ಗುಂಗಿನಲ್ಲಿರುತ್ತಾರೆ.  ನ್ಯೊಕುಮ್ ಎಂಬುದು ನಿಯ್ಶಿ ಜನಾಂಗದ ಪ್ರಮುಖ ಹಬ್ಬವಾಗಿದೆ.

ಮೊನ್ಪಾ ಗಳೆಂದು ಕರೆಯಲ್ಪಡುವ ಮತ್ತೊಂದು ಜನಾಂಗದವರಿಂದ ಲೋಸರ್ ಹಬ್ಬವು ಆಚರಿಸಲ್ಪಡುತ್ತದೆ.  ಈ ಹಬ್ಬವು ಹೊಸ ವರ್ಷದ ಆಚರಣೆಯಾಗಿದೆ.  ಈ ಸಂದರ್ಭದಲ್ಲಿ ಜನರು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ, ಧಾರ್ಮಿಕ ಧ್ವಜಗಳನ್ನು ಹಾರಿಸುತ್ತಾರೆ, ಮತ್ತು ಪವಿತ್ರ ಬೌದ್ಧ ಗ್ರಂಥಗಳನ್ನು ಪಠಿಸುತ್ತಾರೆ.  ಇದು 5 ದಿನಗಳವರೆಗೆ ಮುಂದುವರೆಯುತ್ತದೆ.  ಇಡು ಮಿಶಿಮಿಸ್ ಜನರಿಂದ ರೇಹ್ ಎಂಬ ಮತ್ತೊಂದು ಪಮುಖ ಹಬ್ಬವು ಆಚರಿಸಲ್ಪಡುತ್ತದೆ ಮತ್ತು ಈ ಹಬ್ಬದಂದು ಅರ್ಚಕ ವರ್ಗದವರ ನೃತ್ಯವು ವಿಶೇಷವಾಗಿದೆ.  ತಮ್ಲಾಡು ಹಬ್ಬವನ್ನು ಡಿಗಾರು ಮಿಶಿಮಿಸ್ ಆಚರಿಸುತ್ತಾರೆ.  ಇತರೆ ಹಬ್ಬಗಳೆಂದರೆ ಕಾನ್, ಸಾಂಗ್‍ಕೆನ್, ಮತ್ತು ಮೊಪಿನ್.  ರಾಜ್ಯದ ಅನೇಕ ಸುಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳು ಇಟಾನಗರದಲ್ಲಿವೆ.

ಇಟಾನಗರಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯ

ಇಟಾನಗರಕ್ಕೆ ನೀವು ವರ್ಷದ ಯಾವ ಕಾಲದಲ್ಲಾದರೂ ಸಹ ಭೇಟಿ ನೀಡಬಹುದು.  ರಾಜಧಾನಿಯ ಹವಾಮಾನವು ಯಾವಾಗಲೂ ಉಲ್ಲಾಸದಾಯಕವಾಗಿದ್ದು, ಅನುಭವಿಸಲು ಸುಯೋಗ್ಯ.  ವರ್ಷದ ಯಾವುದೇ ಅವಧಿಯಲ್ಲಿಯೂ ಸಹ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

ಇಟಾನಗರವನ್ನು ತಲುಪುವುದು ಹೇಗೆ ?

ರಾಜ್ಯದ ರಾಜಧಾನಿ ನಗರವಾಗಿರುವ ಇಟಾನಗರವನ್ನು ಹೆದ್ದಾರಿ ಮತ್ತು ವಾಯುಮಾರ್ಗದ ಮೂಲಕ ತಲುಪಬಹುದು.  ಅಸ್ಸಾಂ ನ ಹರ್ಮುತಿ ರೈಲ್ವೆ ನಿಲ್ದಾಣವು ಅತಿ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ.

ಇಟಾನಗರ ಪ್ರಸಿದ್ಧವಾಗಿದೆ

ಇಟಾನಗರ ಹವಾಮಾನ

ಇಟಾನಗರ
17oC / 62oF
 • Moderate or heavy rain shower
 • Wind: ESE 3 km/h

ಉತ್ತಮ ಸಮಯ ಇಟಾನಗರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಇಟಾನಗರ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 52A ಯು ಇಟಾನಗರ ಮತ್ತು ಅಸ್ಸಾಂ ಅನ್ನು ಮಾತ್ರವಲ್ಲದೇ, ದೇಶದ ಇತರ ಭಾಗಗಳನ್ನೂ ಸಹ ಸಂಪರ್ಕಿಸುತ್ತದೆ. ಗುವಾಹಾಟಿಯಿಂದ ನಹರ್ಲಾಗುನ್ ಗೆ ಇರುವ ಬಸ್ ಸೌಕರ್ಯವು ರಾಜಧಾನಿಯನ್ನು ಸುಲಭವಾಗಿ ತಲುಪಲು ಸಹಾಯಕವಾಗಿದೆ. ಅಸ್ಸಾಂನಲ್ಲಿರುವ ಬಂದೆರ್ದೇವಾ, ಉತ್ತರ ಲಖೀಂಪುರ್, ಮತ್ತು ತೇಜ್ಪುರ್ ಗಳು ಇಟಾನಗರವನ್ನು ಬಸ್ ಮೂಲಕ ಸಂಪರ್ಕಿಸುವ ಇತರ ಕೆಲವು ಸ್ಥಳಗಳಾಗಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಾಜ್ಯಾದ್ಯಂತ ರೈಲು ಮಾರ್ಗಗಳು ವಿರಳವಾಗಿರುವುದರಿಂದ ಇಟಾನಗರಕ್ಕೆ ರೈಲಿನ ಮೂಲಕ ತಲುಪುವುದು ಸಾಧ್ಯವಿಲ್ಲ. ಅತೀ ಸಮೀಪದ ರೈಲ್ವೆ ನಿಲ್ದಾಣವು ಅಸ್ಸಾಂನ ಹರ್ಮುತಿ ಯಲ್ಲಿದ್ದು, ಇದು ಇಟಾನಗರದಿoದ 32 ಕಿ. ಮೀ. ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗುವಾಹಾಟಿ ಮತ್ತು ಅಸ್ಸಾಂನಿಂದ ಹೆಲಿಕ್ಯಾಪ್ಟರ್ ಸೇವೆಯು ನಿಯಮಿತವಾಗಿ ಲಭ್ಯವಿದೆ. ಈ ಸೇವೆಗಳು ಪವನ ಹಂಸ್ ಹೆಲಿಕಾಪ್ಟರ್ಸ್ ಗಳಿಂದ ವ್ಯವಸ್ಥೆಗೊಳಿಸಲ್ಪಟ್ಟು ನಿರ್ವಹಿಸಲ್ಪಡುತ್ತದೆ. ಹೆಲಿಕ್ಯಾಪ್ಟರ್ ಸೇವೆಯು ಗುವಾಹಾಟಿ ಯಿಂದ ನಹರ್ಲ್ಗುನ್ ಗಳ ನಡುವೆ, ಇಟಾನಗರದಿಂದ 10 ಕಿ.ಮೀ. ದೂರದಲ್ಲಿ ಲಭ್ಯವಿದೆ. ಪಪುಂಪರೆ ಜಿಲ್ಲೆಯ ಹೊಲೊಂಗಿ ಯಲ್ಲಿ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದು ಇಟಾನಗರಕ್ಕೆ ತೆರಳುವ ಪ್ರವಾಸಿಗರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಅಸ್ಸಾಂನ ತೇಜ್ಪುರ್ ಮತ್ತು ಲಿಲಾಬರಿ ವಿಮಾನ ನಿಲ್ದಾಣಗಳು ಅತೀ ಸಮೀಪದ ವಿಮಾನ ನಿಲ್ದಾಣಗಳಾಗಿವೆ. ಲಿಲಾಬರಿ ಯು ಇಟಾನಗರದಿಂದ 71 ಕಿ. ಮೀ. ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Feb,Sat
Return On
24 Feb,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Feb,Sat
Check Out
24 Feb,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Feb,Sat
Return On
24 Feb,Sun
 • Today
  Itanagar
  17 OC
  62 OF
  UV Index: 8
  Moderate or heavy rain shower
 • Tomorrow
  Itanagar
  13 OC
  55 OF
  UV Index: 9
  Moderate or heavy rain shower
 • Day After
  Itanagar
  12 OC
  54 OF
  UV Index: 9
  Patchy rain possible