Search
  • Follow NativePlanet
Share
ಮುಖಪುಟ » ಸ್ಥಳಗಳು» ಸಿಬ್ಸಾಗರ್

ಸಿಬ್ಸಾಗರ್ : ಅಹೋಮರ ಶತಮಾನಗಳ ರಾಜಧಾನಿ

19

ಶಿವಸಾಗರ್ ಎಂದೂ ಕರೆಯಲ್ಪಡುವ ಸಿಬ್ಸಾಗರ್ ನ ಅನುವಾದ ಶಿವ ದೇವರ ಸಮುದ್ರ ಎಂದಾಗುತ್ತದೆ. ಸಿಬ್ಸಾಗರ್ ರಾಜ್ಯ ರಾಜಧಾನಿ ಗುವಾಹಟಿಯಿಂದ 360 ಕಿ.ಮೀ ದೂರದಲ್ಲಿದ್ದು ಸಿಬ್ಸಾಗರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಇದು ಅಹೋಮರ ರಾಜಧಾನಿಯಾದ ಕಾರಣ ಐತಿಹಾಸಿಕ ಮಹತ್ವವನ್ನೂ ಪಡೆದಿದೆ. ಇಲ್ಲಿ ಸಿಬ್ಸಾಗರ್ ಕೊಳ ಎಂದು ಕರೆಯಲ್ಪಡುವ 129 ಎಕರೆಗಳಿಗೆ ಹರಡಿರುವ ಒಂದು ದೊಡ್ಡ ಕೊಳ ಇದೆ.

ಇಲ್ಲಿ ಅಹೋಮರ ಕಾಲದ ಹಲವು ಸ್ಮಾರಕಗಳಿದ್ದು ಇದನ್ನು ಈ ನಗರದ ಪ್ರಸಿದ್ಧಿಗೆ ಮೂಲ ಕಾರಣ ಎಂದು ನಂಬಲಾಗಿದೆ. ಇಂದು ಎಣ್ಣೆ ಹಾಗೂ ಚಹಾದ ಉದ್ಯಾನಗಳು ಇರುವ ಐತಿಹಾಸಿಕ ಮಹತ್ವದ ನಗರ ಎಂಬಲ್ಲಿಂದ ಈ ನಗರವು ಬಹು ದೂರ ಸಾಗಿದೆ. ಇಲ್ಲಿ ಹಲವು ಪ್ರವಾಸಿ ತಾಣಗಳೂ ಇವೆ.

ಬರ್ಮಾದವರಿಂದ 1817 ರಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಆಗುವ ತನಕ ಸುಮಾರು 600 ವರ್ಷಗಳ ಕಾಲ ಇಲ್ಲಿ ಆಹೋಮರು ಆಳ್ವಿಕೆ ನಡೆಸಿದ್ದರು. ನಂತರ ಈ ರಾಜ್ಯವನ್ನು ಬ್ರಿಟೀಷರು ವಶಪಡಿಸಿಕೊಂಡರು. ಬ್ರಿಟಿಷರು ಸಿಬ್ಸಾಗರವನ್ನು ತಮ್ಮ ಆಡಳಿತದ ಪ್ರಯೋಜನಕ್ಕಾಗಿ ಮುರು ಭಾಗಗಳಲ್ಲಿ ವಿಂಗಡಿಸಿದ್ದರು.

ಸಿಬ್ಸಾಗರ ಆಸುಪಾಸಿನ ಪ್ರವಾಸಿ ಆಕರ್ಷಣೆಗಳು

ಹಲವು ವರ್ಷಗಳ ಕಾಲ ಅಹೋಮರ ರಾಜಧಾನಿ ಆಗಿದ್ದ ಕಾರಣ ಇಂದಿಗೂ ಇಲ್ಲಿನ ಹಲವು ವಿಷಯಗಳು ಅಹೋಮರನ್ನು ನೆನಪಿಸುತ್ತವೆ. ಸಿಬ್ಸಾಗರ ಕೊಳ ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಇದು ಸುಮಾರು 200 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಇದರ ಎತ್ತರ ನಗರದ ಎತ್ತರಕ್ಕಿಂತ ಹೆಚ್ಚಾಗಿದೆ. ಇಲ್ಲಿ ಸಮೀಪದಲ್ಲಿ ಶಿವಡೊಲ್,ವಿಷ್ಣುಡೊಲ್ ಹಾಗೂ ದೇವಿಡೊಲ್ ಎಂಬ ಮೂರು ದೇವಾಲಯಗಳಿವೆ. ಈ ಎಲ್ಲಾ ದೇವಾಲಯಗಳನ್ನು ರಾಣಿ ಮಾದಂಬಿಕಾ 1734 ರಲ್ಲಿ ಕಟ್ಟಿಸಿದ್ದಾಳೆ.

ಇವಷ್ಟೇ ಅಲ್ಲದೇ ಸಿಬ್ಸಾಗರ್ ಪ್ರವಾಸವನ್ನು ಮತ್ತಷ್ಟು ಆಕರ್ಷಕವನ್ನಾಗಿಸುವ ಇನ್ನೂ ಹಲವು ಸ್ಥಳಗಳು ಇಲ್ಲಿವೆ. ತಲಾತಲ್ ಘರ್, ಕಾರೆಂಗ್ ಘರ್ ಮತ್ತು ಗುಡ್ ಗಾಂವ್ ಘರ್ ಇಲ್ಲಿನ ಇನ್ನಿತರ ಸ್ಥಳಗಳಾಗಿವೆ. ಏಳು ಮಹಡಿ ಎತ್ತರವಿರುವ ಹಾಗೂ ಎರಡು ಸುರಂಗ ಮಾರ್ಗಗಳಿರುವ ಅರಮನೆಯ ಕೆಳಗಿನ ಮಹಡಿ ತಲಾತಲ್ ಘರ್ ಆಗಿದೆ. ಇದರ ಮೇಲಿನ ಮಹಡಿಗಳನ್ನು ಕಾರೆಂಗ್ ಘರ್ ಎನ್ನಲಾಗುತ್ತದೆ. ಸಿಬ್ಸಾಗರ್ ಪ್ರವಾಸದಲ್ಲಿ ಪ್ರತಿಯೊಬ್ಬರೂ ಇಲ್ಲಿನ ರಂಗ್ ಘರ್ ಎಂದು ಕರೆಯಲಾಗುವ ವರ್ತುಲ ರಂಗಸ್ಥಳವನ್ನು ನೋಡಲೇ ಬೇಕು ಈ ರಂಗಸ್ಥಳವು ತಲೆಕೆಳಗಾದ ಹಡಗಿನಂತೆ ಕಾಣುತ್ತದೆ.

ಸಿಬ್ಸಾಗರ್ ತಲುಪುವುದು ಹೇಗೆ

ಸಿಬ್ಸಾಗರಕ್ಕೆ ತಲುಪುವ ರಸ್ತೆ ದಾರಿಗಳು ಬಹಳ ಉತ್ತಮವಾದ ಸ್ಥಿತಿಯಲ್ಲಿವೆ. 16 ಕಿ.ಮೀ ದೂರದಲ್ಲಿರುವ ಸಿಮಲ್ ಗುರಿಯಲ್ಲಿ ರೈಲ್ವೆ ನಿಲ್ದಾಣವಿದ್ದು ಸಿಬ್ಸಾಗರಕ್ಕೆ ಅತಿ ಸಮೀಪದಲ್ಲಿದೆ. ಸಿಬ್ಸಾಗರ ನರಗದಲ್ಲಿ ಯಾವುದೇ ವಿಮಾನ ನಿಲ್ದಾಣಗಳಿಲ್ಲದೇ ಹೋದರೂ ಸಮೀಪದ ಜೊರ್ಹಟ್ ನಲ್ಲಿ ವಿಮಾನ ನಿಲ್ದಾಣವಿದೆ ಈ ನಗರ ಸಿಬ್ಸಾಗರ್ ದಿಂದ ಕೇವಲ 55 ಕಿ.ಮೀ ದೂರದಲ್ಲಿದೆ.

ಸಿಬ್ಸಾಗರ್ ವಾಯುಗುಣ

ಸಿಬ್ಸಾಗರ್ ಸಮಶೀತೋಷ್ಣ ವಾಯುಗುಣವನ್ನು ಹೊಂದಿದೆ. ಧಾರಾಕಾರ ಮಳೆ ಮತ್ತು ಸ್ವಲ್ಪ ತಿಂಗಳುಗಳ ಕಾಲ ಆದ್ರ ವಾತಾವರಣ ಇಲ್ಲಿನ ಸಾಮಾನ್ಯ ಲಕ್ಷಣಗಳಾಗಿವೆ. ಇಲ್ಲಿನ ಅತೀ ಹೆಚ್ಚು ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದ್ದು ಕನಿಷ್ಟ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಸಿಬ್ಸಾಗರ್ ಪ್ರಸಿದ್ಧವಾಗಿದೆ

ಸಿಬ್ಸಾಗರ್ ಹವಾಮಾನ

ಉತ್ತಮ ಸಮಯ ಸಿಬ್ಸಾಗರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಿಬ್ಸಾಗರ್

  • ರಸ್ತೆಯ ಮೂಲಕ
    ರಾ.ಹೆ. 37 ಸಿಬ್ಸಾಗರ್ ಮೂಲಕ ಹಾದು ಹೋಗುತ್ತದೆ ಹಾಗೂ ಮುಂದೆ ದಿಬ್ರು ಘರ್ ಅನ್ನು ತಲುಪುತ್ತದೆ. ಈ ರಾಷ್ಟ್ರೀಯ ಹೆದ್ದಾರಿ ಚಹಾ ಉದ್ಯಮಿಗಳಿಗೆ ಮತ್ತು ತೈಲ ರಫ್ತುದಾರರಿಗೆ ಬಹಳ ಪ್ರಮುಖವಾದ ಮಾರ್ಗವಾಗಿದೆ. ಈ ನಗರವು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಉತ್ತಮ ಸಂಪರ್ಕ ಸಾಧನವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಮಲ್ ಗುರಿಯ ರೈಲ್ವೆ ನಿಲ್ದಾಣ ಸಿಬ್ಸಾಗರ್ ಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ಕೇವಲ 16 ಕಿ.ಮೀ ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ಗುವಾಹಟಿ-ದಿಬ್ರುಘರ್ ರೈಲ್ವೆ ಮಾರ್ಗದ ನಡುವೆ ಬರುತ್ತದೆ, ಹೀಗಾಗಿ ಹಲವು ರೈಲುಗಳು ಇಲ್ಲಿಂದ ಹಾದು ಹೋಗುತ್ತವೆ ಮತ್ತು ನಿಲ್ದಾಣವನ್ನು ಹೊಂದಿವೆ. ಈ ರೈಲ್ವೆ ನಿಲ್ದಾಣದಿಂದ ಸಿಬ್ಸಾಗರ್ ಗೆ ಟಾಕ್ಸಿ ಮತ್ತು ಬಸ್ಸಿನ ಮೂಲಕ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಗರದಲ್ಲಿ ಯಾವುದೇ ವಿಮಾನ ನಿಲ್ದಾಣಗಳಿಲ್ಲದೇ ಹೋದರೂ ಕೇವಲ 55 ಕಿ.ಮೀ ದೂರದಲ್ಲಿರುವ ಜೋರ್ಹಟ್ ನಲ್ಲಿ ವಿಮಾನ ನಿಲ್ದಾಣವಿದೆ. ಈ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ, ಗುವಾಹಟಿ ಮತ್ತು ಸಿಲ್ಚಾರ್ ನಗರಗಳಿಗೆ ಉತ್ತಮ ಸಂಪರ್ಕ ಇದೆ. ಇವುಗಳೆಲ್ಲವೂ ನಿಲುಗಡೆ ನಿಲ್ದಾಣಗಳಾಗಿವೆ. ಜೋರ್ಹಟ್ ವಿಮಾನ ನಿಲ್ದಾಣದಿಂದ ಟಾಕ್ಸಿಯ ಮೂಲಕ ಸುಲಭವಾಗಿ ಸಿಬ್ಸಾಗರ್ ಗೆ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat