Search
  • Follow NativePlanet
Share
ಮುಖಪುಟ » ಸ್ಥಳಗಳು» ದಿಗ್ಬೋಯ್

ದಿಗ್ಬೋಯ್ : ಅಸ್ಸಾಂನ ತೈಲ ನಗರ

9

ದಿಗ್ಬೋಯ್ ಪ್ರಪಂಚದ ಪುರಾತನವಾದ ತೈಲ ಸಂಸ್ಕರಣ ಘಟಕವನ್ನು ಹೊಂದಿದ್ದು ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿಯೇ ದಿಗ್ಬೋಯ್ ಪ್ರಸಿದ್ಧಿಯನ್ನು ಪಡೆದಿದೆ. ಈ ಘಟಕವು 1899ರಿಂದ ಕಾರ್ಯನಿರ್ವಹಿಸುತ್ತಿದೆ. ದಿಗ್ಬೋಯ್ ಎಂಬ ಹೆಸರು ಇಂಗ್ಲೀಷಿನ ಪದ ‘ಡಿಗ್-ಬಾಯ್-ಡಿಗ್’ ಎಂಬುದರಿಂದ ಬಂದಿದೆ. ಇಂಗ್ಲೀಷರು ಈ ಪ್ರದೇಶದಲ್ಲಿ ಎಣ್ಣೆ ನಿಕ್ಷೇಪಗಳನ್ನು ಕಂಡುಹಿಡಿದ ಹೊಸತರಲ್ಲಿ ಯುವಕರನ್ನು ಎಣ್ಣೆ ತೆಗೆಯಲು ಬಳಸುತ್ತಿದ್ದರು ಆ ಸಂದರ್ಭದಲ್ಲಿ ಈ ಮಾತನ್ನು ಬಳಸುತ್ತಿದ್ದರು. ದಿಗ್ಬೋಯ್ ಅಸ್ಸಾಂನ ಎಣ್ಣೆ ನಗರ ಎಂದೇ ಪ್ರಸಿದ್ಧಿ ಹೊಂದಿದೆ.

ದಿಗ್ಬೋಯ್ ಪ್ರವಾಸೋದ್ಯಮ- ತೈಲ ಸಂಸ್ಕರಣ ಘಟಕಗಳು ಮತ್ತು ಇಂಗ್ಲೀಷರ ಪಳೆಯುಳಿಕೆಗಳು

ದಿಗ್ಬೋಯ್ ಅಸ್ಸಾಂನ ಮೇಲ್ಭಾಗದ ಜಿಲ್ಲೆಯಾದ ತಿನ್ಸುಕಿಯ ಜಿಲ್ಲೆಯಲ್ಲಿದ್ದು ತನ್ನಲ್ಲಿನ ಪುರಾತನ ತೈಲ ಸಂಸ್ಕರಣ ಘಟಕದಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. 1901ರಿಂದ ಈ ಘಟಕಗಳು ಕಾರ್ಯನಿರ್ವಹಿಸುತ್ತಿರುವುದಕ್ಕೆ ಕಾರಣ ಈ ಪ್ರಾಂತ್ಯವು ಬ್ರಿಟೀಷರ ಪ್ರಾಬಲ್ಯದಲ್ಲಿತ್ತು. ಸ್ವಾತಂತ್ರ್ಯಾನಂತರವೂ ಬ್ರಿಟೀಷರ ಪ್ರಭಾವವನ್ನು ಈ ಸಣ್ಣ ಪಟ್ಟಣದಲ್ಲಿ ಕಾಣಬಹುದು.

ದಿಗ್ಬೋಯ್ನ ಪ್ರವಾಸಿ ಸ್ಥಳಗಳು

ತೈಲ ಸಂಸ್ಕರಣ ಘಟಕ ಇಲ್ಲಿನ ಮುಖ್ಯ ಆಕರ್ಷಣೆ. ಇದಲ್ಲದೆ ಇಂಗ್ಲೀಷರು ರೂಪಿಸಿದ್ದ 18 ರಂಧ್ರಗಳ ಗಾಲ್ಫ್ ಕೋರ್ಸ್ ಮೈದಾನ ಇಂದಿಗೂ ಅಸ್ಸಾಂನ ಅತ್ಯುತ್ತಮ ಗಾಲ್ಫ್ ಮೈದಾನ ಎಂದು ಹೇಳಲಾಗುತ್ತದೆ. ಇವುಗಳಲ್ಲದೆ ಸಾಯಿಖೋವ ರಾಷ್ಟ್ರೀಯ ಉದ್ಯಾನವನ, ರಿಡ್ಜ್ ಪಾಯಿಂಟ್ ಮತ್ತು ಯುದ್ಧ ಸಮಾಧಿ ಇಲ್ಲಿನ ಪ್ರವಾಸಿ ಆಕರ್ಷಣೆಗಳು.

ಹೋಗುವುದು ಹೇಗೆ?

ದಿಬ್ರೂಗರ್ ದಿಗ್ಬೋಯ್ಗೆ ಸಮೀಪದ ವಿಮಾನ ನಿಲ್ದಾಣ. ತಿನ್ಸುಕಿಯ ಇಲ್ಲಿಗೆ ಹತ್ತಿರದ ರೈಲು ನಿಲ್ದಾಣ. ರಾಷ್ಟ್ರೀಯ ಹೆದ್ದಾರಿ 38 ಈ ನಗರವನ್ನು ದೇಶದ ಉಳಿದ ಭಾಗಗಳೊಂದಿಗೆ ಬೆಸೆಯುತ್ತದೆ.

ಹವಾಮಾನ

ದಿಗ್ಬೋಯ್ನಲ್ಲಿ ಉಪೋಷ್ಣವಲಯದ ಹವಾಮಾನವಿರುತ್ತದೆ. ಬೇಸಿಗೆಯಲ್ಲಿ ಧಗೆ ಮತ್ತು ತಾಪಮಾನ ಹೆಚ್ಚಿದ್ದರೆ, ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ. ಚಳಿಗಾಲಗಳು ತಂಪಾಗಿದ್ದು ಮಂಜು ಮುಸುಕಿದ ವಾತಾವರಣವಿರುತ್ತದೆ.

ದಿಗ್ಬೋಯ್ ಪ್ರಸಿದ್ಧವಾಗಿದೆ

ದಿಗ್ಬೋಯ್ ಹವಾಮಾನ

ಉತ್ತಮ ಸಮಯ ದಿಗ್ಬೋಯ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದಿಗ್ಬೋಯ್

  • ರಸ್ತೆಯ ಮೂಲಕ
    ದಿಗ್ಬೋಯ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 38 ಅಸ್ಸಾಂನ ಎಲ್ಲ ಭಾಗಗಳೊಂದಿಗೆ ಈ ಸ್ಥಳವನ್ನು ಬೆಸೆಯುತ್ತದೆ. ಇಲ್ಲಿನ ರಸ್ತೆಗಳು ಉತ್ತಮವಾಗಿವೆ. ಎಸಿ ಮತ್ತು ಎಸಿ ಇಲ್ಲದ ಬಸ್ಸುಗಳು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಲಭ್ಯವಿದೆ. ಟೂರಿಸ್ಟ್ ಕಾರ್ ಸೌಲಭ್ಯವನ್ನು ಕೂಡ ಪ್ರವಾಸಿಗರು ಬಳಸಿಕೊಳ್ಳಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಿಗ್ಬೋಯ್ಗೆ ಸಮೀಪದ ರೈಲು ನಿಲ್ದಾಣ 40 ಕಿಮೀ ದೂರದಲ್ಲಿರುವ ತಿನ್ಸುಕಿಯ ರೈಲು ನಿಲ್ದಾಣ. ಇಲ್ಲಿಂದ ಗುವಹಟಿಗೆ ನಿಯಮಿತ ರೈಲು ಸಂಚಾರವಿದೆ. ಬ್ರಹ್ಮಪುತ್ರ ಮೇಲ್ ಮತ್ತು ರಾಜಧಾನಿ ಎಕ್ಸಪ್ರೆಸ್ ದಿಬ್ರೂಗರ್ಗೆ ಹೋಗುವ ಮಾರ್ಗದಲ್ಲಿ ತಿನ್ಸುಕಿಯಾದಲ್ಲಿ ನಿಲ್ಲುತ್ತದೆ. ಇಲ್ಲಿಂದ ಟ್ಯಾಕ್ಸಿ ಮೂಲಕ ದಿಗ್ಬೋಯ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಿಬ್ರೂಗರ್ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು 80 ಕಿಮೀ ದೂರದಲ್ಲಿದೆ. ಪ್ರವಾಸಿಗರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ದಿಗ್ಬೋಯ್ ತಲುಪಬಹುದು. ಈ ವಿಮಾನ ನಿಲ್ದಾಣದ ಹೆಸರು ಮೋಹನ್ಬರಿ ವಿಮಾನ ನಿಲ್ದಾಣ ಇದು ದೇಶದ ಉಳಿದ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಗುವಹಟಿ, ಕೊಲ್ಕತ್ತಾ, ಮುಂಬೈ ಮತ್ತು ಬೆಂಗಳೂರಿಗೆ ಇಲ್ಲಿಂದ ನೇರ ವಿಮಾನ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City