Search
  • Follow NativePlanet
Share
ಮುಖಪುಟ » ಸ್ಥಳಗಳು» ಜೋರ್ಹತ್

ಜೋರ್ಹತ್ : ಚಹಾ ತೋಟಗಳಿಂದ ಆವೃತ ನಗರ

35

ಅಸ್ಸಾಂನ ಪ್ರಮುಖ ನಗರಗಳಲ್ಲಿ ಒಂದಾಗಿರುವ ಜೋರ್ಹತ್ ರಾಜ್ಯದ ಉತ್ತರ ಭಾಗದಲ್ಲಿರುವ ಕಾರಣ ಅಪ್ಪರ್ ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ರಹದಾರಿ. `ಜೋರ್' ಅಂದರೆ ಎರಡು ಮತ್ತು `ಹಾತ್' ಅಂದರೆ ಮಾರುಕಟ್ಟೆ ಎನ್ನುವ ಅರ್ಥದೊಂದಿಗೆ ಜೋರ್ಹತ್ ಹೆಸರು ಬಂದಿದೆ. ಭಾಗ್ಡೊಯಿ ನದಿಯ ಇಕ್ಕೆಲಗಳಲ್ಲಿರುವ ವಾರಾಂತ್ಯದ ಮಾರುಕಟ್ಟೆಗಳಾದ ಚೌಕಿಹಾತ್ ಮತ್ತು ಮಚರ್ಹಾತ್ ಮಾರುಕಟ್ಟೆಗಳು 18ನೇ ಶತಮಾನದಲ್ಲೇ ಜನಪ್ರಿಯವಾಗಿದ್ದವು. ಅಹೋಮ ಸಾಮ್ರಾಜ್ಯದ ಕೊನೆಯ ರಾಜಧಾನಿಯಾಗಿದ್ದ ಜೋರ್ಹತ್ ನಗರದಲ್ಲಿ ಹಲವಾರು ಐತಿಹಾಸಿಕ  ಸ್ಮಾರಕಗಳು ಅಂದಿನ ರಾಜಾಡಳಿತದ ದಿನಗಳನ್ನು ನೆನಪಿಸುತ್ತದೆ.

ಜೋರ್ಹತ್ ಪ್ರವಾಸೋದ್ಯಮ- ರೋಲಿಂಗ್ ಆಫ್ ಟೀ ಎಸ್ಟೇಟ್  

ಟೀ ಗಾರ್ಡನ್ ಗಳಿಗೆ ಜನಪ್ರಿಯವಾಗಿರುವ ಜೋರ್ಹತ್ ಮತ್ತು ಅದರ ಸುತ್ತಮುತ್ತಲು ಸುಮಾರು 135 ಟೀ ಗಾರ್ಡನ್ ಗಳಿವೆ. ಟೀ ಗಾರ್ಡನ್ ಗಳಿಂದ ಇಲ್ಲಿ ಗರಿಷ್ಠ ಮಟ್ಟದ ಚಹಾ ಉತ್ಪನ್ನಗಳು ತಯಾರಾಗುವುದು ಮಾತ್ರವಲ್ಲದೆ ಟೀ ಗಾರ್ಡನ್ ಗಳು ಜೋರ್ಹತ್ ನ ಇತಿಹಾಸದ ಒಂದು ಅಂಗ. ಚಿನ್ನಮೊರಾ ಟೀ ಎಸ್ಟೇಟ್ ನಂತಹ ಕೆಲವು ಟೀ ಎಸ್ಟೇಟ್ ಗಳಿಗೆ ಭೇಟಿ ನೀಡದೆ ಜೋರ್ಹತ್ ನ ಪ್ರವಾಸೋದ್ಯಮ ಅಪೂರ್ಣ. ತೊಕ್ಲೈ ಟೀ ರಿಸರ್ಚ್ ಸೆಂಟರ್ ವಿಶ್ವದ ಅತ್ಯಂತ ಪ್ರಾಚೀನ ಟೀ ರಿಸರ್ಚ್ ಸೆಂಟರ್ ಆಗಿದ್ದು, ಜೋರ್ಹತ್ ಗೆ ನಿಜವಾದ ಸೊಬಗಾಗಿದೆ.

ಜೋರ್ಹತ್ ನಲ್ಲಿರುವ ಆಸಕ್ತಿದಾಯಕ ಪ್ರವಾಸಿ ತಾಣಗಳು

ಕೆಲವೊಂದು ಪ್ರಮುಖ ಪ್ರವಾಸಿ ತಾಣಗಳಾಗಿರುವ ಜೋರ್ಹತ್ ನಲ್ಲಿರುವ ಕೆಲವೊಂದು ಮೈದಾಮ(ಸ್ಮಶಾನ)ಗಳನ್ನು ಉಲ್ಲೇಖಿಸದಿದ್ದರೆ ಜೋರ್ಹತ್ ಪ್ರವಾಸೋದ್ಯಮ ಅಪೂರ್ಣವಾದಂತೆ. ರಾಜ ಮೈದಾಮ್ ಮತ್ತು ಲಾಚಿತ್ ಬೊರ್ಪಹುಕಾನ್ ಮೈದಾಮ್ ಜೋರ್ಹತ್ ನ ಸಾಂಸ್ಕೃತಿಕ ಸೊಬಗನ್ನು ಪುನರುಚ್ಛಿಸುತ್ತದೆ. ಪುಖುರಿಸ್ ಅಥವಾ ಟ್ಯಾಂಕ್ ಗಳು ನಗರದ ಭವ್ಯತೆಗೆ ಮೆರಗು ನೀಡಿವೆ. ಕುನ್ವರಿ ಪುಖುರಿ, ಬದುಲಿ ಪುಖುರಿ ಮುಂತಾದ ಹಲವಾರು ಪುಖುರಿಗಳು ನಗರದಲ್ಲಿದ್ದು, ಇವುಗಳಿಗೆ ಭೇಟಿ ನೀಡಬಹುದು.

ಜೋರ್ಹತ್-ಅಸ್ಸಾಂನ ಸಾಂಸ್ಕೃತಿಕ ರಾಜಧಾನಿ

ಜೋರ್ಹತ್ ತನ್ನ ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿ. ಸಣ್ಣ ನಗರವಾಗಿರುವ ಜೋರ್ಹತ್ ಇಂದಿಗೂ ತನ್ನ ಕಲೆ ಹಾಗೂ ಸಂಗೀತದಲ್ಲಿ ಅಹೋಮ್ ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಅಹೋಮ್ ರಾಜಾಡಳಿತದ ಶ್ರೀಮಂತಿಕೆ ಉಳಿಸಿಕೊಳ್ಳುವುದರೊಂದಿಗೆ ಆಧುನಿಕತೆಯನ್ನು ಕೂಡ ಅದರೊಂದಿಗೆ ತುಂಬಾ ಸೊಗಸಾಗಿ ಬೆರೆಸಿಕೊಂಡಿದೆ. ಇದು ಅಹೋಮ್ ನ ಕೊನೆಯ ರಾಜಧಾನಿಯಲ್ಲದೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಈ ನಗರ ಕೇಂದ್ರವಾಗಿತ್ತು. ಹಲವಾರು ವರ್ಷಗಳಿಂದ ಜೋರ್ಹತ್ ನಿಂದ ಬಂದಿರುವಂತಹ ಸಂಗೀತಕಾರರು, ಸಾಹಿತಿಗಳು ಮತ್ತು ಇತಿಹಾಸಗಾರರು ಇಲ್ಲಿನ ಸಂಸ್ಕೃತಿಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದ್ದಾರೆ. ಜ್ಞಾನಪೀಠ(ಭಾರತದ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ) ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಮೊದಲ ಅಸ್ಸಾಮಿ ಸಾಹಿತಿ ಬಿರೇಂದ್ರ ಕುಮಾರ್ ಭಟ್ಟಾಚಾರ್ಯ ಅವರು ಜೋರ್ಹತ್ ನವರು. ಶಿಕ್ಷಣದಲ್ಲಿ ತನ್ನದೇ ಆದ ಹೆಸರು ಮಾಡಿಕೊಂಡಿರುವ ಕೃಷ್ಣಕಾಂತ್ ಹಂಡಿಕ್ ಕೂಡ ಇಲ್ಲಿಯವರೇ.

ಜೋರ್ಹತ್ ಗೆ ತಲುಪುವುದು ಹೇಗೆ

ಜೋರ್ಹತ್ ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಅಸ್ಸಾಂ ಹಾಗೂ ದೇಶದ ವಿವಿಧ ಭಾಗಗಳಿಗೆ ಉತ್ತಮ ಸಂಪರ್ಕವಿದ್ದು, ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವಿದೆ.

ಜೋರ್ಹತ್ ಹವಾಮಾನ

ಅರೆ ಮಾನ್ಸೂನ್ ಶೈಲಿಯ ಹವಾಮಾನ ಜೋರ್ಹತ್ ನಲ್ಲಿದ್ದು, ಬೇಸಿಗೆ ಕಾಲದಲ್ಲಿ ಅತಿಯಾದ ಉಷ್ಣತೆ ಮತ್ತು ಮಳೆಗಾಲದಲ್ಲಿ ಸಾಕಷ್ಟು ಮಳೆಯಾಗುತ್ತದೆ.

ಜೋರ್ಹತ್ ಪ್ರಸಿದ್ಧವಾಗಿದೆ

ಜೋರ್ಹತ್ ಹವಾಮಾನ

ಉತ್ತಮ ಸಮಯ ಜೋರ್ಹತ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜೋರ್ಹತ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 37 ಜೋರ್ಹತ್ ಗೆ ಅಸ್ಸಾಂನ ಇತರ ಭಾಗಗಳ ಸಂಪರ್ಕ ಕಲ್ಪಿಸುತ್ತದೆ. ಜೋರ್ಹತ್ ನಲ್ಲಿ ರಸ್ತೆ ಸಾರಿಗೆ ಉತ್ತಮವಾಗಿದೆ ಮತ್ತು ದಿರ್ಬುಗರ್, ಗುವಾಹಟಿ ಮತ್ತು ಅಸ್ಸಾಂನ ಇತರ ನಗರಗಳಿಗೆ ಹಲವಾರು ಬಸ್ ಸೇವೆಗಳಿವೆ. ರಸ್ತೆ ಸಂಪರ್ಕವು ಸುಧಾರಣೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗುತ್ತಿದೆ. ಈ ಮಾರ್ಗದಲ್ಲಿ ರಾತ್ರಿ ವೇಳೆಯೂ ಬಸ್ ಗಳ ವ್ಯವಸ್ಥೆಯಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೋರ್ಹತ್ ನಲ್ಲಿ ಎರಡು ರೈಲು ನಿಲ್ದಾಣಗಳಿವೆ. ನಗರದಿಂದ 17 ಕಿ.ಮೀ. ದೂರದಲ್ಲಿರುವ ಮರಿಯಾನಿ ಜಂಕ್ಷನ್ ನಗರದ ಜೀವನಾಡಿಯಾಗಿದೆ. ದಿರ್ಬುಗರ್ ನ ಹೆಚ್ಚಿನ ರೈಲುಗಳು ಮರಿಯಾನಿ ಜಂಕ್ಷನ್ ಮೂಲಕ ಹಾದುಹೋಗುತ್ತದೆ. ನಗರದ ಮಧ್ಯ ಭಾಗದಲ್ಲಿರುವ ಮತ್ತೊಂದು ರೈಲು ನಿಲ್ದಾಣಕ್ಕೆ ಗುವಾಹಟಿಯಿಂದ ಪ್ರತೀ ದಿನ ಎರಡು ರೈಲುಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರೊರ್ವೈಹ ವಿಮಾನ ನಿಲ್ದಾಣವೆಂದು ಕರೆಯಲ್ಪಡುವ ಜೋರ್ಹತ್ ವಿಮಾನ ನಿಲ್ದಾಣ ಅಸ್ಸಾಂನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಗುವಾಹಟಿ ಮತ್ತು ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸದ್ಯಕ್ಕೆ ಗುವಾಹಟಿಗೆ ಕೇವಲ ಜೆಟ್ ಏರ್ ವೇಸ್ ಮಾತ್ರ ಸೇವೆ ನೀಡುತ್ತದೆ. ಜೆಟ್ ಏರ್ ವೇಸ್ ನ ಬದಲಿ ಜೆಟ್ ಕನೆಕ್ಟ್ ಜೋರ್ಹತ್ ಗೆ ಆಗಮಿಸಲು ಮತ್ತು ನಿರ್ಗಮಿಸಲು ವಿಮಾನ ಸೇವೆ ನೀಡುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat