Search
 • Follow NativePlanet
Share
ಮುಖಪುಟ » ಸ್ಥಳಗಳು» ಪಾಸಿಘಾಟ್

ಪಾಸಿಘಾಟ್ : ಅರುಣಾಚಲ ಪ್ರದೇಶದ ಹಳೆಯ ನಗರ

7

ಪಾಸಿಘಾಟ್ ನಗರ ಅರುಣಾಚಲ ಪ್ರದೇಶದ ಗೇಟ್ ವೇ ಎಂದೂ ಕರೆಯಲ್ಪಡುತ್ತದೆ, ಇದು ಈ ರಾಜ್ಯದ ಅತ್ಯಂತ ಹಳೆಯ ನಗರ. ಇದನ್ನು 1901 ರಲ್ಲಿ ಬ್ರಿಟಿಷರು ಸ್ಥಾಪಿಸಿದರು, ಪಾಸಿಘಾಟ್ ಪೂರ್ವ ಸಿಯಾಂಗ್ ಜಿಲ್ಲೆಯ ಪ್ರಧಾನ ಕಾರ್ಯಾಲಯವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 152 ಮೀಟರ್ ಎತ್ತರದಲ್ಲಿದೆ. ಪಾಸಿಘಾಟ್ ಸಿಯಾಂಗ್ ನದಿಯ ತಟದಲ್ಲಿದೆ.

ವ್ಯವಸಾಯ ಇಲ್ಲಿನ ಜನರ ಪ್ರಮುಖ ಜೀವನೋಪಾಯ. ಅಕ್ಕಿಯಲ್ಲದೇ ಇಲ್ಲಿ ಬೆಳೆಯುವ ಪ್ರಮುಖ ಬೆಳೆಯೆಂದರೆ ಚಹಾ; ಇಲ್ಲಿ ಹಲವಾರು ಚಹಾ ತೋಟಗಳೂ ಇದೆ. ಸಸ್ಯತೋಟ ಮತ್ತು ವ್ಯವಸಾಯದ ಹೊರತಾಗಿ ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯದ ಮೂಲವಾಗಿದೆ.

ಪಾಸಿಘಾಟ್ ಸುತ್ತಮುತ್ತಲಲ್ಲಿರುವ ಪ್ರವಾಸಿ ಸ್ಥಳಗಳು

ಪಾಸಿಘಾಟ್ ಸಾಹಸೀ ಕ್ರೀಡೆಗಳಿಗೆ ಹೆಸರುವಾಸಿ ಮತ್ತು ವೈಜ್ಞಾನಿಕ ತಾಣಗಳ ಪರಿಚಯವೂ ನಿಮಗಾಗುತ್ತದೆ. ಜಲಪಾತ, ತೂಗುವ ಸೇತುವೆ, ಪರ್ವತಾರೋಹಣ ಮುಂತಾದವು ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಮನೋಲ್ಲಾಸವನ್ನೂ ನೀಡುತ್ತದೆ. ಇಲ್ಲಿನ ಕೆಲವೊಂದು ಹೆಸರಾಂತ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿ ಡೇಯಿಂಗ್ ಇರಿಂಗ್ ವನ್ಯಜೀವಿ ಧಾಮ ಮತ್ತು ಪಾನ್ಗಿನ್.

ಶ್ರೀಮಂತ ಸಂಸ್ಕೃತಿ

ಈ ಪ್ರದೇಶವು ಆದಿ ಬುಡಕಟ್ಟು ಜನಾಂಗದವರ ಮೂಲಸ್ಥಳ. ಇತಿಹಾಸದ ಪ್ರಕಾರ ಆದಿ ಬುಡಕಟ್ಟು ಜನಾಂಗದವರ ಭಾಷೆ ಪಾಸಿಘಾಟಿನಲ್ಲೇ ಆರಂಭವಾಗಿದ್ದು ಎನ್ನಲಾಗುತ್ತದೆ. ಸ್ವಾಭಾವಿಕವಾಗಿ ಆದಿ ಬುಡಕಟ್ಟು ಜನಾಂಗದವರ ಅತ್ಯುನ್ನತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದೆ. ಇಲ್ಲಿನ ಹಬ್ಬ ಹರಿದಿನಗಳನ್ನು ಸ್ಥಳೀಯರು ಉತ್ಸಾಹದಿಂದ ಆಚರಿಸುತ್ತಾರೆ. ಇಲ್ಲಿ ಹೆಚ್ಚಾಗಿ ಆಚರಿಸುವ ಹಬ್ಬವೆಂದರೆ ಮೋಪಿನ್ ಮತ್ತು ಸೋಲ್ಯುಂಗ್.

ಮೋಪಿನ್ ಹಬ್ಬವನ್ನು ದೃಷ್ಟ ಆತ್ಮಗಳನ್ನು ದೂರವಿರಿಸಲು ಆಚರಿಸಲಾಗುತ್ತದೆ. ಸ್ಥಳೀಯರು ಈ ಸಮಯದಲ್ಲಿ ದೇವರನ್ನು ಕುರಿತು ಉತ್ತಮ ಆರೋಗ್ಯ ಮತ್ತು ಜ್ಞಾನ ನೀಡಲು ಪ್ರಾರ್ಥಿಸುತ್ತಾರೆ. ಆ ಮೂಲಕ ಜೀವನದ ನಕಾರಾತ್ಮಕ ಧೋರಣೆಯಿಂದ ದೂರವಾಗಿ ಸುಂದರ ಬದುಕನ್ನು ಕಾಣುವ ಹಂಬಲ ಅವರಿಗಿರುತ್ತದೆ. ಈ ಹಬ್ಬವನ್ನು ಬತ್ತ ನಾಟಿ ಮಾಡುವ ಮುನ್ನ ಆಚರಿಸುತ್ತಾರೆ, ಇದು ಹೆಚ್ಚಾಗಿ ಎಪ್ರಿಲ್ ತಿಂಗಳಲ್ಲಿ ಆಚರಿಸಲ್ಪಡುತ್ತದೆ. ಸೋಲ್ಯುಂಗ್ ಹಬ್ಬ ಅತ್ಯಂತ ಜನಪ್ರಿಯ ಹಬ್ಬವಾಗಿದ್ದು ಆಗಸ್ಟ್ ತಿಂಗಳಲ್ಲಿ ಐದು ದಿನಗಳ ಕಾಲ ಆಚರಿಸಲ್ಪಡುತ್ತದೆ.

ಪಾಸಿಘಾಟ್ ತಲುಪುವುದು ಹೇಗೆ

ಪಾಸಿಘಾಟ್ ಪ್ರದೇಶವು ಅರುಣಾಚಲ ಪ್ರದೇಶದ ಹತ್ತಿರದ ನಗರಗಳಿಂದ ಉತ್ತಮ ಸಂಪರ್ಕದಲ್ಲಿದೆ. ಅಸ್ಸಾಂ ರಾಜ್ಯದ ನಗರಗಳಿಂದಲೂ ಉತ್ತಮ ಸಂಪರ್ಕದಲ್ಲಿದೆ.

ಪಾಸಿಘಾಟ್ ಪ್ರಸಿದ್ಧವಾಗಿದೆ

ಪಾಸಿಘಾಟ್ ಹವಾಮಾನ

ಉತ್ತಮ ಸಮಯ ಪಾಸಿಘಾಟ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಾಸಿಘಾಟ್

 • ರಸ್ತೆಯ ಮೂಲಕ
  ಪಾಸಿಘಾಟ್ ನಗರವನ್ನು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯದ ನಗರಗಳಿಂದ ರಸ್ತೆಯ ಮೂಲಕ ಸಂಪರ್ಕಿಸಬಹುದು. ಗುವಹಾಟಿಯಿಂದ ಒಂದು ರಾತ್ರಿಯ ಪ್ರಯಾಣ ಪಾಸಿಘಾಟಿಗೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪಾಸಿಘಾಟಿಗೆ ಹತ್ತಿರ ರೈಲು ನಿಲ್ದಾಣವೆಂದರೆ ಅಸ್ಸಾಂನ ಮುರ್ಕೋಂಗ್ ಸ್ಲೀಕ್ ರೈಲು ನಿಲ್ದಾಣ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಾಸಿಘಾಟಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಲೀಲಾಬರಿ ನಿಲ್ದಾಣ. ಮತ್ತೊಂದು ನಿಲ್ದಾಣವೆಂದರೆ ಧಿಬ್ರುಗರ್ ನಲ್ಲಿರುವ ನಿಲ್ದಾಣ, ಇದು ಕುಡಾ ಪಾಸಿಘಾಟಿಗೆ ಸಮೀಪದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun