Search
  • Follow NativePlanet
Share
ಮುಖಪುಟ » ಸ್ಥಳಗಳು» ರೋಯಿಂಗ್

ರೋಯಿಂಗ್ : ಪ್ರಕೃತಿಯ ಸೌಂದರ್ಯದಲ್ಲಿ ವಿಹರಿಸಿ

16

ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ್ ಕಣಿವೆ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರವಾಗಿರುವ ರೋಯಿಂಗ್ ಸೊಂಪಾದ ಹಸಿರು ಮರಗಳಿಂದ ಮತ್ತು ಪ್ರಕೃತಿ ಸೌಂದರ್ಯ ಕಣಿವೆಗಳಿಂದ ತುಂಬಿಕೊಂಡಿದೆ. ಇದು ಅರುಣಾಚಲ ಪ್ರದೇಶ ರಾಜ್ಯದ ಒಂದು ಪೂರ್ವ ಭಾಗವಾಗಿದೆ. ಇದರ ಗುಡ್ಡ ಬೆಟ್ಟಗಳು ಮತ್ತು ನದಿಗಳು ಉತ್ತರ ಭಾಗದಲ್ಲಿ ದಿಬಾಂಗ ಕಣಿವೆಯಿಂದ ಆವೃತವಾಗಿವೆ.ಪೂರ್ವದಲ್ಲಿ ಲೋಹಿತ ಜಿಲ್ಲೆ ಮತ್ತು ಮ್ಯಾಕ ಮೋಹನ ರೇಖೆಯಿದೆ. ಪಶ್ಚಿಮ ಪೂರ್ವ ಮತ್ತು  ಅರುಣಾಚಲ ಪ್ರದೇಶದ ಮೇಲಿನ ಸಿಯಂಗ ಜಿಲ್ಲೆಗಳಿಂದ ಆವೃತವಾಗಿದೆ. ಮತ್ತು ದಕ್ಷಿಣವು ಆಸ್ಸಾಮ ರಾಜ್ಯದ ತಿನಸುಕಿಯ ಜಿಲ್ಲೆಯಿಂದ ಸುತ್ತುವರೆದಿದೆ.

ಹಿಮದಿಂದ ಆವೃತವಾಗಿರುವ ಶಿಖರಗಳು, ಪ್ರಕ್ಷುಬ್ಧ ನದಿಗಳು, ಅದ್ಭುತ ಕಣಿವೆಗಳು ಮತ್ತು ಆಗಾಧ ಸಸ್ಯ ಮತ್ತು ಪ್ರಾಣಿ ರಾಶಿ ಇವೆಲ್ಲವೂ ರೋಯಿಂಗ್ ದ ಕೆಲವು ಆಕರ್ಷಕ ಸ್ಥಳಗಳು. ಇದು ತನ್ನ ಪ್ರಾಕೃತಿಕ ಸೌಂದರ್ಯ, ವರ್ಣ ರಂಜಿತ, ಮತ್ತು ಆಕರ್ಷಕ ಬುಡಕಟ್ಟುಗಳು, ಪ್ರಾಚೀನ ಪುರಾತತ್ವ ಸ್ಥಳಗಳು ಇವುಗಳಿಂದ ಇದು ಹೆಸರುವಾಸಿಯಾಗಿದೆ. ಹೀಗಾಗಿ ರೋಯಿಂಗ್   ನಿಸರ್ಗ ಪ್ರೇಮಿಗಳು, ಸಾಹಸಮಯ ಪ್ರವಾಸಿಗರು,  ಪ್ರಾಕ್ತನ ಮತ್ತು ಮಾನವಶಾಸ್ತ್ರಜ್ನರಿಗೆ ಪರಿಪೂರ್ಣ ತಾಣ ಎನಿಸಿದೆ.

ರೋಯಿಂಗ್  ನಲ್ಲಿ ಮತ್ತು ರೋಯಿಂಗ್  ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ರೋಯಿಂಗ್  ಅನೇಕ ಪ್ರಾಕೃತಿಕ ಆಕರ್ಷಣೆಗಳ ನೆಲೆಯಾಗಿದೆ. ಇಲ್ಲಿಗೆಚ ಪ್ರವಾಸಿಗರು ಮೇಲಿಂದ ಮೇಲೆ ಭೇಟಿ ನೀಡಿ ಆನಂದವನ್ನು ಅನುಭವಸುತ್ತಾರೆ. ಇಲ್ಲಿಯ ಸರೋವರಗಳು, ಕಣಿವೆಗಳು, ವನ್ಯ ಜೀವಿ ಅಭಯಾರಣ್ಯ ರೋಯಿಂಗ್  ಅನ್ನು ಆಕರ್ಷಕ ಸ್ಥಳವನ್ನಾಗಿಸಿದೆ.  ಇಲ್ಲಿಯ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಸ್ಯಾಲಿ, ಮೆಹಕೋ ಸರೋವರ, ಮೆಹಾವ ವನ್ಯ ಜೀವಿ ಅಭಯಾರಣ್ಯ. ರೋಯಿಂಗ್  ಪ್ರಾಚೀನ ಪುರಾತತ್ವ ಸ್ಥಳಗಳಾದ ಭೀಷ್ಮಕಾನಗರ ಮತ್ತು ರುಕ್ಮಿಣಿ ನಾಟಿ ಇವುಗಳಿಗೆ ಸಹ ಹೆಸರುವಾಸಿಯಾಗಿದೆ. ಅದ್ಭುತವಾದ ಕಣಿವೆಗಳು, ನದಿಗಳು ಮತ್ತು ಎತ್ತರದಿಂದ ನೀರು ಬೀಳುತ್ತಿರುವ ಹಲವಾರು ಜಲಪಾತಗಳು, ನೀಲಿ ಬಣ್ಣದ ಆಕಾಶ, ತೂಗಾಡುತ್ತಿರುವ ಮೋಡಗಳು ಇವೆಲ್ಲವೂ ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ. ಪ್ರಕೃತಿಯ ನೈಜ ಆರಾಧಕರಿಗೆ, ಪ್ರಕೃತಿಯನ್ನು ಅಸ್ವಾದಿಸಲು ಇಚ್ಛಿಸುವರೆಗೆ ಈ ಸ್ವರ್ಗವು ಕೈ ಮಾಡಿ ಕರೆಯುತ್ತಿದೆ.

ರೋಯಿಂಗ್  - ನೆಲ ಮತ್ತು ಸಂಸ್ಕತಿ

ಈ ಪಟ್ಟಣವು ಮಿಷ್ಮಿ ಬೆಟ್ಟದ ಅಡಿಯಲ್ಲಿ ನೆಲೆಗೊಂಡಿದೆ. ಇಲ್ಲಿಯ ಜನರು ಸ್ನೇಹ ಸ್ವಭಾವವನ್ನು ಹೊಂದಿದ್ದಾರೆ. ಮಿಷ್ಮಿ ಮತ್ತು ಆದಿ ಈ ಎರಡು ಬುಡಕಟ್ಟು ಜನಾಂಗದವರು ಈ ರೋಯಿಂಗ್ ದ ಪ್ರಮುಖ ಮೂಲನಿವಾಸಿಗಳು. ಮಿಷ್ಮಿಗಳು ರೇಹ ಹಬ್ಬವನ್ನು ಪ್ರತಿವರ್ಷ ಫೆಬ್ರುವರಿ ತಿಂಗಳಲ್ಲಿ ಆಚರಿಸುತ್ತಾರೆ. ಅದರಂತೆ ಆದಿಗಳು ಪ್ರತಿವರ್ಷ ಸಪ್ಟಂಬರ 1 ರಂದು ಆದಿಗಳು ಸಾಲುಂಗ ಹಬ್ಬವನ್ನು ಬಹು ವೈಭವದಿಂದ ಆಚರಿಸಲಾಗುತ್ತಾರೆ. ಇದು ಮಿಷ್ಮಿ ಈ ಜಿಲ್ಲೆಯಲ್ಲಿರುವ ಇತರ ಬುಡಕಟ್ಟುಗಳು.

ಇದು ಮಿಷ್ಮಿ ಬುಡಕಟ್ಟು ಜನರನ್ನು ಇತರ ಬುಡಕಟ್ಟು ಜನರ ಗುಂಪಿನ ನಡುವೆ ವಿಶೇಷವಾಗಿ ಗುರುತಿಸಬಹುದಾಗಿದೆ. ಅವರ ವಿಭಿನ್ನ ಕೇಶ ಶೈಲಿ, ವಿಶೇಷ ವೇಷ ಭೂಷಣಗಳು, ಬಟ್ಟೆಗಳ ಮೇಲಿನ ಕಲಾತ್ಮಕ ವಿನ್ಯಾಸಗಳು ಇವೆಲ್ಲವೂ ಅವರಿಗೆ ವಿಶೇಷ ಲಕ್ಷಣಗಳನ್ನು ನೀಡಿವೆ. ಅರುಣಾ ಚಲ ಪ್ರದೇಶದ ಈ ಬುಡಕಟ್ಟು ಜನರು ಈಗಲೂ ಕೂಡ ತಮ್ಮ ದೈನಂದಿನ ಜೀವನದಲ್ಲಿ ಆಳವಾಗಿ ಬೇರೂರಿದ ತಮ್ಮ ಪ್ರಾಚೀನ ಕಲಾತ್ಮಕ ಮೌಲ್ಯಗಳನ್ನು ಬಹು ಹೆಮ್ಮೆ ಮತ್ತು ಗೌರವದಿಂದ ಅನುಕರಿಸುತ್ತಾರೆ.

ರೋಯಿಂಗ್ : ಭೇಟಿ ನೀಡಲು ಯೋಗ್ಯವಾದ ಸಮಯ

ಚಳಿಗಾಲದ ತಿಂಗಳುಗಳು ರೋಯಿಂಗ್ ಗೆ ಭೇಟಿ ನೀಡಲು ಯೋಗ್ಯವಾದ ಸಮಯವಾಗಿದೆ. ಇಲ್ಲಿ ಚಳಿಗಾಲವು ಅಕ್ಟೋಬರನಿಂದ ಜನೇವರಿ ತಿಂಗಳ ಕೊನೆಯವರೆಗೂ ಇರುತ್ತದೆ. ರೋಯಿಂಗ್ ನಲ್ಲಿರುವ ಕೊಳಗಳು ಕಮಲದಿಂದ ತುಂಬಿಕೊಂಡಾಗ ಇಲ್ಲಿಯ ಪ್ರಕೃತಿಯು ಹೆಚ್ಚು ಸುಂದರವಾಗುತ್ತದೆ. ಆಗ ಎಂದಿಗಿಂತ ಆಹ್ಲಾದಕರ ವಾತಾವರಣ ರೋಯಿಂಗ್ ನಲ್ಲಿರುತ್ತದೆ.

ರೋಯಿಂಗ್  : ತಲುಪುವುದು ಹೇಗೆ?

ರೋಯಿಂಗ್  ನಗರವನ್ನು ಹಲವಾಗು ಸಾರಿಗೆಯ ಮಾಧ್ಯಮಗಳ ಮೂಲಕ ಸುಲಭವಾಗಿ ತಲುಪಬಹುದು. ರೋಯಿಂಗ್  ನಗರದಲ್ಲಿ ರೇಲ್ವೆ ನಿಲ್ದಾಣವಾಗಲೀ, ವಿಮಾನ ನಿಲ್ದಾಣವಾಗಲೀ ಇಲ್ಲ. ಆಸ್ಸಾಮ ರಾಜ್ಯದ ತಿನಸುಕಿಯಾ ನಗರದ ರೇಲ್ವೆ ನಿಲ್ದಾಣವು ರೋಯಿಂಗ್  ನಗರಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ಆಸ್ಸಾಂ ದಿಂದ ರೋಯಿಂಗ್  ನಗರಕ್ಕೆ ಸುಲಭವಾಗಿ ತಲುಪಬಹುದು. ಇದಕ್ಕಾಗಿ ಉತ್ತಮವಾದ ಸಾರಿಗೆ ವ್ಯವಸ್ಥೆ ಇದೆ. ಪ್ರವಾಸಿಗರು ಸಾರಿಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳನ್ನು ರೋಯಿಂಗ್  ನಗರವನ್ನು ತಲುಪಲು ಬಳಸಬಹುದು. ಇವೆರಡು ಸಾರಿಗೆಯ ಜನಪ್ರಿಯ ಮಾಧ್ಯಮಗಳಾಗಿವೆ.

ರೋಯಿಂಗ್ ಪ್ರಸಿದ್ಧವಾಗಿದೆ

ರೋಯಿಂಗ್ ಹವಾಮಾನ

ಉತ್ತಮ ಸಮಯ ರೋಯಿಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರೋಯಿಂಗ್

  • ರಸ್ತೆಯ ಮೂಲಕ
    ಪ್ರವಾಸಿಗರು ರಸ್ತೆ ಸಾರಿಗೆಯ ಮೂಲಕ ರೋಯಿಂಗ್ ನಗರವನ್ನು ತಲುಪಬಹುದು. ಆಸ್ಸಾಮ ರಾಜ್ಯದ ಸಾದಿಯಾ ಮತ್ತು ಧೂಲಾ ಮಾರ್ಗವಾಗಿ ಪ್ರವಾಸಿಗರು ಈ ನಗರವನ್ನು ತಲುಪಬಹುದು. ಅಥವಾ ತೀನಸುಕಿಯ ಜಿಲ್ಲೆಯ ಮಾರ್ಗಾವಾಗಿಯೂ ಪ್ರವಾಸಿಗರು ಇಲ್ಲಿಗೆ ಬರಬಹುದು. ರೋಯಿಂಗ್ ಪಟ್ಟಣಕ್ಕೆ ಬರಲು ಪ್ರವಾಸಿಗರು ಬಸ್ಸುಗಳು ಅಥವಾ ಖಾಸಗಿ ಟ್ಯಾಕ್ಸಿಗಳನ್ನು ಆಯ್ಕೆ ಮಾಡಬಹುದು. ಇದು ಸಾರಿಗೆಯ ಜನಪ್ರಿಯ ಮಾಧ್ಯಮವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಾಗರಿಕ ವಿಮಾನಯಾನ ಇಲಾಖೆಯು ರೋಯಿಂಗ್ ನಗರಕ್ಕೆ ದಾಮಬುಕ್, ಅನಿನಿ ಮತ್ತು ಪಾಸಿಘಾಟಗಳಿಂದ ಹೆಲಿಕಾಪ್ಟರ ಸೌಲಭ್ಯವನ್ನು ಒದಗಿಸುತ್ತದೆ. ಇದರ ದರಗಳು ಸಹ ಅನುಕೂಲಕರವಾಗಿದ್ದು ರೋಯಿಂಗ್ ಪಟ್ಟಣವನ್ನು ಈ ಮೂಲಕ ಸುಲಭವಾಗಿ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಾಗರಿಕ ವಿಮಾನಯಾನ ಇಲಾಖೆಯು ರೋಯಿಂಗ್ ನಗರಕ್ಕೆ ದಾಮಬುಕ್, ಅನಿನಿ ಮತ್ತು ಪಾಸಿಘಾಟಗಳಿಂದ ಹೆಲಿಕಾಪ್ಟರ ಸೌಲಭ್ಯವನ್ನು ಒದಗಿಸುತ್ತದೆ. ಇದರ ದರಗಳು ಸಹ ಅನುಕೂಲಕರವಾಗಿದ್ದು ರೋಯಿಂಗ್ ಪಟ್ಟಣವನ್ನು ಈ ಮೂಲಕ ಸುಲಭವಾಗಿ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed