Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಹವಾಮಾನ

ರೋಯಿಂಗ್ ಹವಾಮಾನ

ಚಳಿಗಾಲದ ತಿಂಗಳುಗಳು ರೋಯಿಂಗ್ ಗೆ ಭೇಟಿ ನೀಡಲು ಯೋಗ್ಯವಾದ ಸಮಯವಾಗಿದೆ. ಇಲ್ಲಿ ಚಳಿಗಾಲವು ಅಕ್ಟೋಬರನಿಂದ ಜನೇವರಿ ತಿಂಗಳ ಕೊನೆಯವರೆಗೂ ಇರುತ್ತದೆ. ರೋಯಿಂಗ್ ನಲ್ಲಿರುವ ಕೊಳಗಳು ಕಮಲದಿಂದ ತುಂಬಿಕೊಂಡಾಗ ಇಲ್ಲಿಯ ಪ್ರಕೃತಿಯು ಹೆಚ್ಚು ಸುಂದರವಾಗುತ್ತದೆ. ಆಗ ಎಂದಿಗಿಂತ ಆಹ್ಲಾದಕರ ವಾತಾವರಣ ರೋಯಿಂಗ್ ನಲ್ಲಿರುತ್ತದೆ.

ಬೇಸಿಗೆಗಾಲ

ರೋಯಿಂಗ್  ಪಟ್ಟಣದಲ್ಲಿ ಮಾರ್ಚ, ಏಪ್ರೀಲ, ಮೇ ಮತ್ತು ಜೂನ ತಿಂಗಳುಗಳಲ್ಲಿ ಬೇಸಿಗೆ ಕಾಲ ಇರುತ್ತದೆ. ಈ ತಿಂಗಳುಗಳಲ್ಲಿ ಇಲ್ಲಿಯ ಗರಿಷ್ಟ ಪ್ರಮಾಣದ ತಾಪಮಾನ ಎಂದರೆ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಟ ಪ್ರಮಾಣದ ತಾಪಮಾನ ಎಂದರೆ 15 ಡಿಗ್ರಿ ಸೆಲ್ಸಿಯಸ್. ಈ ಸಮಯದಲ್ಲಿ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಈ ಸ್ಥಳಕ್ಕೆ ಭೇಟಿ ಕೊಡಲು ಕೆಲಮಟ್ಟಿಗೆ ಯೋಗ್ಯವಾದ ಸಮಯವು ಹೌದು.

ಮಳೆಗಾಲ

ರೋಯಿಂಗ್  ಪಟ್ಟಣದಲ್ಲಿ ಜುಲೈ ಮತ್ತು ಅಗಸ್ಟ ತಿಂಗಳುಗಳಲ್ಲಿ ಮಳೆಗಾಲ ಇರುತ್ತದೆ. ಈ ತಿಂಗಳುಗಳಲ್ಲಿ ಇಲ್ಲಿ ಭಾರಿ ಮಳೆ ಆಗುತ್ತದೆ. ಈ ಮಳಯು ರೋಯಿಂಗ್  ಪಟ್ಟಣದ ತಾಪಮಾನವನ್ನು ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ. ಮಳೆಗಾಲದ ಈ ಸಮಯದಲ್ಲಿ ರೋಯಿಂಗ್  ನಗರಕ್ಕೆ ಪ್ರಯಾಣ ಕೈಗೊಳ್ಳುವುದು ಅಷ್ಟೊಂದು ಯೋಗ್ಯವಲ್ಲ. ಎಕೆಂದರೆ ಈ ಸಮಯದಲ್ಲಿ ಪ್ರವಾಹದ ಕಾರಣದಿಂದಾಗಿ ಭಾರಿ ಮಳೆ ಉಂಟಾಗುತ್ತದೆ.

ಚಳಿಗಾಲ

ರೋಯಿಂಗ್  ಪಟ್ಟಣದಲ್ಲಿ ಅಕ್ಟೋಬರನಿಂದ ಜನೇವರಿ ತಿಂಗಳುವರೆಗೂ ಮಳೆಗಾಲ ಇರುತ್ತದೆ. ಈ ತಿಂಗಳುಗಳಲ್ಲಿ ಇಲ್ಲಿಯ ಗರಿಷ್ಟ ಪ್ರಮಾಣದ ತಾಪಮಾನ ಎಂದರೆ 24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಟ ಪ್ರಮಾಣದ ತಾಪಮಾನ ಎಂದರೆ 0 ಡಿಗ್ರಿ ಸೆಲ್ಸಿಯಸ್. ಚಳಿಗಾಲದ ಸಮಯವು ರೋಯಿಂಗ್  ನಗರಕ್ಕೆ ಭೇಟಿ ಕೊಡಲು ಅತ್ಯಂತ ಯೋಗ್ಯವಾದ ಸಮಯವಾಗಿದೆ. ಅದರಂತೆ ಈ ಸಮಯದಲ್ಲಿ ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.