ಮೋನ್ : ಕೊನ್ಯಾಕ್ ಅಥವಾ ಹಚ್ಚೆ ಹಾಕಿಸಿಕೊಂಡ ವೀರರ ಭೂಮಿ

ಮುಖಪುಟ » ಸ್ಥಳಗಳು » ಮೋನ್ » ಮುನ್ನೋಟ

ಹಲವರಿಗೆ ಒಂದು ಸಾಹಸಿ ಪಯಣ, ಇನ್ನೂ ಕೆಲವರಿಗೆ ತಮ್ಮ ಬದುಕಿನ ಮರೆಯಲಾಗದ ಪ್ರವಾಸ ಮತ್ತೂ ಕೆಲವರಿಗೆ ಮಾನವ ಶಾಸ್ತ್ರೀಯ ಮಹತ್ವದ ತಾಣ ಹೀಗೆ ಮೋನ್ ಗೆ ಭೇಟಿ ನೀಡಿದವರಿಗೆಲ್ಲಾ ಒಂದಲ್ಲ ಒಂದು ರೀತಿಯ ಆಕರ್ಷಣೆ ಇದ್ದೇ ಇದೆ. ನೀವು ನಗರ ಜೀವನದಿಂದ ಹೊರಹೋಗಿ ಸ್ವಲ್ಪ ದಿನಗಳ ಕಾಲ ಶಾಂತ ಮತ್ತು ನೆಮ್ಮದಿಯ ಜೀವನ ನಡೆಸಬೇಕು ಎಂಬ ಬಯಕೆ ಹೊಂದಿದ್ದಲ್ಲಿ ಇದು ಸರಿಯಾದ ತಾಣ. ನಾಗಾಲ್ಯಾಂಡ್ ನ ಹನ್ನೊಂದು ಜಿಲ್ಲೆಗಳಲ್ಲಿ ಮೋನ್ ಕೂಡ ಒಂದು. ಇದು ಉತ್ತರದಲ್ಲಿ ಅಸ್ಸಾಂ ಜೊತೆ, ದಕ್ಷಿಣದಲ್ಲಿ ಮಯನ್ಮಾರ್ ಜೊತೆ ಮೊಕೊಕ್ ಚುಂಗ್ ಮತ್ತು ತ್ಯುಯೆನ್ಸಾಂಗ್ ಜೊತೆ ಪಶ್ಚಿಮದಲ್ಲಿ ತನ್ನ ಗಡಿಯನ್ನು ಹಂಚಿಕೊಂಡಿದೆ.

ಸಂಸ್ಕೃತಿ ಮತ್ತು ಜನರು : ಸೂಕ್ಷ್ಮ ದೃಷ್ಟಿಯ ಪ್ರವಾಸಿಗರಿಗೆ

ಇದು ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ಜಿಲ್ಲೆಯಾಗಿದೆ. ಮೋನ್ ಅನ್ನು ಪ್ರವಾಸಿಗರ ಸಾಂಸ್ಕೃತಿಕ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇದನ್ನು ಕೊನ್ಯಾಕ್ ಗಳು ಅಥವಾ ನಾಗಾಲ್ಯಾಂಡ್ ನ ಹಚ್ಚೆ ಹಾಕಿಸಿಕೊಂಡ ವೀರರ ನಾಡು ಎಂದೂ ಕರೆಯಲಾಗುತ್ತದೆ. ಇಂದಿಗೂ ಇಲ್ಲಿಗೆ ಭೇಟಿ ಕೊಟ್ಟರೆ ಪುರುಷ ಮತ್ತು ಮಹಿಳೆಯರಿಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಹೆಚ್ಚು ಹೆಚ್ಚು ಆಭರಣಗಳನ್ನು ಅದರಲ್ಲೂ ಹೆಚ್ಚಾಗಿ ದೊಡ್ಡ ಕಿವಿಯೋಲೆಗಳನ್ನು ಧರಿಸಿ ಇರುವುದನ್ನು ನೀವು ಕಾಣಬಹುದು.

ಕೊನ್ಯಾಕ್ ಗಳು ಎರಡು ಗುಂಪುಗಳಲ್ಲಿ ಹಂಚಿ ಹೋಗಿದ್ದಾರೆ. ಅವುಗಳ ಹೆಸರುಗಳೆಂದರೆ ಥೆಂಡು ಮತ್ತು ಥೆಂಟೋ. ಇವುಗಳಲ್ಲಿ ಮೊದಲನೆಯದು ಅವರ ಹಚ್ಚೆ ಹಾಕಿಸಿದ ಮುಖದಿಂದ ಗುರುತಿಸಬಹುದು ಹಾಗೂ ಎರಡನೆಯ ಗುಂಪನ್ನು ಬಿಳಿಯ ಮುಖದಿಂದ ಗುರುತಿಸಬಹುದಾಗಿದೆ. ಥೆಂಡುಗಳು ಜಿಲ್ಲೆಯ ಕೆಳಭಾಗದಲ್ಲಿ ಇದ್ದರೆ ಥೆಂಟೋ ಗಳು ಟೊಬು ಎಂಬ ಜಿಲ್ಲೆಯ ಮೇಲ್ಭಾಗದಲ್ಲಿ ಇದ್ದಾರೆ. ಥೆಂಡು ಗಳ ಅರಸರನ್ನು ಆಂಘ್ಸ್ ಎನ್ನುತ್ತಾರೆ. ಥೆಂಡು ಗಳನ್ನು ಅವರ ಹಚ್ಚೆ ಹಾಕಿದ ಮುಖ ಮತ್ತು ಗಲ್ಲದ ಮೂಲಕ ಸುಲಭವಾಗಿ ಗುರುತಿಸಬಹುದಾಗಿದೆ.

ಉತ್ಸವದ ಸಮಯ : ಮೋನ್ ಭೇಟಿಗೆ ಸರಿಯಾದ ಸಮಯ

ಆಯೊಲೆಯೊಂಗ್  ಉತ್ಸವ ಮೊನ್ಯುಹಬ್ಬದ ಆಚರಣೆಯಾದ ಎಪ್ರಿಲ್ ನಲ್ಲಿ ಕೊನ್ಯಾಕ್ ಪ್ರದೇಶ ಹಬ್ಬದ ತಯಾರಿಯಲ್ಲಿ ಮುಳುಗಿರುತ್ತದೆ. ಈ ಅವಧಿಯಲ್ಲಿ ಇವರು ವಸಂತ ಋತುವನ್ನು ಸ್ವಾಗತಿಸುತ್ತಾರೆ. ಈ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಭೇಟಿ ನೀಡುವುದು ಬಹಳ ಸೂಕ್ತವಾಗಿದೆ.

Please Wait while comments are loading...