Search
 • Follow NativePlanet
Share
ಮುಖಪುಟ » ಸ್ಥಳಗಳು» ಕಿಫಿರೆ

ಕಿಫಿರೆ : ಸಾರಾಮತಿ ಪರ್ವತ ಶ್ರೇಣಿಯಿಂದ ಕಾಣುವ ಒಂದು ಸುಂದರ ಸಣ್ಣ ಪಟ್ಟಣ

5

ಕಿಫಿರೆ ನಾಗಾಲ್ಯಾಂಡಿನಲ್ಲಿರುವ ಒಂದು ಸಣ್ಣ ಪಟ್ಟಣ.  ಇದು ನಾಗಾಲ್ಯಾಂಡಿನ ಅತ್ಯುನ್ನತ ಎತ್ತರದ ಮಟ್ಟದಲ್ಲಿದ್ದು ಈ ಪಟ್ಟಣದಿಂದ ಸಾರಾಮತಿ ಬೆಟ್ಟದ ಅಸಮಾನ್ಯ ದೃಶ್ಯವನ್ನು ಕಾಣಬಹುದು.  ಈ ಪಟ್ಟಣವು ಹಿಂದೆ ಟ್ಯೂಎನ್‍ಸಾಂಗ್ ಜಿಲ್ಲೆಯಲ್ಲಿತ್ತು. ನಂತರ 2004 ರಲ್ಲಿ ಇದು ಹೊಸದಾಗಿ ರಚಿಸಿದ ನಾಗಾಲ್ಯಾಂಡಿನ 9ನೇ ಜಿಲ್ಲೆಯಾಗಿದೆ.  ಈ ಜಿಲ್ಲೆಯ ಉತ್ತರದಲ್ಲಿ ಟ್ಯೂಎನ್‍ಸಾಂಗ್ ಜಿಲ್ಲೆಯಿದೆ ಮತ್ತು ಪಶ್ಚಿಮದಲ್ಲಿ ಪೆಕ್ ಜಿಲ್ಲೆ ಹಾಗೂ ಪೂರ್ವದಲ್ಲಿ ಮಯನ್ಮಾರ್ ದೇಶದ ಅಂತರ ರಾಷ್ಟ್ರಿಯ ಗಡಿಯನ್ನು ಹೊಂದಿದೆ. ಕಿಫಿರೆ ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾ‍ಯಿಂದ 254 ಕಿ.ಮೀ. ದೂರದಲ್ಲಿದೆ.

ಕಿಫಿರೆ ಕೆಲವು ನಾಗಾ ಬುಡಕಟ್ಟಿನ ಜನಾಂಗದವರಾದ ಯಿಂಚುಂಗರ್ಸ್, ಖಿಯಾಮ್ನಿಉಂಗನ್, ಫೋಮ್, ಸಂಗ್ಟಾಮ್ಸ್ ಮತ್ತು ಸುಮಿಸ್ ಅವರುಗಳ ತವರೂರಾಗಿದೆ.  ಜಾನಪದ ಅಧ್ಯಯನಗಳ ಪ್ರಕಾರ ಯಿಂಚುಂಗರ್ಸ್ ಜನಾಂಗದವರು ಹತ್ತಿರದ ವಾಫೂರ್ ಹಳ್ಳಿಯ  ಕೆಮೆಫು ಪ್ರದೇಶದ ಮೂಲದವರು.  

ಕಿಫಿರೆ ಮತ್ತು ಸಾರಾಮತಿ  ಒಂದು ಅತ್ಯಾಕರ್ಷಕ ಸಂಯೋಗ

ಕಿಫಿರೆ ಪಟ್ಟಣ ಸುತ್ತಮುತ್ತಲಿನ ಅತ್ಯಾಕರ್ಷಕ ದೃಶ್ಯಗಳು ಮತ್ತು ಸಮುದ್ರಮಟ್ಟದಿಂದ 3841 ಮೀಟರ್ ಎತ್ತರದಲ್ಲಿರುವ ಸಾರಾಮತಿ ಬೆಟ್ಟದ ಅದ್ಭುತ ಸೌಂದರ್ಯವನ್ನು ಯಾವ ಪ್ರವಾಸಿಗನೂ ಕೂಡ ಆನಂದಪಡುತ್ತಾನೆ. ಈ ಬೆಟ್ಟವು ನಾಗಾಲ್ಯಾಂಡಿನ ಅತಿ ಎತ್ತರದ ಶಿಖರ.  ಚಳಿಗಾಲದಲ್ಲಿ ಬೆಟ್ಟವು ಪೂರ್ತಿ ಹಿಮದಿಂದ ಮುಚ್ಚಿಹೋಗಿರುವ ದೃಶ್ಯವು ಇನ್ನೂ ಹೆಚ್ಚು ಆಕರ್ಷಕವಾಗಿರುತ್ತದೆ. ಈ ಆಕರ್ಶಕ ಕಿಫಿರೆ ಪಟ್ಟಣದಿಂದ ಕಾಣುವ ಸಾರಾಮತಿ ಬೆಟ್ಟವು ಈ ಸಣ್ಣ ಪಟ್ಟಣಕ್ಕೆ ರಕ್ಷಣೆಕೊಡುತ್ತಿದೆಯೆಂದು ನೋಡಿದ ಅನೇಕ ಜನರು ಹೇಳುವುದು ಸಹಜವಾಗಿದೆ.

ಕಿಫಿರೆಯ ಪ್ರೇಕ್ಷಣೀಯ ಸ್ಥಳಗಳು

ಕಿಫಿರೆಯಲ್ಲಿ ಭೇಟಿ ಮಾಡಬಹುದಾದ ಜನಪ್ರಿಯ ಸ್ಥಳಗಳಲ್ಲಿ ಫಕೀಮ್ ವನ್ಯಜೀವಿ ಅಭಯಾರಣ್ಯ, ಸಲೋಮಿ ಮತ್ತು ಮಿಮಿ ಗುಹೆಗಳು ಸೇರಿವೆ. ಸುಖ್ಯಪ್ ಕಡಿದಾದ ಬಂಡೆ ಅಥವಾ ’ಪ್ರೇಮಿಗಳ ಸ್ವರ್ಗ’ (ಲವರ್ಸ್ ಪ್ಯಾರಡೈಸ್) ಇಲ್ಲಿನ ಜನಪ್ರಿಯ ಪ್ರವಾಸಿ ತಾಣ.  ಕಿಫಿರೆ ಬಳಿಯ ಸಿಮಿ ಹಳ್ಳಿಗೆ ಭೇಟಿನೀಡುವಾಗ ಪ್ರವಾಸಿಗಳು ಸರಣಿ ಸರಣಿಯಾಗಿ ಬೀಳುವ ವಾವಡೆ ಜಲಪಾತ ಮತ್ತು ಸ್ಪರ್ಧಾತ್ಮಕ ಕಲ್ಲುಗಳೆಂದು ಪ್ರಸಿದ್ಧಿಯಾಗಿರುವ ಅವಳಿ ಕಲ್ಲುಗಳನ್ನು ನೋಡಿ ಆನಂದಪಡಬಹುದು.  ಸಂಗ್ಟಾಮ್ ಎಂಬ ಒಂದು ಹಳೆಯ ಬುಡಕಟ್ಟಿನವರ ಹಳ್ಳಿಯಲ್ಲಿ ಹಾದುಹೋದರೆ ಭರ್ಜರಿಯಾಗಿ ಸ್ಥಾಪಿಸಲಾಗಿರುವ ಒಂದು ಹಳೆಯ ಏಕಶಿಲೆ ನಿಂಗ್ತ್‍ಸಲಾಂಗಿನ ಸಿಫಿ ಅಥವಾ ಸಾಂಫ್ಯೂರ್‌ನಲ್ಲಿ ಕಾಣಬಹುದು.

ಕಿಫಿರೆಯನ್ನು ಭೇಟಿಮಾಡಲು ಅತ್ಯುತ್ತಮ ಸಮಯ

ಕಿಫಿರೆಯನ್ನು ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಭೇಟಿಮಾಡಲು  ಅತ್ಯುತ್ತಮ ಸಮಯ. ಈ ಸಮಯದಲ್ಲಿ ಮುಂಗಾರುಮಳೆಯು ಕೊನೆಗೊಳ್ಳುತ್ತಿದ್ದು ಚಳಿಗಾಲವು ಆರಂಭವಾಗುತ್ತದೆ. ತಾಪಮಾನವು ಈ ತಿಂಗಳುಗಳಲ್ಲಿ ಗಣನೀಯವಾಗಿ ಇಳಿದರೂ ಇಲ್ಲಿ ಸುತ್ತಾಡಲು ಅತ್ಯಂತ ಆರಾಮದಾಯಕವಾಗಿರುವುದು.  ಒಣ ಹವೆಯ ಹವಾಮಾನವಿರುತ್ತದೆ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಂಡಿದ್ದರೆ ಅಹ್ಲಾದಕರ ಅನುಭವ ಆಗುತ್ತದೆ.

ಕಿಫಿರೆ ಪ್ರಸಿದ್ಧವಾಗಿದೆ

ಕಿಫಿರೆ ಹವಾಮಾನ

ಕಿಫಿರೆ
20oC / 69oF
 • Partly cloudy
 • Wind: SSW 5 km/h

ಉತ್ತಮ ಸಮಯ ಕಿಫಿರೆ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಿಫಿರೆ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ ನಂ. 155 ಮೂಲಕ ಕಿಫಿರೆ ಪಟ್ಟಣವು ನಾಗಾಲ್ಯಾಂಡಿನ ಉಳಿದ ಸ್ಥಳಗಳಗೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿಯು ಕಿಫಿರೆ ಪಟ್ಟಣದಿಂದ ಕೊಹಿಮಾ, ಮೇಲುರಿ, ದಿಮಾಪೂರ್ ಮತ್ತು ಮೊಕೊಚುಂಗ್ ನಗರಗಳಿಗೆ ಸಂಪರ್ಕ ಹೊಂದಿದೆ. ನಾಗಾಲ್ಯಾಂಡಿನ ಎಲ್ಲಾಕಡೆಯಿಂದ ರಾಜ್ಯ ಸಾರಿಗೆ ಬಸ್‍ಗಳು ಮತ್ತು ಖಾಸಗಿ ಟ್ಯಾಕ್ಸಿಗಳು ದೊರೆಯುತ್ತವೆ. ರಾಜ್ಯದ ಹೆದ್ದಾರಿಯಲ್ಲಿ ಸಹ ಟ್ಯೂಎನ್ಸಾಂಗ್ - ಕಿಫಿರೆ - ಮೇಲೂರಿ ಒಟ್ಟಾಗಿ ಸಂಪರ್ಕ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಾಗಾಲ್ಯಾಂಡಿನಲ್ಲಿ ದಿಮಾಪೂರ್‌ನಲ್ಲಿ ಮಾತ್ರ ರೈಲು ನಿಲ್ದಾಣವಿದೆ. ಆದ್ದರಿಂದ ನಾಗಾಲ್ಯಾಂಡಿಗೆ ಮೊದಲು ರೈಲಿನಲ್ಲಿ ದಿಮಾಪೂರ್ ಸೇರಿ ನಂತರ ರಸ್ತೆಯಲ್ಲಿ ಕಿಫಿರೆಯನ್ನು ತಲುಪಬೇಕು. ದಿಮಾಪೂರ್‌ನಿಂದ ಕಿಫಿರೆಗೆ ನಿರಂತರವಾಗಿ ನಾಗಾಲ್ಯಾಂಡ್ ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಪ್ರವಾಸಿ ವಾಹನಗಳ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನಾಗಾಲ್ಯಾಂಡನ್ನು ಸೇರಲು ದಿಮಾಪೂರ್ ಒಂದೇ ವಿಮಾನ ನಿಲ್ದಾಣವಾಗಿದೆ. ಆದ್ದರಿಂದ ಪ್ರವಾಸಿಗಳು ಮೊದಲು ದಿಮಾಪೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಿ, ನಂತರ ಕಿಫೆರೆಯನ್ನು ಸೇರಲು ರಸ್ತೆಯಲ್ಲಿ ಪ್ರಯಾಣ ಮುಂದುವರೆಸಬೇಕು. ದಿಮಾಪೂರ್ ಕಿಫಿರೆ‌ಯಿಂದ 471 ಕಿ.ಮೀ. ದೂರದಲ್ಲಿದ್ದು ರಸ್ತೆಯ ಪ್ರಯಾಣ ಸುಮಾರ್ 8 ಗಂಟೆ ಆಗುತ್ತದೆ. ಈತರೆ ಆಯ್ಕೆಗಳೆಂದರೆ ಜೋರ್ಹಟ್ ಮತ್ತು ಗುವಹತಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಮಾಡಬೇಕು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 Nov,Fri
Return On
28 Nov,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Nov,Fri
Check Out
28 Nov,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Nov,Fri
Return On
28 Nov,Sat
 • Today
  Kiphire
  20 OC
  69 OF
  UV Index: 5
  Partly cloudy
 • Tomorrow
  Kiphire
  14 OC
  57 OF
  UV Index: 5
  Partly cloudy
 • Day After
  Kiphire
  14 OC
  57 OF
  UV Index: 5
  Partly cloudy