Search
  • Follow NativePlanet
Share

ಪೆಕ್ : ಪ್ರಕೃತಿ ಮತ್ತು ಸಂಸ್ಕೃತಿಗಳ ಸಂಗಮ

6

ನಾಗಾಲ್ಯಾಂಡ್ ಭಾರತದ ಇನ್ನೂ ಶೋಧಿತವಾಗದೆ ಉಳಿದ ಭಾಗಗಳಲ್ಲಿ ಒಂದು. ಇದು ತನ್ನ ಬೆಟ್ಟ, ಕಣಿವೆಗಳಲ್ಲಿ, ಭೂಪ್ರದೇಶಗಳಲ್ಲಿ ಹಲವು ವಿಶೇಷಗಳನ್ನು ಒಳಗೊಂಡಿದೆ. ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಮತ್ತೆ ಮತ್ತೆ ಭೇಟಿ ನೀಡಲು ಇಚ್ಛಿಸುವಿರಿ. ಇಲ್ಲಿ ಪ್ರಕೃತಿ ಸಂಸ್ಸೃತಿಗಳ ಅಪರೂಪದ ಸಂಗಮವನ್ನು ಕಾಣಬಹುದು. ಪೆಕ್ ನಾಗಾಲ್ಯಾಂಡಿನ ಆಗ್ನೇಯ ಭಾಗದಲ್ಲಿದೆ.

ಈ ಜಿಲ್ಲೆಯ ಪೂರ್ವಕ್ಕೆ ಮಾಯನ್ಮಾರ್, ದಕ್ಷಿಣಕ್ಕೆ ಮಣಿಪುರ, ಪಶ್ಚಿಮಕ್ಕೆ ಕೋಹಿಮ ಮತ್ತು ಉತ್ತರಕ್ಕೆ ಜುನ್‌ಹೆಬೊಟೋ ಮತ್ತು ತುಯೆನ್‌ಸ್ಯಾಂಗ್ ಜಿಲ್ಲೆಗಳಿವೆ. ಹಿಂದೆ ಪೆಕ್ ಕೋಹಿಮ ಜಿಲ್ಲೆಗೆ ಸೇರಿತ್ತು. ಇದು ಕೋಹಿಮಾ ನಗರದಿಂದ ೧೪೫ ಕಿ.ಮೀ ದೂರದಲ್ಲಿತ್ತು. ಪೆಕ್ ಎಂದರೆ ’ ನಿರೀಕ್ಷಣಾ ಗೋಪುರ’ ಎಂದರ್ಥ. ಈ ಪದವನ್ನು ’ಫೆಕ್ರೆಕೆಡ್ಜೆ’ ಎಂಬುದರಿಂದ ಪಡೆಯಲಾಗಿದೆ. ಇಲ್ಲಿನ ಮೂಲ ನಿವಾಸಿಗಳು ಚಖ್ಹೆಸಾಂಗ್ಸ್ ಮತ್ತು ಪೊಚೌರ್ಯಾಸ್. ಇಲ್ಲಿನ ಸ್ಥಳೀಯ ಭಾಷೆ ತೇನ್ಯಿಡೈ ಮತ್ತು ನಾಗಮೆಸೆ. ಕುತೂಹಲಕಾರಿ ವಿಷಯವೆಚಿದರೆ ಚಖ್ಹೆಸಾಂಗ್‌ಗಳೆಂದರೆ ಚೊಕ್ರಿ, ಖೇಜ ಮತ್ತು ಸಾಂಗ್ ಈ ಮೂರು ಬುಡಕಟ್ಟುಗಳ ಮಿಶ್ರಣ.

ನದೀ ತೀರದ ಸೌಂದರ್ಯ ಪ್ರವಾಸಿಗರ ಮನಸೂರೆಗೊಳ್ಳುತ್ತದೆ!

ಈ ಸುಂದರ ಜಿಲ್ಲೆಯಲ್ಲಿ ಮೂರು ಮುಖ್ಯನದಿಗಳಿವೆ_ ಟಿಜು, ಲಾನ್ಯೆ ಮತ್ತು ಸೆಡ್ಜು. ಇವಲ್ಲದೆ ಪ್ರವಾಸಿಗರನ್ನು ಸೆಳೆಯುವ ಮತ್ತೊಂದು ನೀರಿನ ಸೆಲೆಯೆಂದರೆ ಶಿಲ್ಲೋಯಿ, ಚಿಡಾ ಮತ್ತು ಡ್ಜುಡು ಸರೋವರಗಳು. ಪೆಕ್ ಇಲ್ಲಿನ ಕಣಿವೆಗಳಲ್ಲಿ ಕಂಡುಬರುವ ಅಪರೂಪದ ಆರ್ಕಿಡ್‌ಗಳಿಗೆ ಕೂಡ ಪ್ರಸಿದ್ಧವಾಗಿದೆ. ಇಲ್ಲಿ ಸಸ್ಯ ಮತ್ತು ಜೀವವೈವಿಧ್ಯವನ್ನು ಕೂಡ ಕಾಣಬಹುದು. ಇಲ್ಲಿ ಬ್ಲೈತ್ಸ್ ಟ್ರಾಗ್ಪಾನ್ ಎಂಬ ಪಕ್ಷಿ ಪ್ರಭೇದವನ್ನು ಕೂಡ ಕಾಣಬಹುದು. ಪೆಕ್‌ನಲ್ಲಿ ಆಚರಿಸಲಾಗುವ ಕೆಲವು ಹಬ್ಬಗಳು ಹೀಗಿವೆ: ಖುಥೊನ್ಯೆ, ಥುರಿನ್ಯೆ, ಟುರ್ಹಿನ್ಯೆ, ನ್ಗ್ಯುನ್ಯೆ, ಟುಖ್ಹುನ್ಯೆ ಮತ್ತು ಸುಖ್ಹ್ರುನ್ಯೆ.

ಹವಾಮಾನ

ಪೆಕ್ ವರ್ಷಪೂರ್ತಿ ಸಮಶೀತೋಷ್ಣ ಹವಾಮಾನವನ್ನು ಹೊಂದಿರುತ್ತದೆ. ಇಲ್ಲಿ ಹವಾಮಾನ ವೈಪರೀತ್ಯಗಳು ಕಂಡುಬರುವುದಿಲ್ಲ.

ಪ್ರವಾಸಕ್ಕೆ ಸೂಕ್ತ ಸಮಯ

ಬೇಸಿಗೆ ಕಾಲ ಪ್ರವಾಸಕ್ಕೆ ಸೂಕ್ತವಾದದ್ದು. ಈ ಸಮಯದಲ್ಲಿ ಹವಾಮಾನವು ಸಮಶೀತೋಷ್ಣತೆಯಿಂದಿರುತ್ತದೆಯಾದ್ದರಿಂದ ಪ್ರಕೃತಿ ಸೌಂದರ್ಯವನ್ನು ಸವಿಯಲು ಸುತ್ತಾಡಲು ಇದು ಸೂಕ್ತ ಸಮಯ. ಉಳಿದ ಕಾಲಗಳಲ್ಲಿ ಹವಾಮಾನವು ಸುತ್ತಾಟಕ್ಕೆ ಅನುಕೂಲಕರವಾಗಿರುವುದಿಲ್ಲ.

ಪೆಕ್ ಪ್ರಸಿದ್ಧವಾಗಿದೆ

ಪೆಕ್ ಹವಾಮಾನ

ಉತ್ತಮ ಸಮಯ ಪೆಕ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪೆಕ್

  • ರಸ್ತೆಯ ಮೂಲಕ
    ಪೆಕ್ ಹೆಚ್ಚಾಗಿ ರಸ್ತೆ ಮಾರ್ಗವನ್ನೇ ಅವಲಂಭಿಸಿದೆ. ಇದು ಸಹ ಕಡಿಮೆದರದಲ್ಲಿ ಪ್ರವಾಸಿಗರಿಗೆ ಲಭ್ಯವಿದೆ. ನಾಗಾಲ್ಯಾಂಡಿನ ಎಲ್ಲ ಭಾಗಗಳಿಂದ ಇಲ್ಲಿಗೆ ಬಸ್ ಸೌಲಭ್ಯವಿದೆ. ಸರಕಾರಿ ಮತ್ತು ಖಾಸಗಿ ಬಸ್ ಸೌಲಭ್ಯವಿರುವ್ಯದರಿಂದ ಪ್ರವಾಸಿಗರು ಟೂರಿಸ್ಟ್ ಬಸ್ಮ್ಸಗಳನ್ನು ಬುಕ್ ಮಾಡಿಕೊಳ್ಳಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    377 ಕಿಮೀ ದೂರದಲ್ಲಿರುವ ದಿಮಾಪುರ ರೈಲು ನಿಲ್ದಾಣವೇ ಇಲ್ಲಿಗೆ ಹತ್ತಿರದ ರೈಲುನಿಲ್ದಾಣ. ಪೆಕ್ ತಲುಪಲು ರೈಲು ಮಾರ್ಗ ಬಳಸುವ್ಯದರಿಂದ ಪ್ರಯಾಣದರ ದುಬಾರಿಯಾಗುವುದಿಲ್ಲ. ದಿಮಾಪುರದಿಂದ ಪೆಕ್‌ಗೆ ನಿಯಮಿತ ಬಸ್ ಸಂಚಾರವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪೆಕ್‌ನಲ್ಲಿ ವಿಮಾನನಿಲ್ದಾಣವಿಲ್ಲ. ದಿಮಾಪುರ್‌ನಲ್ಲಿರುವ ವಿಮಾನ ನಿಲ್ದಾಣವೇ ಇಲ್ಲಿಗೆ ಸಮೀಪದ ನಿಲ್ದಾಣ. ದಿಮಾಪುರ್ ನಿಲ್ದಾಣವು ಗುವಹಾಟಿ ಮತ್ತು ಕೊಲ್ಕತ್ತಾಗಳೊಂದಿಗೆ ಸಂಪರ್ಕ ಹೊಂದಿದೆ. ದಿಮಾಪುರ್ ನಿಲ್ದಾಣದಿಂದ ಪೆಕ್ 372 ಕಿಮೀ ದೂರದಲ್ಲಿದ್ದು ಇಲ್ಲಿಗೆ ತಲುಪಲು ಟ್ಯಾಕ್ಸಿ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat