Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಕ್ » ಹವಾಮಾನ

ಪೆಕ್ ಹವಾಮಾನ

ಬೇಸಿಗೆ ಕಾಲ ಪ್ರವಾಸಕ್ಕೆ ಸೂಕ್ತವಾದದ್ದು. ಈ ಸಮಯದಲ್ಲಿ ಹವಾಮಾನವು ಸಮಶೀತೋಷ್ಣತೆಯಿಂದಿರುತ್ತದೆಯಾದ್ದರಿಂದ ಪ್ರಕೃತಿ ಸೌಂದರ್ಯವನ್ನು ಸವಿಯಲು ಸುತ್ತಾಡಲು ಇದು ಸೂಕ್ತ ಸಮಯ. ಉಳಿದ ಕಾಲಗಳಲ್ಲಿ ಹವಾಮಾನವು ಸುತ್ತಾಟಕ್ಕೆ ಅನುಕೂಲಕರವಾಗಿರುವುದಿಲ್ಲ.

ಬೇಸಿಗೆಗಾಲ

ಮಾರ್ಚ್-ಮೇ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣಾಂಶವು 16 ರಿಂದ 31 ಡಿಗ್ರಿ ಸೆಲ್ಸಿಯಸ್‌ಗಳಷ್ಟಿರುತ್ತದೆ. ಇದು ಪ್ರವಾಸಕ್ಕೆ ತಕ್ಕ ಸಮಯ. ಮೇ ತಿಂಗಳ ಕೊನೆಯಲ್ಲಿ ಮಳೆಯಾಗುವ ಸಂಭವವಿರುತ್ತದೆ.

ಮಳೆಗಾಲ

ಪೆಕ್‌ನಲ್ಲಿ ಮಳೆಗಾಲ ದೀರ್ಘ ಅವಧಿಯದ್ದಾಗಿರುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಇಲ್ಲಿ ಮಳೆಗಾಲ. ಆಗಸ್ಟನಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಚಳಿಗಾಲ

ಡಿಸಂಬರ್- ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಚಳಿ ಹೆಚ್ಚಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಸೂರ್ಯಾಸ್ತದ ನಂತರ ಈ ಪ್ರದೇಶದಲ್ಲಿ ಚಳಿ ಹೆಚ್ಚಾಗುತ್ತದೆ.