Search
 • Follow NativePlanet
Share
ಮುಖಪುಟ » ಸ್ಥಳಗಳು» ಮೊಕೊಕ್ಚಂಗ್

ಮೊಕೊಕ್ಚೊಂಗ್ : ಏಓ ಆದಿವಾಸಿಗಳ ಆವಾಸಸ್ಥಾನ

6

ಮೊಕೊಕ್ಚೊಂಗ್‌ಗೆ ಭೇಟಿ ನೀಡದೆ ನಾಗಾಲ್ಯಾಂಡ್ ಪ್ರವಾಸವೇ ಅಪೂರ್ಣವಾಗುತ್ತದೆ. ಇಲ್ಲಿ ಏಓ ಆದಿವಾಸಿ ಪಂಗಡದವರನ್ನು ಕಾಣಬಹುದು. ಇದು ನಾಗಾಲ್ಯಾಂಡಿನ ಮೂರನೇ ಅತಿದೊಡ್ಡ ನಗರ. ಮೊಕೊಕ್ಚೊಂಗ್ ಪ್ರದೇಶವನ್ನು ರಾಜ್ಯದ ಮುಖ್ಯ ಬೌದ್ಧಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲಾಗಿದೆ. ಇದು ಸಮುದ್ರಮಟ್ಟದಿಂದ 1325 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶವು ಜುಳು ಜುಳು ಹರಿಯುವ ಝರಿಗಳಿಂದ, ಸುಂದರ ಬೆಟ್ಟಶ್ರೇಣಿಗಳಿಂದ ಆವೃತವಾಗಿದ್ದು ಪ್ರಕೃತಿಯು ಈ ಭೂಮಿಯನ್ನು ಸೌಂದರ್ಯದ ವರದೊಂದಿಗೆ ಹರಸಿದೆ. ಉತ್ತರ ಅಸ್ಸಾಂ ಮೊಕೊಕ್ಚೊಂಗ್‌ಗೆ ಸಮೀಪದಲ್ಲಿದೆ.

ಮೊಕೊಕ್ಚೊಂಗ್ ಕ್ರಿಸ್‌ಮಸ್, ಹೊಸ ವರ್ಷ ಮತ್ತು ಏಓ ಹಬ್ಬವಾದ ಮೊತ್ಸುನ ಸಂದರ್ಭದಲ್ಲಿ ಹೊಸ ರೂಪದಿಂದ ಕಂಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಗರದ ಚೌಕದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಉತ್ಸಾಹದಿಂದ ಮಧ್ಯರಾತ್ರಿಯವರೆಗೆ ಆಚರಿಸುವುದು ಸಂಪ್ರದಾಯವಾಗಿದೆ. ಜನರು ಇದರಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಮೊಕೊಕ್ಚೊಂಗ್‌ನಲ್ಲಿನ ಹಬ್ಬಗಳು- ನಿಮ್ಮ ಪ್ರವಾಸಕ್ಕೆ ಸಾಂಸ್ಕೃತಿಕ ಮೆರುಗನ್ನು ತಂದುಕೊಡುತ್ತದೆ.

ಮುಖ್ಯನಗರದಿಂದ ಒಂದೂವರೆ ಗಂಟೆ ಪ್ರಯಾಣದಷ್ಟು ದೂರದಲ್ಲಿರುವ ಚುಚ್ಯಿಮ್ಲಾಂಗ್‌ನಲ್ಲಿ ಮೌತ್ಸು ಹಬ್ಬದ ಆಚರಣೆ ನಡೆಯುತ್ತದೆ. ಇದು ಏಓ ಪಂಗಡದ ಹಬ್ಬವಾಗಿದ್ದು ಮೇ ತಿಂಗಳ ಮೊದಲ ವಾರದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ಪರಸ್ಪರ ಉಡುಗೊರೆಗಳನ್ನು ನೀಡಲಾಗುತ್ತದೆ, ಹೊಸ ಸಂಬಂಧಗಳನ್ನು ಬೆಸೆಯಲಾಗುತ್ತದೆ, ಹಳೆಯ ಸಂಬಂಧಗಳನ್ನು ನವೀಕರಿಸಲಾಗುತ್ತದೆ. ಬೆಟ್ಟದ ಮೇಲೆ ಹಸಿರಿನಿಂದ ಕಂಗೊಳಿಸುವ ಈ ಹಳ್ಳಿಯು ಹಬ್ಬದ ಆಚರಣೆಗೆ ಸೂಕ್ತ ಸ್ಥಳವಾಗಿದೆ.

ತ್ಸುಂಗ್ರೇಂ ಮೊಂಗ್ ಮೊಕೊಕ್ಚೊಂಗ್‌ನ ಮತ್ತೊಂದು ಪ್ರಸಿದ್ಧ ಹಬ್ಬ. ಇಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಶೇ೯೫%ಕ್ಕೂ ಹೆಚ್ಚು ಮಂದಿ ಆಚರಿಸುತ್ತಾರೆ. 19ನೇ ಶತಮಾನದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದವರಲ್ಲಿ ಏಓ ಪಂಗಡದವರು ಮೊದಲಿಗರು.

ಪ್ರವಾಸಕ್ಕೆ ಸೂಕ್ತ ಸಮಯ

ಅಕ್ಟೋಬರ್-ಮಾರ್ಚ್ ಪ್ರವಾಸಕ್ಕೆ ಸೂಕ್ತ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆದಿವಾಸಿ ಪಂಗಡದವರು ಹೊಸ ವರ್ಷವನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಈ ಸಮಯದಲ್ಲಿ ಕಾಣಬಹುದು.

ಮೊಕೊಕ್ಚಂಗ್ ಪ್ರಸಿದ್ಧವಾಗಿದೆ

ಮೊಕೊಕ್ಚಂಗ್ ಹವಾಮಾನ

ಉತ್ತಮ ಸಮಯ ಮೊಕೊಕ್ಚಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೊಕೊಕ್ಚಂಗ್

 • ರಸ್ತೆಯ ಮೂಲಕ
  ಮೊಕೊಕ್ಚೊಂಗ್ ರಾಷ್ಟ್ರೀಯ ಹೆದ್ದಾರಿ 61 ರ ಮೂಲಕ ಎಲ್ಲ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಕೊಹಿಮಾ, ಅಮ್ಗುರಿ, ವೋಖಾ, ಮೊಕೊಕ್ಚೊಂಗ್, ಚನ್ಗತೊಂನ್ಗ್ಯಾ ಮತ್ತು ತುಲಿ ಭಾಗಗಳನ್ನು ಈ ಹೆದ್ದಾರಿಯು ಸೇರಿಸುತ್ತದೆ. ನಾಗಾಲ್ಯಾಂಡ್ ರಾಜ್ಯ ಸಾರಿಗೆಯು ಕೊಹಿಮಾದಿಂದ ಮೊಕೊಕ್ಚೊಂಗ್‌ಗೆ ನಿಯಮಿತ ಬಸ್ಸು ಸೌಲಭ್ಯವನ್ನು ಕಲ್ಪಿಸಿದೆ. ಇದು 162 ಕಿಮೀಗಳ ದಾರಿ. ಇಲ್ಲಿ ಶೇರ್ ಟ್ಯಾಕ್ಸಿ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಲ್ಲಿಗೆ ಸಮೀಪದ ರೈಲು ನಿಲ್ದಾಣ ಅಸ್ಸಾಂನ ಮರಿಯಾನಿ. ಇಲ್ಲಿಂದ ದಿಬ್ರೂಗ್ರಾಹ್‌ಗೆ ಸಂಚರಿಸುವ ಎಲ್ಲಾ ರೈಲುಗಳು ಈ ಸ್ಥಳವನ್ನು ತಲುಪುತ್ತದೆ. ಮರಿಯಾನಿಯಿಂದ ಮೊಕೊಕ್ಚೊಂಗ್‌ಗೆ 85 ಕಿಮೀ. ಬಸ್ಸು ಮತ್ತು ಟ್ಯಾಕ್ಸಿ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮೊಕೊಕ್ಚೊಂಗ್‌ಗೆ ಸಮೀಪದ ವಿಮಾನನಿಲ್ದಾಣ 212 ಕಿಮೀ ದೂರದಲ್ಲಿರುವ ದಿಮಾಪುರ ವಿಮಾನ ನಿಲ್ದಾಣ ಮತ್ತು 105 ಕಿಮೀ ದೂರದಲ್ಲಿರುವ ಜೊರ್ಹತ್ ವಿಮಾನನಿಲ್ದಾಣ. ಇಲ್ಲಿಂದ ಗುವಹಾಟಿ ಮತ್ತು ಕೊಲ್ಕತ್ತಾಗಳಿಗೆ ಮತ್ತು ಇತರ ಸಮೀಪದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ನಿಯಮಿತ ವಿಮಾನ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
01 Dec,Wed
Return On
02 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Dec,Wed
Check Out
02 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Dec,Wed
Return On
02 Dec,Thu