ಮೊಕೊಕ್ಚೊಂಗ್‌ನ ಕೆಲವು ನಗರಗಳನ್ನು ನೋಡದೆ ಹಿಂತಿರುಗಿದರೆ ಪ್ರವಾಸ ಅಪೂರ್ಣವಾಗಿಬಿಡುತ್ತದೆ. ನೀವು ಏಓಗಳ ಹಳ್ಳಿಯನ್ನು ನೋಡಬೇಕೆಂದು ಬಯಸಿದಲ್ಲಿ ಚಂಗ್ತೊಂಗ್ಯಗೆ ಭೇಟಿ ನೀಡಲೇಬೇಕು. ಲಂಗ್ಪಾಂಗ್ಕೊಂಗ್ ಶ್ರೇಣಿಯ ಮೇಲಿರುವ ಈ ಹಳ್ಳಿ ಮೊಕೊಕ್ಚೊಂಗ್ ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ತ್ಸುಲ(ದಿಕು) ನದಿ ಮತ್ತು ಮೆಲಕ್ ನದಿ ಈ ಪಟ್ಟಣವನ್ನು ಹಾದು ಹೋಗುತ್ತದೆ. ಬೆಟ್ಟದ ಮೇಲಿನಿಂದ ಈ ನದಿಗಳ ನೋಟವನ್ನು ಕಾಣಬಹುದು.
ಇಲ್ಲಿನ ಕುತೂಹಲಕಾರಿ ಸಂಗತಿಯೆಂದರೆ ತ್ಸುಲ ನದಿಯಲ್ಲಿ ಕಚ್ಚಾತೈಲ ಹೊರಬರುತ್ತದೆ. ಸ್ಥಳೀಯರು ಇದನ್ನು ’ಮೆನೆಮ್ತ್ಸು’ ಎಂದು ಕರೆಯುತ್ತಾರೆ. ಪಕ್ಷಿವೀಕ್ಷಣೆ ಇಲ್ಲಿನ ಜನಪ್ರಿಯ ಚಟುವಟಿಕೆಗಳಲ್ಲಿ ಒಂದು. ಏಓ ಇಲ್ಲಿನ ಸ್ಥಳೀಯ ಭಾಷೆ. ರಾಷ್ಟ್ರೀಯ ಹೆದ್ದಾರಿ 61 ಈ ಪಟ್ಟಣದ ಮೂಲಕ ಹಾದು ಹೋಗುತ್ತದೆ. ಇದು ಚಂಗ್ತೊಂಗ್ಯವನ್ನು ಇಡೀ ಮೊಕೊಕ್ಚೊಂಗ್ ಜಿಲ್ಲೆಯೊಂದಿಗೆ ಬೆಸೆಯುತ್ತದೆ.